Date : Thursday, 21-01-2016
ನವದೆಹಲಿ: ಇಸಿಸ್ ಉಗ್ರ ಸಂಘಟನೆಯ ಪರ ಒಲವು ಮೂಡಿಸಿಕೊಂಡು ಭಾರತದಲ್ಲಿ ವಿಧ್ವಂಸಕಾರಿ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸುತ್ತಿದ್ದ ನಾಲ್ವರು ಯುವಕರನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ. ಇಸಿಸ್ ಸಿದ್ಧಾಂತ ಪ್ರಚಾರದ ವೆಬ್ಸೈಟ್ಗೆ ಪದೇ ಪದೇ ಭೇಟಿ ಕೊಡುತ್ತಿದ್ದ ಇವರ ಮೇಲೆ ಗುಪ್ತಚರ ಇಲಾಖೆ ನಿಗಾ...
Date : Thursday, 21-01-2016
ನವದೆಹಲಿ: ಭಾರತದ ಸುಮಾರು 18,452 ವಿದ್ಯುತ್ ರಹಿತ ಹಳ್ಳಿಗಳಲ್ಲಿ ಶೇ.25 ಹಳ್ಳಿಗಳಿಗೆ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ವೇಳೆ ತಮ್ಮ ಭಾಷಣದಲ್ಲಿ ಮುಂದಿನ 1000 ದಿನಗಳಲ್ಲಿ ಈ ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸುವ ಬಗ್ಗೆ...
Date : Thursday, 21-01-2016
ಪಠಾನ್ಕೋಟ್: ಇತ್ತೀಚಿಗಷ್ಟೇ ಭಯೋತ್ಪಾದಕರ ದಾಳಿಗೆ ತತ್ತರಿಸಿದ್ದ ಪಠಾನ್ಕೋಟ್ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಮತ್ತೊಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಪಾಕಿಸ್ಥಾನದಿಂದ ಪಠಾನ್ಕೋಟ್ನ ತಶ್ ಗ್ರಾಮದ ಮೂಲಕ ಮೂವರು ಭಾರತಕ್ಕೆ ಒಳನುಸುಳಲು ಪ್ರಯತ್ನಿಸಿದ್ದರು. ಇವರಲ್ಲಿ ಒಬ್ಬ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದರೆ ಮತ್ತೀರ್ವರು ತಪ್ಪಿಸಿಕೊಂಡು...
Date : Thursday, 21-01-2016
ನವದೆಹಲಿ: ತಮಿಳುನಾಡಿನ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿಗಳನ್ನು ಆರಂಭಿಸುತ್ತಿದೆ. ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ತಮಿಳುನಾಡು ಕಾಂಗ್ರೆಸ್ ಮುಖಂಡರೊಂದಿಗೆ ಈ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆ. ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಯೋಚನೆ ಕಾಂಗ್ರೆಸ್ನದ್ದು ಎನ್ನಲಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ತಮಿಳುನಾಡಿನಲ್ಲಿ...
Date : Thursday, 21-01-2016
ಪಾಟ್ನಾ: ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಮತ್ತು ಅವರಿಬ್ಬರು ಪುತ್ರರ ಮೇಲಿನ ಪ್ರಕರಣವನ್ನು ನಿತೀಶ್ ಕುಮಾರ್ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ. ಇದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಲಾಲೂ ವಿರುದ್ಧದ ಪ್ರಕರಣಗಳನ್ನು ಪಾಟ್ನಾ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ, ಈ ನಡುವೆಯೇ ಸರ್ಕಾರ...
