Date : Monday, 03-04-2017
ಶ್ರೀನಗರ: ಟೂರಿಸಂ ಮತ್ತು ಟೆರರಿಸಂ ನಡುವೆ ಒಂದನ್ನು ಆಯ್ದುಕೊಳ್ಳುವಂತೆ ಕಾಶ್ಮೀರಿಗರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 40 ವರ್ಷಗಳ ರಕ್ತಪಾತ ಯಾರಿಗೂ ಒಳ್ಳೆಯದನ್ನು ಮಾಡಿಲ್ಲ ಎಂಬುದನ್ನು ಮನಮುಟ್ಟುವಂತೆ ತಿಳಿಸಿದ್ದಾರೆ. ದೇಶದ ಅತೀದೊಡ್ಡ ಚೆನಾನಿ-ನಶ್ರಿ ಸುರಂಗ ಮಾರ್ಗವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದ...
Date : Sunday, 02-04-2017
ಅಲಹಾಬಾದ್: ಈ ಶತಮಾನದಲ್ಲಿ ತಂತ್ರಜ್ಞಾನ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ ಮತ್ತು ತಂತ್ರಜ್ಞಾನ ನಮ್ಮ ನ್ಯಾಯಾಂಗದಲ್ಲಿ ದೊಡ್ಡ ವ್ಯಾಪ್ತಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್‍ನ 150ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ...
Date : Sunday, 02-04-2017
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಏಕತೆ ಮತ್ತು ಸಂಘಟನೆಯನ್ನು ಬಲಪಡಿಸುವ ಪ್ರಯತ್ನದೊಂದಿಗೆ ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್ 5 ರಂದು ಬಿಜೆಪಿ ಬೆಂಬಲದೊಂದಿಗೆ ರಾಮನವಮಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು RSS ಮತ್ತು VHP ಯೋಜನೆ ರೂಪಿಸಿದೆ. ರಾಮನವಮಿ ಧಾರ್ಮಿಕ ಹಬ್ಬವಾಗಿದೆ. ಆದರೆ ನಾವು ಮೂಲಭೂತವಾದಿ ಶಕ್ತಿಗಳ...
Date : Saturday, 01-04-2017
ನವದೆಹಲಿ: ತೃತೀಯ ವಿಮಾ ಕಂಪೆನಿಗಳ ಪ್ರೀಮಿಯಂ ಏರಿಕೆ ಪ್ರಸ್ತಾಪ ವಿರೋಧಿಸುತ್ತಿರುವ ಟ್ರಕ್ ಚಾಲಕರು ದೇಶದ ವಿವಿಧ ರಾಜ್ಯಗಳಲ್ಲಿ ಇಂದಿನಿಂದ ಅನಿಯಮಿತ ಮುಷ್ಕರ ಆರಂಭಿಸಿವೆ. ಈ ನಡೆಯಿಂದ ಪಶ್ಚಿಮ ಬಂಗಾಳ, ಒಡಿಸಾ, ಅಸ್ಸಾಂ, ತ್ರಿಪುರ, ಕೇರಳ, ಕರ್ನಾಟಕ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ...
Date : Saturday, 01-04-2017
ನವದೆಹಲಿ: ಭಾರತದ ರಾಜ್ಯ ತೈಲ ಸಂಸ್ಕರಣೆಗಳು 2017-18ರಲ್ಲಿ ಇರಾನ್‌ನಿಂದ ಒಂದನೇ ಐದರಷ್ಟು ತೈಲ ಆಮದು ಕಡಿತಗೊಳಿಸಲಿವೆ. ಭಾರತೀಯ ಒಕ್ಕೂಟ ಇರಾನ್‌ನ ದೈತ್ಯ ತೈಲ ಕ್ಷೇತ್ರದಿಂದ ಬಹುಮಾನವನ್ನು ಬಯಸಿದ್ದು, ಈ ವಿಚಾರದಲ್ಲಿ ಪ್ರಗತಿ ಹೊಂದಿಲ್ಲದ ಕಾರಣ ಭಾರತ ಇದರ ವಿರುದ್ಧ ಕಠಿಣ ನಿಲುವು...
