ಡಬ್ಲಿನ್: ಐರ್ಲೆಂಡ್ ಗಣರಾಜ್ಯದಲ್ಲಿ ವಾಸಿಸುತ್ತಿರುವ ಹಿಂದೂ ಸಮುದಾಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರದ ರಾಜಧಾನಿ ಡಬ್ಲಿನ್ ಉಪನಗರದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ದೇವಾಲಯವನ್ನು ಅಧಿಕೃತವಾಗಿ ತೆರೆಯಲಾಗಿದೆ. ಈ ದೇವಾಲಯವು ಡಬ್ಲಿನ್ ನಗರ ಕೇಂದ್ರದಿಂದ ನೈರುತ್ಯಕ್ಕೆ ಆರು ಕಿಲೋಮೀಟರ್ ದೂರದಲ್ಲಿರುವ ವಾಕಿನ್ಸ್ಟೌನ್ನಲ್ಲಿದೆ ಮತ್ತು ಐರ್ಲೆಂಡ್ನ ಹಿಂದೂಗಳಿಗೆ ಇದು ಮೊದಲನೇಯ ದೇಗುಲವಾಗಿದೆ.
ವಾಯುವ್ಯ ಯುರೋಪಿಯನ್ ದೇಶದಲ್ಲಿನ ಹಿಂದೂ ಸಮುದಾಯವು ಮಂದಿರವನ್ನು ಹೊಂದುವ ಇಚ್ಛೆಯನ್ನು ಬಹಳ ವರ್ಷಗಳಿಂದಲೂ ಹೊಂದಿತ್ತು. ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಆಗಾಗ ತಾತ್ಕಾಲಿಕ ಟೌನ್ ಹಾಲ್ ಮತ್ತು ಇತರ ಕೇಂದ್ರಗಳನ್ನು ಅವಲಂಬಿಸಬೇಕಾಗಿತ್ತು. ಇದೀಗ ಅವರ ಬಹು ಕಾಲದ ಬೇಡಿಕೆ ಈಡೇರಿದ್ದು, ದೇಗುಲ ನಿರ್ಮಾಣವಾಗಿದೆ.
ವರದಿಗಳ ಪ್ರಕಾರ, ಆಗಸ್ಟ್ 22 ರಂದು ಗಣೇಶ ಚತುರ್ಥಿಯ ಶುಭ ದಿನದಂದು ಸರ್ವಸಂಪದ ಹಿಂದೂ ದೇವಾಲಯ ಮತ್ತು ಸಾಂಸ್ಕೃತಿಕ ಕೇಂದ್ರ ಎಂಬ ದೇವಾಲಯವನ್ನು ಅಲ್ಲಿ ಉದ್ಘಾಟಿಸಲಾಗಿದೆ. ಕೋವಿಡ್-19 ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಉದ್ಘಾಟನಾ ಸಮಾರಂಭಕ್ಕೆ ಸೀಮಿತ ಸಂಖ್ಯೆಯ ಅತಿಥಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಪಾಶ್ಚಿಮಾತ್ಯ ದೇಶದಲ್ಲಿ ಸನಾತನ ಧರ್ಮದ ಬೋಧನೆಗಳನ್ನು ಪ್ರಚಾರ ಮಾಡುವ ವೈದಿಕ ಹಿಂದೂ ಸಾಂಸ್ಕೃತಿಕ ಕೇಂದ್ರ ಐರ್ಲೆಂಡ್ (ವಿಎಚ್ಸಿಸಿಐ) ಈ ದೇವಾಲಯವನ್ನು ಸ್ಥಾಪಿಸಿದೆ. ಅಂದಾಜು 25 ಸಾವಿರ ಐರಿಶ್-ಹಿಂದೂ ಸಮುದಾಯಕ್ಕೆ ಇದು ಪೂಜಾ ಸ್ಥಳವಾಗಲಿದೆ. ಈ ದೇವಾಲಯವು ಯೋಗ ತರಗತಿಗಳು, ಭಾಷೆ ಮತ್ತು ವೈದಿಕ ತರಗತಿಗಳು, ಸಂಗೀತ ಮತ್ತು ನೃತ್ಯ ಕಾರ್ಯಾಗಾರಗಳು, ಇತ್ಯಾದಿ ಚಟುವಟಿಕೆಗಳನ್ನು ಸಹ ನಡೆಸಲಿದೆ.
“ಭಾರತೀಯ ಸಮುದಾಯದವರಾಗಿ ನಮಗೆ ಹೆಮ್ಮೆಯ ಕ್ಷಣವಾಗಿದೆ, ಈಗ ನಾವು ಮನೆಯಿಂದ ಹೊರಗೆ ನಮ್ಮ ಧಾರ್ಮಿಕ ಆಚರಣೆಗಳನ್ನು ಮಾಡಲು ಹಿಂದೂ ದೇವಾಲಯವನ್ನು ಹೊಂದಿದ್ದೇವೆ” ಎಂದು ಡಬ್ಲಿನ್ನಲ್ಲಿ ವಾಸಿಸುವ ರವಿನಂದನ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಎರಡು ದಶಕಗಳ ನಂತರ, ಐರ್ಲೆಂಡ್ನ ವೈದಿಕ ಹಿಂದೂ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ (ವಿಎಚ್ಸಿಸಿಐ) ಮತ್ತು ಅವರ ತಂಡದ ಸತತ ಪ್ರಯತ್ನದಿಂದಾಗಿ ರಿಪಬ್ಲಿಕ್ ಆಫ್ ಐರ್ಲೆಂಡ್ನಲ್ಲಿ ಹಿಂದೂ ದೇವಾಲಯವನ್ನು ಹೊಂದುವ ಕನಸು ಅಂತಿಮವಾಗಿ ನನಸಾಗಿದೆ ಎಂದಿದ್ದಾರೆ.
Inaug of 1st ever Hindu temple in Ireland by VHCCI. Realisation of socio-cul-rel aspirations of community. Will serve as guiding force for all communities to work in harmony. Big day for multi-cultural spirit of Ireland 🙏🙏 @PMOIndia @DrSJaishankar @MEAIndia pic.twitter.com/caul0Cn6qN
— India in Ireland (@IndiainIreland) August 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.