Date : Wednesday, 20-01-2016
ನವದೆಹಲಿ : ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಭಾಗವಹಿಸಲು ಕರ್ನಾಟಕ ಸ್ತಬ್ಧಚಿತ್ರವು ಆಯ್ಕೆಯಾಗಿದೆ. ಕರ್ನಾಟಕವು ಸತತ 6ನೇ ಬಾರಿಗೆ ಸ್ತಬ್ಧಚಿತ್ರ ಪ್ರದರ್ಶಿಸುತ್ತಿದ್ದು, ಈ ಬಾರಿ ‘ಕೊಡಗು ಕಾಫಿಯ ಸ್ವರ್ಗ’ ಎಂಬ ವಿಷಯವನ್ನು ಟ್ಯಾಬ್ಲೋಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದಿಂದ ಕೊಡಗು-ಕಾಫಿಯ ಸ್ವರ್ಗ, ಮೂಡಬಿದಿರೆಯ ಸಾವಿರ ಕಂಬದ ಬಸದಿ,...
Date : Wednesday, 20-01-2016
ನವದೆಹಲಿ: ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ಭಾರೀ ಚರ್ಚೆ ಹುಟ್ಟು ಹಾಕಿದೆ, ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ರಾಜಕೀಯ ನಾಯಕರುಗಳು ಕೂಡ ಈ ಪ್ರಕರಣದಿಂದ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಎಚ್ಆರ್ಡಿ ಸಚಿವೆ ಸ್ಮೃತಿ...
Date : Wednesday, 20-01-2016
ನವದೆಹಲಿ: ರಾಜಕಾರಣಿಗಳ ಬೆಂಗಾವಲಿನಿಂದಾಗಿ ದೆಹಲಿ ಜನತೆ ನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅವರ ಈ ಸಮಸ್ಯೆಯನ್ನು ಅರ್ಥೈಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿಯಲ್ಲಿ ವಿವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ತನ್ನ ಬೆಂಗಾವಲು ಪಡೆಯಿಂದಾಗಿಯೂ ದೆಹಲಿಗರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ ಎಂಬುದನ್ನು ಅರಿತುಕೊಂಡಿರುವ...
Date : Wednesday, 20-01-2016
ಚೆನ್ನೈ: ವಿಚಿತ್ರ ಸನ್ನಿವೇಶವೆಂಬಂತೆ ಐಐಟಿ ಮದ್ರಾಸ್ನ ಎಂಎಸ್ ಎಂಜಿನಿಯರಿಂಗ್ನ 2ನೇ ವರ್ಷದ ವಿದ್ಯಾರ್ಥಿನಿಯೊಬ್ಬಳು ಆಧ್ಯಾತ್ಮ ಸಾಧನೆಯನ್ನು ಮಾಡುವ ಸಲುವಾಗಿ ಶಿಕ್ಷಣವನ್ನು ತೊರೆದು ಹಿಮಾಲಯಕ್ಕೆ ತೆರಳಿದ್ದಾಳೆ. 26 ವರ್ಷ ವೇದಾಂತಂ ಎಲ್. ಪ್ರತ್ಯುಷ ಎಂಬಾಕೆ ಭಾನುವಾರ ತನ್ನ ರೂಮಿನಲ್ಲಿ ಪತ್ರ ಬರೆದಿಟ್ಟು ತೆರಳಿದ್ದಾಳೆ....
Date : Wednesday, 20-01-2016
ಶ್ರೀಹರಿಕೋಟ: ಭಾರತ ತನ್ನ 5ನೇ ನೌಕಾಯಾನ ಉಪಗ್ರಹ IRNSS-1E ಅನ್ನು ಜ.20ರಂದು ಶ್ರೀಹರಿಕೊಟ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಗೊಳಿಸಿದೆ. 320 ಟನ್(1425 ಕೆ.ಜಿ.) ತೂಕ, 44 ಮೀ. ಉದ್ದದ ಈ ರಾಕೆಟ್ನ್ನು ಶ್ರೀಹರಿಕೋಟದ ಸತೀಶ್ ಧವನ್ ಉಪಗ್ರಹ ಕೇಂದ್ರದಿಂದ ಭೂಮಿಯಿಂದ 503 ಕಿ.ಮೀ. ಎತ್ತರದ ಉಪ ಭೂಸ್ಥಾಯಿ...