Date : Saturday, 01-04-2017
ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳು ಮತ್ತು ಖಜಾನೆ ನಡುವೆ ಆನ್‌ಲೈನ್ ಸಂಪರ್ಕ ಮುಂದಿನ ಕೆಲವು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಅನಂತರ ಖಜಾನೆ ವ್ಯವಹಾರಗಳು ಆನ್‌ಲೈನ್ ಆಗಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ಖಜಾನೆಯ ಆರ್ಥಿಕ ವ್ಯವಸ್ಥೆ ಜೊತೆ ಕೋರ್ ಬ್ಯಾಂಕಿಂಗ್...
Date : Saturday, 01-04-2017
ನವದೆಹಲಿ: ದೇಶದ ವಿವಿಧ 26 ಭಾಗಗಳಲ್ಲಿ ನಡೆಯುವ ವಿಶ್ವದ ಅತೀದೊಡ್ಡ ಹ್ಯಾಕಥಾನ್ ‘ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್’ ಫಿನಾಲೆಯನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. 10 ಸಾವಿರ ಪ್ರೋಗ್ರಾಮರ್‌ಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಹ್ಯಾಕಥಾನನ್ನು ಸಾಮಾಜಿಕ ಪ್ರಾಮುಖ್ಯತೆಯ...
Date : Saturday, 01-04-2017
ನವದೆಹಲಿ: ಟೆಬೆಟಿಯನ್ ಧರ್ಮಗುರು ದಲೈಲಾಮರನ್ನು ಅರುಣಾಚಲ ಪ್ರದೇಶಕ್ಕೆ ಆಹ್ವಾನಿಸಿರುವ ಭಾರತದ ವಿರುದ್ಧ ಚೀನಾ ಕಿಡಿಕಾರಿದೆ. ಅಲ್ಲದೇ ಭಾರತದ ಈ ಕ್ರಮದಿಂದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂಬ ಎಚ್ಚರಿಕೆಯನ್ನು ಎರಡನೇ ಬಾರಿಗೆ ರವಾನಿಸಿದೆ. ಎಪ್ರಿಲ್ 4ರಿಂದ 13ರವರೆಗೆ ದಲೈಲಾಮ ಅವರು ಅರುಣಾಚಲಕ್ಕೆ ಭೇಟಿಕೊಡಲಿದ್ದಾರೆ....
Date : Saturday, 01-04-2017
ನವದೆಹಲಿ: ಕೇಂದ್ರ ಸರ್ಕಾರ 2016ರ ನವೆಂಬರ್‌ನಲ್ಲಿ ಹಳೆ ನೋಟು ನಿಷೇಧ ಮಾಡಿದ ಬಳಿಕ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ನಡೆಸಲಾದ ಡಿಜಿಟಲ್ ವ್ಯವಹಾರ ಶೇ.584ರಷ್ಟು (0.3ರಿಂದ 4.5 ಮಿಲಿಯನ್) ಹೆಚ್ಚಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಇದೇ ಅವಧಿಯಲ್ಲಿ ಆಧಾರ್...
Date : Saturday, 01-04-2017
ನವದೆಹಲಿ: ಭಾರತದ ಹಿಂದುತ್ವ ಮತ್ತು ಅಣ್ವದಿಂದ ಆತಂಕಗೊಂಡಿರುವುದಾಗಿ ಪಾಕಿಸ್ಥಾನ ಪರಮಾಣು ತಜ್ಞರು ಹೇಳಿಕೊಂಡಿದ್ದಾರೆ. ‘ಪರಮಾಣುವನ್ನು ಮೊದಲು ಬಳಸೋದಿಲ್ಲ’ ಎಂಬ ತನ್ನ ನಿಯಮವನ್ನು ಭಾರತ ಮರುಪರಿಶೀಲನೆಗೊಳಪಡಿಸಲಿದೆ ಎಂಬ ವರದಿಗಳು ಪಾಕಿಸ್ಥಾನ ಪರಮಾಣು ತಜ್ಞರನ್ನು ನಿದ್ದೆಗೆಡುವಂತೆ ಮಾಡಿದೆ. ಹಿಂದುತ್ವದಿಂದ ಪ್ರೇರಿತವಾಗಿರುವ ಬಿಜೆಪಿ ಕೇಂದ್ರ ಮತ್ತು...