News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ಏನು ವಾಗ್ದಾನ ಮಾಡುತ್ತಾರೋ ಅದನ್ನು ಸಾಧಿಸಿ ತೋರಿಸುತ್ತಾರೆ : ರಾಜನಾಥ್ ಸಿಂಗ್

ನವದೆಹಲಿ: ಪ್ರಧಾನಿ ಮೋದಿ ತಾವು ಏನು ಮಾಡಬೇಕೆಂದು ವಾಗ್ದಾನ ಮಾಡುತ್ತಾರೋ ಅದನ್ನು ಸಾಧಿಸಿ ತೋರಿಸುತ್ತಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯಂದು ಅಟಲ್ ಭೂಜಲ್ ಯೋಜನೆಯ ಉದ್ಘಾಟನೆಯ ಸಮಾರಂಭವನ್ನು ಉದ್ದೇಶಿಸಿ...

Read More

ದೇಶದ ಮೊದಲ ಲಾಂಗ್ ರೇಂಜ್ ಸಿಎನ್‌ಜಿ ಬಸ್ ಕಾರ್ಯಾರಂಭ

ನವದೆಹಲಿ: ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು ದೇಶದ ಮೊದಲ ಸಿಎನ್‌ಜಿ ಬಹು ಅಂತರದ ಸಿಎನ್ ಜಿ ಸಿಲಿಂಡರ್‌ಗಳನ್ನು ಅಳವಡಿಸಿರುವ  ಸಿಎನ್‌ಜಿ ಬಸ್ ಅನ್ನು ಅನಾವರಣಗೊಳಿಸಿದರು. ಈ ಬಸ್ ಸಿಂಗಲ್ ಫಿಲ್(ಏಕ ಮರುಪೂರಣ)ದಲ್ಲಿ  ಸುಮಾರು ಒಂದು ಸಾವಿರ ಕಿಲೋಮೀಟರ್ ಪ್ರಯಾಣಿಸುತ್ತದೆ. ಸ್ವಚ್ಛ ಪರಿಸರ...

Read More

ಯುಪಿಯ ರಾಂಪುರದಲ್ಲಿ ನಷ್ಟ ಭರಿಸುವಂತೆ 28 ಗಲಭೆಕೋರರಿಗೆ ನೋಟಿಸ್ ಜಾರಿ

ರಾಂಪುರ: ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ ನಡೆದ ಗಲಭೆಯ ಸಂದರ್ಭದಲ್ಲಿ ಉಂಟಾದ ಹಾನಿಗಳನ್ನು ಸರಿಪಡಿಸಲು ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ರಾಂಪುರದಲ್ಲಿ 28 ಜನರಿಗೆ ನೋಟಿಸ್ ಕಳುಹಿಸಿಕೊಡಲಾಗಿದೆ. ಆಸ್ತಿಪಾಸ್ತಿ ನಷ್ಟವನ್ನು ಭರಿಸುವಂತೆ ಸೂಚನೆಯನ್ನು ನೀಡಲಾಗಿದೆ. ಒಟ್ಟು ರೂ 14.86 ಲಕ್ಷವನ್ನು...

Read More

ಸೆಮಿ-ಕ್ಲೋಸ್ಡ್ ಪ್ರಿಪೇಯ್ಡ್ ಪೇಮೆಂಟ್ ಆರಂಭಿಸಿದ ಆರ್­ಬಿಐ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಹೊಸ ಸೆಮಿ-ಕ್ಲೋಸ್ಡ್ ಪ್ರಿಪೇಯ್ಡ್ ಪೇಮೆಂಟ್ ಇನ್­ಸ್ಟ್ರುಮೆಂಟ್ (ಪಿಪಿಐ) ಅನ್ನು ಪರಿಚಯಿಸಿದೆ, ಇದನ್ನು 10,000 ರೂ.ಗಳ ಮಿತಿಯವರೆಗೆ ಸರಕು ಮತ್ತು ಸೇವೆಗಳ ವಹಿವಾಟಿಗೆ ಬಳಸಬಹುದಾಗಿದೆ. ಇನ್­ಸ್ಟ್ರುಮೆಂಟ್­ನ ಲೋಡಿಂಗ್ ಸೌಲಭ್ಯವನ್ನು ಬ್ಯಾಂಕ್ ಖಾತೆಯಿಂದ ಮಾತ್ರ ಲಿಂಕ್ ಮಾಡಲಾಗುತ್ತದೆ. ಈ ತಿಂಗಳ...

Read More

ಪುತ್ತೂರಿನಲ್ಲಿ ಡಿ. 29 ರಂದು ‘ಭಜನಾ ಸಂಭ್ರಮ 2019’ ಸಮಾವೇಶ

ಪುತ್ತೂರು: ಡಿಸೆಂಬರ್ 29, ಭಾನುವಾರ ಬೆಳಗ್ಗೆ 9.00 ರಿಂದ ರಾತ್ರಿ 7.30 ರವರೆಗೆ, ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ  ಮಂಗಳೂರು ವಿಭಾಗದ (ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳ) ಸಾವಿರಕ್ಕೂ ಮಿಕ್ಕಿದ ಭಜನಾ ಮಂಡಳಿಗಳ ‘ಭಜನಾ ಸಂಭ್ರಮ 2019’ ಸಮಾವೇಶವನ್ನು ಆಯೋಜಿಸಲಾಗಿದೆ....

