ನವದೆಹಲಿ: ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿ, ಶಿರಚ್ಛೇಧಗೊಳಿಸಿರುವ ಪಾಕಿಸ್ಥಾನದ ವಿಕೃತಿಯನ್ನು ಕಟುವಾಗಿ ಖಂಡಿಸಿರುವ ಭಾರತ, ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಅವರಿಗೆ ಸಮನ್ಸ್ ಜಾರಿಗೊಳಿಸಿ ಕ್ರಮಕ್ಕೆ ಆಗ್ರಹಿಸಿದೆ.
ಇಬ್ಬರು ಯೋಧರನ್ನು ಕೊಂದು ಶವವನ್ನು ವಿರೂಪಗೊಳಿಸಿರುವುದು ಪ್ರಚೋದನೆಯ ಕ್ರಮವಾಗಿದ್ದು, ಈ ಘಟನೆಯಲ್ಲಿ ಪಾಕಿಸ್ಥಾನದ ಪಾತ್ರವಿದೆ ಎಂಬುದಕ್ಕೆ ನಮ್ಮಲ್ಲಿ ಖಚಿತ ಪುರಾವೆಗಳಿವೆ ಎಂದು ಭಾರತ ಹೇಳಿದೆ.
‘ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಅವರಿಗೆ ಸಮನ್ಸ್ ನೀಡಿದ್ದೇವೆ, ಪಾಕ್ ಪಾತ್ರದ ಬಗ್ಗೆ ಖಚಿತ ಪುರಾವೆ ಒದಗಿಸಿದ್ದೇವೆ, ಆದರೂ ಅವರು ಇದನ್ನು ಅಲ್ಲಗೆಲೆಯುತ್ತಿದ್ದಾರೆ. ನಮ್ಮ ಸಂದೇಶವನ್ನು ಪಾಕಿಸ್ಥಾನಕ್ಕೆ ತಲುಪಿಸುವ ಭರವಸೆ’ ನೀಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬೋಗ್ಲೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.