ನವದೆಹಲಿ: ಯುವ ಪೀಳಿಗೆಯಲ್ಲಿ ದೇಶಭಕ್ತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಮಾನ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಮಂಗಳವಾರ ನವದೆಹಲಿಯಲ್ಲಿ ‘ವಿದ್ಯಾ ವೀರ್ತಾ ಅಭಿಯಾನ’ಕ್ಕೆ ಚಾಲನೆ ನೀಡಿದರು.
ಈ ಸಮಾರಂಭದಲ್ಲಿ ಫೋಟೋ ಪೊಟ್ರೆಟ್ಗಳ ಕೊಲೆಜ್ ಮತ್ತು ಪರಮವೀರ ಚಕ್ರ ಪುರಸ್ಕೃತರ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು ಮತ್ತು ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಹಸ್ತಾಂತರಿಸಲಾಯಿತು.
ಈ ಅಭಿಯಾನದ ಭಾಗವಾಗಿ ವಿಶ್ವವಿದ್ಯಾಲಯಗಳ, ಕಾಲೇಜುಗಳ ಆವರಣದಲ್ಲಿ ವೀರರ, 21 ಪರಮವೀರ ಚಕ್ರ ಪುರಸ್ಕೃತರ ಕೊಲೆಜ್ಗಳನ್ನು ಹಾಕಲಾಗುತ್ತದೆ. ಯುವ ಮನಸ್ಸುಗಳಲ್ಲಿ ದೇಶಭಕ್ತಿ ಉದ್ದೀಪನಗೊಳಿಸುವುದು ಈ ಅಭಿಯಾನದ ಆಶಯವಾಗಿದೆ.
ಈ ವೇಳೆ ಸೇನೆ ಮಾಡುತ್ತಿರುವ ಅಪ್ರತಿಮ ಕಾರ್ಯವನ್ನು ಜಾವ್ಡೇಕರ್ ಶ್ಲಾಘಿಸಿದರು, ಅವರ ನಿರಂತರ ಕಣ್ಗಾವಲಿನ ಫಲವಾಗಿ ನಾವು ಸುರಕ್ಷಿತರಾಗಿದ್ದೇವೆ ಎಂದರು.
ಈ ಸಮಾರಂಭದಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ರಾಮರಾವ್ ಭಂಮ್ರೆ, ಬರಹಗಾರ ತರುಣ್ ವಿಜಯ್, ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು, ನೌಕೆಗೆ ಲೆಫ್ಟಿನೆಂಟ್ ಜನರಲ್ ಸರತ್ ಚಂದ್ರ, ಏರ್ ಮಾರ್ಷಲ್ ಎಚ್.ಎನ್ ಭಗ್ವತ್, ಅಡ್ಮಿರಲ್ ಕೆ.ಕೆ.ಪಾಂಡೆ, ಪರಮವೀರ ಚಕ್ರ ಪುರಸ್ಕೃತ ಗ್ರೆನೆಡಿಯರ್ ಸಂಜಯ್ ಕುಮಾರ್ ಮತ್ತು ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.