ನವದೆಹಲಿ: ಪ್ರಧಾನಿ ಮೋದಿ ತಾವು ಏನು ಮಾಡಬೇಕೆಂದು ವಾಗ್ದಾನ ಮಾಡುತ್ತಾರೋ ಅದನ್ನು ಸಾಧಿಸಿ ತೋರಿಸುತ್ತಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯಂದು ಅಟಲ್ ಭೂಜಲ್ ಯೋಜನೆಯ ಉದ್ಘಾಟನೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ರೋಹ್ಟಾಂಗ್ ಸುರಂಗವನ್ನು ನಿರ್ಮಿಸಲು ದಿವಂಗತ ನಾಯಕ ವಾಜಪೇಯಿ ಅವರು ಮಾಡಿದ ಪ್ರಯತ್ನವನ್ನು ಸಿಂಗ್ ನೆನಪಿಸಿಕೊಂಡರು.
ಕೇಂದ್ರ ಸಚಿವ ಸಂಪುಟದಲ್ಲಿರುವ ಎಲ್ಲ ಮಂತ್ರಿಗಳ ಪೈಕಿ ತಾನು ಪ್ರಧಾನಮಂತ್ರಿಯವರನ್ನು ದೀರ್ಘಕಾಲದಿಂದ ನೋಡುತ್ತಾ ಬಂದಿದ್ದೇನೆ, ಅವರೇನು ವಾಗ್ದಾನ ಮಾಡುತ್ತಾರೋ ಅದನ್ನು ಸಾಧಿಸಿ ತೋರಿಸುತ್ತಾರೆ. ಇದು ಅವರ ದೊಡ್ಡ ಗುಣ ಎಂದಿದ್ದಾರೆ.
ಯಾವುದರಲ್ಲಿ ದೇಶ ಹಿಂದೆ ಬಿದ್ದಿತ್ತೋ ಅದರಲ್ಲಿ ಮುಂದೆ ಬರುವಂತೆ ಮೋಡಿ ಮಾಡಿದ್ದಾರೆ ಎಂದಿದ್ದಾರೆ.
“ರೋಹ್ಟಕ್ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಮಾಜಿ ಪ್ರಧಾನಿ ವಾಜಪೇಯಿ ಅವರು ನೀಡಿದ ಕೊಡುಗೆಯನ್ನು ಅಪಾರವಾಗಿ ಶ್ಲಾಘಿಸಿದ ಸಿಂಗ್ ಅವರು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಬಿಆರ್ಒ ಅತ್ಯದ್ಭುತವಾದ ರೀತಿಯಲ್ಲಿ ಸುರಂಗವನ್ನು ನಿರ್ಮಾಣ ಮಾಡಿದೆ. ಇದಕ್ಕಾಗಿ ರೂ 4 ಸಾವಿರ ಕೋಟಿಗಳನ್ನು ನಿಗದಿಪಡಿಸಲಾಗಿತ್ತು, ಆದರೆ ಬಿಆರ್ಒ ಇದನ್ನು 1 ಸಾವಿರ ಕೋಟಿ ಕಡಿಮೆ ವೆಚ್ಚದಲ್ಲಿ ನಿರ್ಮಿಸಿದೆ” ಎಂದರು.
ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಸುರಂಗವು ಮಹತ್ವದ್ದಾಗಿದೆ ಮತ್ತು ಲೇಹ್ ಮತ್ತು ಮನಾಲಿ ನಡುವಿನ ಅಂತರವನ್ನು ಇದು 46 ಕಿ.ಮೀ.ವರೆಗೆ ಕಡಿಮೆಗೊಳಿಸುತ್ತದೆ.
ಅಟಲ್ ಭೂಜಲ್ ಯೋಜನೆ ಮತ್ತು ಅಟಲ್ ಸುರಂಗದ ಉಡಾವಣೆಯನ್ನು ವಾಜಪೇಯಿಗೆ ಸಲ್ಲಿಸಿದ ವಿನಮ್ರ ಗೌರವ ಎಂದು ಬಿಜೆಪಿ ಮುಖಂಡರು ಬಣ್ಣಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.