ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯಸ್ಥೆ ಕುಸಿಯುತ್ತಿದೆ. ದಿನಕ್ಕೆರಡು ಬೆಚ್ಚಿಬೀಳಿಸುವ ಅಪರಾಧ ಕೃತ್ಯಗಳು ನಡೆಯುತ್ತಿದೆ. ಆದರೂ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗದೆ ರಾಜಕೀಯ ಮಾಡುವುದರಲ್ಲೇ ನಿರತವಾಗಿದೆ.
ಕಾಂಗ್ರೆಸ್ ಆಡಳಿತದಲ್ಲಿ ನಡೆಯುತ್ತಿರುವ ಅವರಾಧ ಕೃತ್ಯಗಳನ್ನು ಬಿಜೆಪಿ ಖಂಡಿಸಿದ್ದು, ಸಿದ್ದರಾಮಯ್ಯ ಸರ್ಕಾರದ ದುರಾಡಳಿತವೇ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಕುಸಿಯಲು ಕಾರಣ ಎಂದಿದೆ.
ಎಕ್ಸ್ ಪೋಸ್ಟ್ ಮಾಡಿರುವ ಬಿಜೆಪಿ, “ಅಪರಾಧಿಗಳಿಗೆ ಶ್ರೀರಕ್ಷೆ – ಅಮಾಯಕರಿಗೆ ಶಿಕ್ಷೆ . ಇದೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ ಧ್ಯೇಯ. ರಕ್ತ ಸಿಕ್ತ “ಕೈ”ನಿಂದ ಕರ್ನಾಟಕದ ಕಾನೂನು ಸುವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಪರಾಧ ಕೃತ್ಯಗಳು ಜರುಗಿವೆ” ಎಂದಿದೆ.
ನೇಹಾ ಹಿರೇಮಠ್ ಕೊಲೆ, ಜೈನ ಮುನಿ ಹತ್ಯೆ ಪ್ರಕರಣ, ಕೊಡಗಿನ ಮೀನಾ ರುಂಡ ಕಡಿದ ಪ್ರಕರಣ, ಅಂಜಲಿ ಅಂಬಿಗೇರ್ ಪ್ರಕರಣ, ಹಾನಗಲ್ ಹಿಂದೂ ಯುವಕರ ಹತ್ಯೆ ಪ್ರಕರಣ, ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ, ಕಡಬದಲ್ಲಿ ವಿದ್ಯಾರ್ಥಿನಿಯರ ಮೇಲೆ ಆಸಿಡ್ ಎರಚಿದ ಪ್ರಕರಣ, ಹಾನಗಲ್ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ರಾಜ್ಯ ಕಾಂಗ್ರೆಸ್ ಆಡಳಿತದ ದುರಾಡಳಿಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅಪರಾಧಿಗಳಿಗೆ ಶ್ರೀರಕ್ಷೆ – ಅಮಾಯಕರಿಗೆ ಶಿಕ್ಷೆ . ಇದೇ @INCKarnataka ಸರ್ಕಾರದ ಆಡಳಿತ ಧ್ಯೇಯ.
ರಕ್ತ ಸಿಕ್ತ "ಕೈ"ನಿಂದ ಕರ್ನಾಟಕದ ಕಾನೂನು ಸುವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಪರಾಧ ಕೃತ್ಯಗಳು ಜರುಗಿವೆ.#CongressFailsKarnataka pic.twitter.com/0g1xzirN9h
— BJP Karnataka (@BJP4Karnataka) May 18, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.