Date : Saturday, 08-04-2017
ಲಕ್ನೋ: ಉತ್ತರಪ್ರದೇಶದ ಶಿಕ್ಷಣ ವ್ಯವಸ್ಥೆಯನ್ನು ಅಧುನೀಕರಿಸಲು ಮುಂದಾಗಿರುವ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು, ಆರನೇ ತರಗತಿಯ ಬದಲು ನರ್ಸರಿಯಿಂದಲೇ ಇಂಗ್ಲೀಷ್ ಶಿಕ್ಷಣ ಆರಂಭಿಸಲು ನಿರ್ಧರಿಸಿದ್ದಾರೆ. ರಾಷ್ಟ್ರೀಯತೆ ಮತ್ತು ಆಧುನಿಕತೆ ಎರಡನ್ನೂ ಶಿಕ್ಷಣದಲ್ಲಿ ಅಳವಡಿಸಲು ಅವರು ಮುಂದಾಗಿದ್ದಾರೆ. ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ...
Date : Saturday, 08-04-2017
ನವದೆಹಲಿ: ವರ್ಲ್ಡ್ ಎಕನಾಮಿಕ್ ಫೋರಂ ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮದಲ್ಲಿ ನೀಡಿರುವ ರ‍್ಯಾಂಕಿಂಗ್‌ನಲ್ಲಿ ಭಾರತ 40ನೇ ಸ್ಥಾನಕ್ಕೆ ಜಿಗಿತ ಕಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ವಲಯಕ್ಕೆ ಸರ್ಕಾರ ಎಷ್ಟು ಮಹತ್ವ ನೀಡುತ್ತಿದೆ ಎಂಬುದನ್ನು ಇದು ತೋರಿಸಿದೆ ಎಂದಿದ್ದಾರೆ....
Date : Friday, 07-04-2017
ಲಕ್ನೋ: ಉತ್ತರಪ್ರದೇಶದಲ್ಲಿನ ಹಲವಾರು ಅಭಿವೃದ್ಧಿ ಯೋಜನೆಗಳಲ್ಲಿರುವ ’ಸಮಾಜವಾದಿ’ ಹೆಸರನ್ನು ತೆಗೆದು ಹಾಕಲು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಮುಂದಾಗಿದ್ದಾರೆ. ‘ಸಮಾಜವಾದಿ’ ಹೆಸರಿನ ಬದಲು ‘ಮುಖ್ಯಮಂತ್ರಿ’ ಎಂಬ ಹೆಸರು ಹಾಕುವಂತೆ ಅವರು ಆದೇಶಿಸಿದ್ದಾರೆ. ಸಮಾಜವಾದಿಯ ಹೆಸರಿರುವ ಎಲ್ಲಾ ಯೋಜನೆಗಳನ್ನು ಸಂಪುಟದ ಮುಂದಿಡಬೇಕು...
Date : Friday, 07-04-2017
ನವದೆಹಲಿ: ಮಾನಸ ಸರೋವರ ಯಾತ್ರೆಗೆ ಈ ವರ್ಷ ಒಟ್ಟು 4 ಸಾವಿರ ಅರ್ಜಿಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ವೀಕರಿಸಿದೆ. ಕಳೆದ ಬಾರಿಗಿಂತ ಈ ಬಾರಿ 1800 ಅರ್ಜಿಗಳು ಹೆಚ್ಚಾಗಿವೆ. ಈ ಬಗೆಗಿನ ವಿವರಗಳನ್ನು ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ‘ಒಟ್ಟು...
Date : Friday, 07-04-2017
ನವದೆಹಲಿ: ಏಪ್ರಿಲ್ 7ರಂದು ಜಗತ್ತಿನಾದ್ಯಂತ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಡಿಪ್ರೆಶನ್(ಖಿನ್ನತೆ)ಯ ವಿಷಯವನ್ನಿಟ್ಟುಕೊಂಡು ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ‘ಡಿಪ್ರೆಶನ್: ಲೆಟ್ ಅಸ್ ಟಾಕ್’ ಎಂಬುದು ಈ ಬಾರಿ ವಿಶ್ವ ಆರೋಗ್ಯ ದಿನದ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಟ್ವಿಟರ್...
