News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೆಂಗಳೂರು: ಕೆಎಸ್‌ಆರ್‌ಟಿಸಿ ನಿರುಪಯುಕ್ತ ಬಸ್ಸುಗಳನ್ನು ಬಳಸಿ ಶೌಚಾಲಯ ನಿರ್ಮಾಣ

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಹಳೆಯ, ನಿರುಪಯುಕ್ತ ಎಂದೆನಿಸಿದ ಬಸ್ಸುಗಳನ್ನು ಬಳಕೆ ಮಾಡಿ ನಿರ್ಮಿಸಲಾಗಿರುವ ಸುಸಜ್ಜಿತ ‘ಸ್ತ್ರೀ ಶೌಚಾಲಯ’ ವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಯೋಜನೆಯ ಯಶಸ್ವಿ...

Read More

ಜೆಇಇ-ಮೇನ್ಸ್ , ನೀಟ್‌ ಪರೀಕ್ಷೆಗೆ 14 ಲಕ್ಷ‌ ವಿದ್ಯಾರ್ಥಿಗಳಿಂದ ಪ್ರವೇಶ ಪತ್ರ ಡೌನ್‌ಲೋಡ್

  ನವದೆಹಲಿ: ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಾದ ಜೆಇಇ-ಮೇನ್ಸ್ ಮತ್ತು ನೀಟ್‌ಗೆ ಈಗಾಗಲೇ 14 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ‌ ಹಿನ್ನೆಲೆ ಎರಡು...

Read More

ಕೊಡಗು ಮೂಲದ ಲೆ. ಕಮಾಂಡರ್ ಯುಎಸ್ ನೌಕಾಯುದ್ಧ ತರಬೇತಿ ಕಾಲೇಜಿಗೆ ಭಾರತೀಯ ಪ್ರತಿನಿಧಿ

ವಾಷಿಂಗ್ಟನ್: ಅಮೆರಿಕಾದ ಪ್ರತಿಷ್ಠಿತ ನೌಕಾಯುದ್ಧ ತರಬೇತಿ ಕಾಲೇಜಿಗೆ ಭಾರತೀಯ ಪ್ರತಿನಿಧಿಯಾಗಿ ಕೊಡಗು ಮೂಲದ ಲೆ. ಕಮಾಂಡರ್ ಮುಕ್ಕಾಟಿರ ಸೂರಜ್ ಅಯ್ಯಪ್ಪ ಅವರು ಆಯ್ಕೆಯಾಗಿದ್ದಾರೆ. ಅಮೆರಿಕಾ ದೇಶದಲ್ಲಿ ನಡೆಯಲಿರುವ ನೌಕಾಯುದ್ಧ ಸಿಬ್ಬಂದಿ‌ಗಳ ತರಬೇತಿಯಲ್ಲಿ 52 ದೇಶಗಳ ಅಧಿಕಾರಿಗಳು ಆಯ್ಕೆಯಾಗಿದ್ದು, ಅವರಲ್ಲಿ ಭಾರತದ ಪ್ರತಿನಿಧಿಯಾಗಿ...

Read More

ನೀತಿ ಆಯೋಗದಿಂದ ರಫ್ತು ಸಿದ್ಧತೆ ಸೂಚ್ಯಂಕ 2020 ಬಿಡುಗಡೆ: ಗುಜರಾತ್‌ ಪ್ರಥಮ

ನವದೆಹಲಿ: ನೀತಿ ಆಯೋಗ ಬುಧವಾರ ಬಿಡುಗಡೆ ಮಾಡಿರುವ ‘ರಫ್ತು ಸಿದ್ಧತೆ ಸೂಚ್ಯಂಕ 2020’ ರಲ್ಲಿ ಗುಜರಾತ್ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದ್ದು ನಂತರದಲ್ಲಿ ಕ್ರಮವಾಗಿ ಮಹಾರಾಷ್ಟ್ರ ಮತ್ತು ತಮಿಳುನಾಡುಗಳು ಸ್ಥಾನ ಪಡೆದಿವೆ. ರಫ್ತು ಮಾಡಲು ಅಗತ್ಯವಿರುವ ವ್ಯವಸ್ಥೆ, ಮೂಲ ಸೌಕರ್ಯ‌ಗಳ ಆಧಾರದಲ್ಲಿ ಈ...

Read More

ತಮ್ಮ ನಾಯಕರಿಗಿಂತ ಮೋದಿ ಆಡಳಿತವನ್ನೇ ಬೆಸ್ಟ್ ಎಂದ ಚೀನೀಯರು: ಗ್ಲೋಬಲ್ ಟೈಮ್ಸ್ ಸಮೀಕ್ಷೆ

ಬೀಜಿಂಗ್: ಕೊರೋನಾ ವೈರಸ್ ಸಂಕಷ್ಟ, ಚೀನಾ ಜೊತೆಗಿನ ಲಡಾಕ್ ಸಂಘರ್ಷ ಇವೆಲ್ಲವುಗಳಿಂದಾಗಿ ಚೀನಾ ಜೊತೆಗಿನ ಭಾರತದ ಸಂಬಂಧ ಹಳಸಿದೆ. ಕುತಂತ್ರಿ ಚೀನಾಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ನಮೋ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಜಾರಿಗೆ ತಂದಿರುವುದು ಎಲ್ಲರಿಗೂ ತಿಳಿದಿರುವ...

