ನವದೆಹಲಿ: ಕಾಂಗ್ರೆಸ್ನ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ, ಅಧಿಕಾರಕ್ಕೆ ಬಂದರೆ ಅಯೋಧ್ಯೆ ರಾಮಮಂದಿರ ತೀರ್ಪನ್ನು ರದ್ದುಪಡಿಸಲು ರಾಹುಲ್ ಗಾಂಧಿ ಯೋಜಿಸಿದ್ದರು ಎಂದು ಹೇಳಿದ್ದಾರೆ. ಪ್ರಮೋದ್ ಕೃಷ್ಣಂ ಅವರು 35 ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಭಾಗವಾಗಿದ್ದರು.
ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಪ್ರಮೋದ್ ಕೃಷ್ಣಂ, ನಾನು ಕಾಂಗ್ರೆಸ್ನಲ್ಲಿ 32 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದ್ದೇನೆ ಮತ್ತು ರಾಮಮಂದಿರ ನಿರ್ಧಾರ ಬಂದಾಗ ರಾಹುಲ್ ಗಾಂಧಿ ಅವರು ತಮ್ಮ ಆಪ್ತರೊಂದಿಗೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಿದ್ದರು. “ಮಹಾಶಕ್ತಿ ಆಯೋಗವನ್ನು ರಚಿಸುತ್ತೇವೆ ಮತ್ತು ರಾಜೀವ್ ಗಾಂಧಿ ಶಾ ಬಾನೋ ನಿರ್ಧಾರವನ್ನು ರದ್ದುಗೊಳಿಸಿದಂತೆ ರಾಮಮಂದಿರ ನಿರ್ಧಾರವನ್ನು ರದ್ದುಗೊಳಿಸುತ್ತೇವೆ” ಎಂದು ಅವರು ಹೇಳಿದ್ದರು ಎಂದಿದ್ದಾರೆ.
ದೇಶಪ್ರೇಮಿ, ಸನಾತನದಲ್ಲಿ ನಂಬಿಕೆ ಇರುವವರು, ಶ್ರೀರಾಮನ ಭಕ್ತರಾಗಿರುವವರು ಕಾಂಗ್ರೆಸ್ನಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
“ಇದೀಗ ಬಹಳ ದೊಡ್ಡ ಪಟ್ಟಿಯೇ ಇದೆ, ಜೂನ್ 4 ರೊಳಗೆ ಹೆಚ್ಚಿನ ಹಿರಿಯ ನಾಯಕರು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ ಏಕೆಂದರೆ ಈ ದೇಶದ ಬಗ್ಗೆ ಮಾತನಾಡುವವರು ಕಾಂಗ್ರೆಸ್ನಲ್ಲಿ ಉಳಿಯಲು ಸಾಧ್ಯವಿಲ್ಲ, ಪಾಕಿಸ್ತಾನವನ್ನು ಹಾಡಿ ಹೊಗಳುವವರು ಕಾಂಗ್ರೆಸ್ನಲ್ಲಿ ಉಳಿಯುತ್ತಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.