ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಕಾರ್ಯತಾಂತ್ರಿಕ ಮಹತ್ವದ ರೋಹ್ಟಾಂಗ್ ಪಾಸ್ ಅಡಿಯಲ್ಲಿನ ಸುರಂಗ ಮಾರ್ಗಕ್ಕೆ ನಾಮಕರಣ ಮಾಡಲು ಅನುಮೋದನೆ ನೀಡಿದೆ.
ಸುರಂಗದ ಮರುನಾಮಕರಣ ಕಾರ್ಯವು ಇಂದು ವಾಜಪೇಯಿ ಅವರ 95 ನೇ ಜನ್ಮ ದಿನಾಚರಣೆಯಂದು ನಡೆಯಲಿದೆ.
ರೋಹ್ಟಾಂಗ್ ಪಾಸ್ ಕೆಳಗೆ ಕಾರ್ಯತಾಂತ್ರಿಕ ಸುರಂಗವನ್ನು ನಿರ್ಮಿಸುವ ನಿರ್ಧಾರವನ್ನು 2000ರ ಜೂನ್ 3 ರಂದು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ತೆಗೆದುಕೊಳ್ಳಲಾಯಿತು. ಸುರಂಗದ ದಕ್ಷಿಣ ಧ್ರುವದ ಪ್ರವೇಶ ರಸ್ತೆಗೆ ಅಡಿಪಾಯವನ್ನು 2002ರ ಮೇ 26 ರಂದು ಹಾಕಲಾಯಿತು.
8.8 ಕಿಲೋಮೀಟರ್ ಉದ್ದದ ಈ ಸುರಂಗವು 3,000 ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ಸುರಂಗವಾಗಿದೆ.
ಇದು ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46 ಕಿಲೋಮೀಟರ್ಗಳಷ್ಟು ಕಡಿಮೆ ಮಾಡುತ್ತದೆ ಮತ್ತು ಸಾರಿಗೆ ವೆಚ್ಚದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಉಳಿಸುತ್ತದೆ. ಇದು 10.5 ಮೀಟರ್ ಅಗಲದ ಸಿಂಗಲ್ ಟ್ಯೂಬ್ ಬೈ-ಲೇನ್ ಸುರಂಗವಾಗಿದ್ದು, ಪ್ರಧಾನ ಸುರಂಗದಲ್ಲಿಯೇ ಅಗ್ನಿ ನಿರೋಧಕ ತುರ್ತು ನಿರ್ಗಮನ ಸುರಂಗವನ್ನು ನಿರ್ಮಿಸಲಾಗಿದೆ.
ಕಾರ್ಯತಾಂತ್ರಿಕವಾಗಿ ಮಹತ್ವದ ಈ ಸುರಂಗವು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಇದು ಹಿಮಾಚಲ ಪ್ರದೇಶ ಮತ್ತು ಲಡಾಖ್ನ ದೂರದ ಗಡಿ ಪ್ರದೇಶಗಳಿಗೆ ಎಲ್ಲಾ ಹವಾಮಾನದ ಸಂಪರ್ಕವನ್ನು ಒದಗಿಸುತ್ತದೆ. ಪ್ರಸ್ತುತ ಚಳಿಗಾಲದಲ್ಲಿ ಸುಮಾರು ಆರು ತಿಂಗಳ ಕಾಲ ಈ ಭಾಗವು ದೇಶದ ಉಳಿದ ಭಾಗಗಳಿಂದ ಸಂಪರ್ಕವನ್ನು ಕಡಿದುಕೊಂಡಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.