Read More

ಎನ್‌ಸಿಸಿ ಕೆಡೆಟ್‌ಗಳಿಗೆ ಆನ್‌ಲೈನ್‌ ತರಬೇತಿ ನೀಡುವ ಆ್ಯಪ್ ಬಿಡುಗಡೆ

  ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಡೈರೆಕ್ಟರೇಟ್ ಜನರಲ್ ನ್ಯಾಷನಲ್ ಕೆಡೆಟ್ ಕಾಪ್ಸ್ (ಡಿಜಿಎನ್‌ಸಿಸಿ) ಮೊಬೈಲ್ ಟ್ರೈನಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಿದರು. ದೇಶಾದ್ಯಂತ ಎನ್‌ಸಿಸಿ ಕೆಡೆಟ್‌ಗಳಿಗೆ ಆನ್‌ಲೈನ್ ತರಬೇತಿ ನೀಡಲು ಆ್ಯಪ್ ಸಹಾಯ ಮಾಡುತ್ತದೆ ಎಂದು ಅಧಿಕೃತ ಹೇಳಿಕೆ ಗುರುವಾರ...

Read More

ದಕ್ಷಿಣ ಕನ್ನಡ, ಉಡುಪಿ: ಉಭಯ ಜಿಲ್ಲೆಗಳ ಒಣಕಸದಿಂದ ತಯಾರಾಗಲಿದೆ ವಿದ್ಯುತ್

ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಒಣಕಸವನ್ನು ಬಳಸಿ ಸುಮಾರು 5 ಮೆಗಾ ವ್ಯಾಟ್ ಗಳಷ್ಟು ವಿದ್ಯುತ್ ತಯಾರಿಸಲು ಪೂರಕವಾದ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಕರ್ನಾಟಕ ರಾಜ್ಯ ವಿದ್ಯುತ್ ನಿಗಮ (ಕೆಪಿಸಿಎಲ್) ಉಭಯ ಜಿಲ್ಲೆಗಳಲ್ಲಿ ಪ್ರತಿ...

Read More

ಎಸ್-400 ಆ್ಯಂಟಿ ಏರ್‌ ಸಿಸ್ಟಮ್ ಅನ್ನು 2021ರ ಅಂತ್ಯದ ವೇಳೆಗೆ ಭಾರತಕ್ಕೆ ಪೂರೈಸಲಿದೆ ರಷ್ಯಾ

  ನವದೆಹಲಿ: ರಷ್ಯಾದ ಎಸ್ -400 ಆ್ಯಂಟಿ ಏರ್‌ ಸಿಸ್ಟಮ್ ವ್ಯವಸ್ಥೆಯ ಮೊದಲ ರೆಜಿಮೆಂಟ್ ಅನ್ನು ಮುಂದಿನ ವರ್ಷದ ಅಂತ್ಯದ ವೇಳೆಗೆ ಭಾರತಕ್ಕೆ ತಲುಪಿಸುವ ಸಾಧ್ಯತೆಯಿದೆ ಎಂದು ರಷ್ಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗತ್ಯವಿದ್ದಲ್ಲಿ, ಹೆಚ್ಚಿನ ಬ್ಯಾಚ್‌ಗಳ ವಿತರಣಾ ಅವಧಿಯನ್ನು ಕಡಿತಗೊಳಿಸಬಹುದು ಎಂದು...

Read More

ಐರ್ಲೆಂಡ್‌ನಲ್ಲಿ ಉದ್ಘಾಟನೆಗೊಂಡಿದೆ ಮೊದಲ ಹಿಂದೂ ದೇಗುಲ

ಡಬ್ಲಿನ್: ಐರ್ಲೆಂಡ್‌ ಗಣರಾಜ್ಯದಲ್ಲಿ ವಾಸಿಸುತ್ತಿರುವ ಹಿಂದೂ ಸಮುದಾಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರದ ರಾಜಧಾನಿ ಡಬ್ಲಿನ್ ಉಪನಗರದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ದೇವಾಲಯವನ್ನು ಅಧಿಕೃತವಾಗಿ ತೆರೆಯಲಾಗಿದೆ. ಈ ದೇವಾಲಯವು ಡಬ್ಲಿನ್ ನಗರ ಕೇಂದ್ರದಿಂದ ನೈರುತ್ಯಕ್ಕೆ ಆರು ಕಿಲೋಮೀಟರ್ ದೂರದಲ್ಲಿರುವ ವಾಕಿನ್‌ಸ್ಟೌನ್‌ನಲ್ಲಿದೆ ಮತ್ತು...

Read More

ನವೆಂಬರ್ 19-21ರವರೆಗೆ ನಡೆಯಲಿದೆ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

ಬೆಂಗಳೂರು: ನವೆಂಬರ್ ತಿಂಗಳ 19 ರಿಂದ 21 ರವರೆಗೆ ಬೆಂಗಳೂರು ಟೆಕ್ ಸಮಿಟ್ (ಬೆಂಗಳೂರು ತಂತ್ರಜ್ಞಾನ ಶೃಂಗಸಭೆ) ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರು ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಪ್ರತಿನಿಧಿಗಳ ಜೊತೆಗೆ ವರ್ಚುವಲ್‌ ಸಭೆ ನಡೆಸಿದ...

Read More

Recent News

Back To Top