Read More

166 ವರ್ಷಗಳಲ್ಲೇ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದ ರೈಲು ಅಪಘಾತ

ನವದೆಹಲಿ: ತನ್ನ 166 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು 2018-19ರ ಆರ್ಥಿಕ ವರ್ಷವನ್ನು ತನ್ನ ಸುರಕ್ಷಿತಾ ವರ್ಷವೆಂದು ವರದಿ ಮಾಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೈಲ್ವೇ ಪ್ರಯಾಣಿಕರ ಸಾವುಗಳು ಅತೀ ವಿರಳವಾಗಿದೆ. ಈ ಮೂಲಕ ರೈಲ್ವೇಯು ಸುರಕ್ಷತಾ...

Read More

ನೆಲಮಂಗಲದಲ್ಲಿರುವುದು ಡೆಟೆನ್ಷನ್ ಸೆಂಟರ್ ಅಲ್ಲ, ಅಪರಾಧ ಎಸಗಿದ ವಿದೇಶಿಗರನ್ನು ಇಡುವ ಸೌಲಭ್ಯ: ಬೊಮ್ಮಾಯಿ

ಬೆಂಗಳೂರು: ನೆಲಮಂಗಲದಲ್ಲಿ ಡಿಟೆನ್ಷನ್ ಸೆಂಟರ್ ನಿರ್ಮಾಣವಾಗಿದೆ ಎಂದು ಊಹಾಪೋಹಗಳನ್ನು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಳ್ಳಿ ಹಾಕಿದ್ದಾರೆ. ಅಪರಾಧಗಳನ್ನು ಎಸಗಿರುವ ನೈಜೀರಿಯಾದ ನಾಗರಿಕರನ್ನು ಮತ್ತು ವಲಸಿಗರನ್ನು ಇಡಲು ಮಾಡಿರುವ ವ್ಯವಸ್ಥೆಯಷ್ಟೇ ಎಂದಿದ್ದಾರೆ. ಈ ಕಟ್ಟಡ ಮೊದಲು ಸಮಾಜ ಕಲ್ಯಾಣ...

Read More

ಕಾಗದ ರಹಿತವಾಗುತ್ತಿದೆ ರೈಲ್ವೇ : ಸಿದ್ಧಗೊಂಡಿವೆ 72 ಸಾವಿರಕ್ಕೂ ಹೆಚ್ಚು ಇ-ಫೈಲ್ಸ್

ನವದೆಹಲಿ: ರೈಲ್ವೆ ಸಚಿವಾಲಯವು ಸಂಪೂರ್ಣ ಕಾಗದರಹಿತವಾಗುವ ನಿಟ್ಟಿನಲ್ಲಿ  ಮತ್ತು ಎಲ್ಲಾ ಕೈಬರಹದ ಫೈಲ್‌ಗಳನ್ನು ಇ-ಫೈಲ್‌ಗಳಾಗಿ ಪರಿವರ್ತಿಸುವ ಸಲುವಾಗಿ ಮೆಗಾ ಯೋಜನೆಯನ್ನು ಹೊರತಂದಿದೆ. ಮೊದಲ ಹಂತದಲ್ಲಿ ಸಚಿವಾಲಯವು 72,000 ಕ್ಕೂ ಹೆಚ್ಚು ಇ-ಫೈಲ್‌ಗಳನ್ನು ಸಿದ್ಧಪಡಿಸಿದೆ. ರೈಲ್ವೆ ಸಚಿವಾಲಯದ 50,000 ಕ್ಕೂ ಹೆಚ್ಚು ಉದ್ಯೋಗಿಗಳು...

Read More

ಕಾಶ್ಮೀರ ಸಹಜ ಸ್ಥಿತಿಗೆ : ಹೆಚ್ಚುವರಿಯಾಗಿ ನಿಯೋಜಿಸಲ್ಪಟ್ಟ ಯೋಧರನ್ನು ಹಿಂಪಡೆಯುತ್ತಿದೆ ಕೇಂದ್ರ

ನವದೆಹಲಿ: 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಾಲ್ಕು ತಿಂಗಳ ಬಳಿಕ, ಕೇಂದ್ರ ಸರ್ಕಾರವು ಕಣಿವೆ ರಾಜ್ಯದಲ್ಲಿ ನಿಯೋಜನೆಗೊಂಡಿರುವ ಸಾವಿರಾರು ಯೋಧರನ್ನು ನಿಧಾನಕ್ಕೆ ಹಿಂಪಡೆಯಲು ಆರಂಭಿಸಿದೆ. 72 ಕಂಪನಿಗಳನ್ನು ಅಥವಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಸುಮಾರು...

Read More

ರೋಹ್ಟಾಂಗ್ ಪಾಸ್ ಅಡಿಯಲ್ಲಿನ ಸುರಂಗ ಮಾರ್ಗಕ್ಕೆ ವಾಜಪೇಯಿ ಹೆಸರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಕಾರ್ಯತಾಂತ್ರಿಕ ಮಹತ್ವದ ರೋಹ್ಟಾಂಗ್ ಪಾಸ್ ಅಡಿಯಲ್ಲಿನ ಸುರಂಗ ಮಾರ್ಗಕ್ಕೆ ನಾಮಕರಣ ಮಾಡಲು ಅನುಮೋದನೆ ನೀಡಿದೆ....

Read More

Recent News

Back To Top