ಬೀಜಿಂಗ್: ಕೊರೋನಾ ವೈರಸ್ ಸಂಕಷ್ಟ, ಚೀನಾ ಜೊತೆಗಿನ ಲಡಾಕ್ ಸಂಘರ್ಷ ಇವೆಲ್ಲವುಗಳಿಂದಾಗಿ ಚೀನಾ ಜೊತೆಗಿನ ಭಾರತದ ಸಂಬಂಧ ಹಳಸಿದೆ. ಕುತಂತ್ರಿ ಚೀನಾಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ನಮೋ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಜಾರಿಗೆ ತಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಲಡಾಕ್ ಸಂಘರ್ಷದ ಬಳಿಕ ಮೋದಿ ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳಿಂದ ಭಾರತೀಯರು ಸಂತೃಪ್ತರಾಗಿದ್ದಾರೆ. ಇದೀಗ ಚೀನಾದ ಜನರೂ ತಮ್ಮ ದೇಶದ ನಾಯಕರಿಗಿಂತ ಹೆಚ್ಚು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಗೆ ಬಹುಪರಾಕ್ ಹೇಳಿದ್ದಾರೆ. ಲಡಾಕ್ ಸಂಘರ್ಷದ ಮೂರು ತಿಂಗಳ ಬಳಿಕ ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ನಡೆಸಿರುವ ಸಮೀಕ್ಷೆಯೊಂದರಲ್ಲಿ ಈ ಅಂಶ ಬಯಲಾಗಿದೆ.
ಈ ಸಮೀಕ್ಷೆ ಹೇಳುವಂತೆ ಚೀನಾದ 50% ಜನರು ನಮೋ ಸರ್ಕಾರದ ಕಾರ್ಯ ವೈಖರಿಯನ್ನು ಪ್ರಶಂಸಿಸಿದ್ದಾರಂತೆ. ಜೊತೆಗೆ ಭಾರತದಲ್ಲಿ ಚೀನಾ ವಿರೋಧಿ ಮನಸ್ಥಿತಿ ಇದೆ ಎಂಬುದನ್ನು ಚೀನಾದ 70% ಮಂದಿ ಒಪ್ಪಿಕೊಂಡಿದ್ದರೆ ಇನ್ನುಳಿದ 30% ಜನರು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಈ ಸಮೀಕ್ಷೆಯ ಮೇಲೆಯೂ ಸಂಶಯ ವ್ಯಕ್ತವಾಗಿದ್ದು, ಭಾರತವನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಈ ತಂತ್ರವನ್ನು ಅನುಸರಿಸಲು ಚೀನಾ ಮುಂದಾಗಿದೆ ಎಂಬ ಮಾತುಗಳೂ ಕೇಳಿಬರಲಾರಂಭಿಸಿದೆ.
ಲಡಾಕ್ ಸಂಘರ್ಷದ ಬಳಾಕ ಭಾರತ ಚೀನಾಗೆ ಆರ್ಥಿಕ ಹೊಡೆತ ನೀಡಿ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಮೊಬೈಲ್ ಆಪ್ಗಳನ್ನು, ಇನ್ನಿತರ ವಸ್ತುಗಳ ಆಮದು ನಿಷೇಧ, ದೇಶದಲ್ಲಿ ಚೀನಾ ಹೂಡಿಕೆ ತಡೆಯಲು ಕ್ರಮ ಹೀಗೆ ಹತ್ತು ಹಲವು ಕ್ರಮಗಳನ್ನು ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಮೋ ಅನ್ನು ಹೊಗಳುವ ಮೂಲಕ ಮತ್ತೆ ಭಾರತದೊಳಕ್ಕೆ ನುಸುಳುವ ಚೀನಾದ ತಂತ್ರವೂ ಇದಾಗಿರಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.