ಚೆನ್ನೈ: ಫೆ.23ರಂದು ನಡೆದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಹುಟ್ಟುಹಬ್ಬದ ವೇಳೆ ಎಐಎಡಿಎಂಕೆ ನಾಯಕರು ಒತ್ತಾಯಪೂರ್ವಕವಾಗಿ ಬಾಲಕಿಯೊಬ್ಬಳ ಮೇಲೆ ಜಯಾ ಅವರ ಟ್ಯಾಟೋವನ್ನು ಹಾಕಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚೆನ್ನೈ ಮೂಲದ ಎನ್ಜಿಓವೊಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗಗಕ್ಕೆ ಪತ್ರ ಬರೆದು ಎಐಎಡಿಎಂಕೆ ನಾಯಕರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ.
ಈ ಘಟನೆ ತುಂಬಾ ಮಂದಿ ಸಚಿವರ ನಡುವೆಯೇ ನಡೆದಿದೆ, ಓ.ಪನ್ನೀರ ಸೆಲ್ವಂ ಕೂಡ ಈ ವೇಳ ಉಪಸ್ಥಿತರಿದ್ದರು ಎಂದು ಎನ್ಜಿಓ ಆರೋಪಿಸಿದೆ.
ಅಲ್ಲದೇ ರಾಜಕೀಯಕ್ಕಾಗಿ ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ತಡೆಯಲು ಸರ್ಕಾರ ಗೈಡ್ಲೈನ್ ತರಬೇಕು ಎಂದು ಒತ್ತಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.