ಮುಂಬೈ: ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾ ಗಾಂಧಿಯವರ ಸಲಹೆಯ ಮೇರೆಗೆ ಆ ಪಕ್ಷವನ್ನು ವಿಸರ್ಜಿಸಿದ್ದರೆ, ಭಾರತವು ಈಗಿನದ್ದಕ್ಕಿಂತ ಐದು ದಶಕಗಳಷ್ಟು ಮುಂದೆ ಇರುತ್ತಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಬಡವರನ್ನು ಬಡತನದಲ್ಲಿ ಇರಿಸಲು ಹುಟ್ಟಿದೆ ಎಂಬ ಭಾವನೆ ಮೂಡಿಸಿದೆ ಎಂದ ಅವರು, ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರತರಲು ನಮ್ಮ ಸರ್ಕಾರಕ್ಕೆ ಸಾಧ್ಯವಾಗಿದೆ ಎಂದರು.
ಮುಂಬೈನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಹಿಂದೆ ಭಾರತೀಯರ ಸಾಮರ್ಥ್ಯಗಳನ್ನು ನಂಬದ ಸರ್ಕಾರಗಳು ಇದ್ದವು. ಭಾರತೀಯರನ್ನು ಕೆಂಪು ಕೋಟೆಯಿಂದ ಸೋಮಾರಿಗಳು ಎಂದು ಕರೆದ ಪ್ರಧಾನಿಗಳನ್ನು ನಾನು ನೋಡಿದ್ದೇನೆ. ಅಂತಹ ಮನಸ್ಥಿತಿಯ ಪ್ರಧಾನಿಗಳಿಗೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಭಾರತವನ್ನು ಅಭಿವೃದ್ಧಿಪಡಿಸಿ, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಿದ್ದರೆ, ದೇಶವು 5 ದಶಕಗಳಿಂದ ಮುಂದಕ್ಕೆ ಹೋಗುತ್ತಿತ್ತು ಎಂದಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅಸಾಧ್ಯ ಎಂದು ಹಲವರು ಭಾವಿಸಿದ್ದರು, ಆದರೆ 500 ವರ್ಷಗಳ ಹೋರಾಟ ಕೊನೆಗೂ ಸಾಕಾರಗೊಂಡಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.