ಹರಿದ್ವಾರ: ಶುಚಿತ್ವವನ್ನು ಅಪ್ಪಿಕೊಳ್ಳಿ ಮತ್ತು ಸ್ವಚ್ಛತೆಯನ್ನು ಹವ್ಯಾಸವಾಗಿ ಸ್ವೀಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹರಿದ್ವಾರದಲ್ಲಿ ಪತಾಂಜಲಿ ರಿಸರ್ಚ್ ಸೆಂಟರ್ನ್ನು ಉದ್ಘಾಟಿಸುವ ಸಂದರ್ಭ ಜನತೆಗೆ ಕರೆ ನೀಡಿದ್ದಾರೆ.
ಸ್ಚಚ್ಛಭಾರತ ಅಭಿಯಾನಕ್ಕೆ ಕೇವಲ ಹಣವನ್ನು ನೀಡುವುದು ಮಾತ್ರವಲ್ಲ, ಸ್ವಚ್ಛತೆಯನ್ನೂ ನೀಡಿ ಎಂದು ಕರೆ ನೀಡಿದ ಅವರು, ಶುಚಿತ್ವ, ನೈರ್ಮಲ್ಯ ಮತ್ತು ಆರೋಗ್ಯದ ಬಗ್ಗೆ ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಬೇಕು, ಈ ಮೂಲಕ ಭಾರತವನ್ನು ಕಾಯಿಲೆ ಮುಕ್ತಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ ಸುಮಾರು 30 ಸಾವಿರ 0-5 ವಯಸ್ಸಿನ ನಡುವಣ ಮಕ್ಕಳು ಪ್ರತಿವರ್ಷ ಡಯೇರಿಯಾದಂತಹ ಮಾರಕ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ.
ಜಗತ್ತು ಕೇವಲ ರೋಗಗಳಿಗೆ ಚಿಕಿತ್ಸೆ ಮಾಡುವುದಕ್ಕೆಯೇ ಹೆಚ್ಚಿನ ಗಮನ ನೀಡಬಾರದು, ಅನಾರೋಗ್ಯ ಸಂಭವಿಸದಂತೆ ಮೊದಲೇ ಕ್ರಮಗಳನ್ನು ಕೈಗೊಳ್ಳಬೇಕು. ಆರೋಗ್ಯ ವೃದ್ಧಿಗೆ ಉತ್ತಮ ಮಾರ್ಗವೆಂದರೆ ಅದು ಸ್ವಚ್ಛತೆ ಮಾತ್ರ ಎಂದಿದ್ದಾರೆ.
ಸ್ವಚ್ಛತೆಯನ್ನು ಕಾಪಾಡುವ ಮೂಲಕ, ಕೊಳಚೆ, ಕಸಕಡ್ಡಿಗಳನ್ನು ಹೊರಕ್ಕೆ ಎಸೆಯದೇ ಇದ್ದರೆ ವೈದ್ಯರಿಗಿಂತ ಹೆಚ್ಚು ಜೀವಗಳನ್ನು ನಾವು ಕಾಪಾಡಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.