ನವದೆಹಲಿ : ಭಾರತ ಮತ್ತು ಜಪಾನ್ ನಡುವಿನ ಮಿಲಿಟರಿ ಸಮರಾಭ್ಯಾಸ “ಧರ್ಮ ಗಾರ್ಡಿಯನ್ 2019” ಅಕ್ಟೋಬರ್ 19 ರಿಂದ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ. ನವೆಂಬರ್ 2 ರಂದು ಸಮರಭ್ಯಾಸ ಅಂತ್ಯಗೊಳ್ಳಲಿದೆ.
ಭಾರತೀಯ ಸೇನೆ ಮತ್ತು ಜಪಾನೀಸ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ಸ್ನ ಒಟ್ಟು 25 ಮಂದಿ ಸೈನಿಕರು ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಭಯ ದೇಶಗಳು ಎದುರಿಸುತ್ತಿರುವ ಜಾಗತಿಕ ಸಮಸ್ಯೆಯಾಗಿ ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿನ ಅರಣ್ಯಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿನ ಕಾರ್ಯಚರಣೆಯ ಅಭ್ಯಾಸಗಳನ್ನು ಈ ಸಮರಭ್ಯಾಸದ ವೇಳೆ ಉಭಯ ದೇಶಗಳ ಸೈನಿಕರು ನಡೆಸಲಿದ್ದಾರೆ.
ಈ ಮಿಲಿಟರಿ ಸಮರಭ್ಯಾಸ ಜಪಾನ್ ಮತ್ತು ಭಾರತದ ನಡುವಿನ ರಕ್ಷಣಾ ಸಹಕಾರವನ್ನು ವೃದ್ಧಿಸಲಿದೆ, ಇದರಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಅಭಿವೃದ್ಧಿಯಾಗಲಿದೆ.
ಧರ್ಮ ಗಾರ್ಡಿಯನ್ ಸಮರಭ್ಯಾಸ ವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದ್ದು, 2018ರಿಂದ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.