Date : Friday, 07-04-2017
ನವದೆಹಲಿ: ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ಪಡೆಯಲು ಬೇಕಾದ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ವಿಟೋ ಅಧಿಕಾರದೊಂದಿಗೆ ಖಾಯಂ ಸದಸ್ಯತ್ವ ಪಡೆಯುವ ಎಲ್ಲಾ ಅರ್ಹತೆಗಳೂ ಭಾರತಕ್ಕಿದೆ ಎಂದು ಲೋಕಸಭೆಯಲ್ಲಿ ಅವರು ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ...
Date : Friday, 07-04-2017
ನವದೆಹಲಿ: ಭಾರತಕ್ಕಾಗಮಿಸಿದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರನ್ನು ಎಲ್ಲಾ ಶಿಷ್ಟಾಚಾರಗಳನ್ನು ಬದಿಗೊತ್ತಿ ಪ್ರಧಾನಿ ನರೇಂದ್ರ ಮೋದಿ ವಿಮಾನನಿಲ್ದಾಣದಲ್ಲೇ ಸ್ವಾಗತಿಸಿದರು. ದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿನ ತನ್ನ ನಿವಾಸದಿಂದ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಅವರು ಆಗಮಿಸಿದ್ದರು. ಅವರ ಪ್ರಯಾಣದ ವೇಳೆ...
Date : Friday, 07-04-2017
ಮುಂಬಯಿ: 64ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ಶುಕ್ರವಾರ ಘೋಸಿಸಲಾಗಿದ್ದು, ’ರುಸ್ತುಮ್’ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ನಟ ಅಕ್ಷಯ್ ಕುಮಾರ್ ಅವರಿಗೆ ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ. ನಟಿ ಸೋನಮ್ ಕಪೂರ್ ಅಭಿನಯದ, ರಾಮ್ ಮಾಧವನಿ ನಿರ್ದೇಶನದ ‘ನೀರಜಾ’ ಸಿನಿಮಾ ಅತ್ಯುತ್ತಮ ಸಿನಿಮಾವಾಗಿ ರಾಷ್ಟ್ರಪ್ರಶಸ್ತಿಯನ್ನು...
Date : Friday, 07-04-2017
ಜೆರುಸೆಲಂ: ಇಸ್ರೇಲ್ ಮತ್ತು ಭಾರತ ತನ್ನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ದಿದ್ದು, ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಪೂರೈಸುವ ಸಲುವಾಗಿ ಇಸ್ರೇಲ್ ಭಾರತದೊಂದಿಗೆ ಯುಎಸ್‌ಡಿ 2 ಬಿಲಿಯನ್ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಿದೆ. ಈ ಒಪ್ಪಂದದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್...
Date : Friday, 07-04-2017
ಮುಂಬಯಿ: ಮುಂಬಯಿಯ ಎಲ್ಲಾ ಸಬ್‌ಅರ್ಬನ್ ರೈಲ್ವೇ ಸ್ಟೇಶನ್‌ಗಳಲ್ಲಿ ಸುಮಾರು 100 ಎಸ್ಕಲೇಟರ್‌ಗಳನ್ನು ನಿರ್ಮಿಸಲು ರೈಲ್ವೇ ಯೋಜನೆ ರೂಪಿಸಿದೆ. ಸೆಂಟ್ರಲ್ ರೈಲ್ವೇ ಮತ್ತು ವೆಸ್ಟರ್ನ್ ರೈಲ್ವೇ ಈ ಯೋಜನೆಯನ್ನು ಆರಂಭಿಸಿದ್ದು, 2018ರೊಳಗೆ ಎಲ್ಲಾ ಎಸ್ಕಲೇಟರ್‌ಗಳು ಪ್ರಯಾಣಿಕರ ಬಳಕೆಗೆ ಲಭ್ಯವಾಗಲಿದೆ. ಪ್ರಸ್ತುತ ಒಟ್ಟು 47ಮುಂಬಯಿ...