Date : Saturday, 19-08-2017
ನವದೆಹಲಿ: ಕಂಪನಿಗಳಿಗೆ ಇನ್‌ಲ್ಯಾಂಡ್ ಕಂಟೇನರ್ ಡಿಪೋ, ಕಂಟೇನರ್ ಫ್ರೈಟ್ ಸ್ಟೇಶನ್, ಏರ್ ಫ್ರೈಟ್ ಸ್ಟೇಶನ್(ICD/CFS/AFS)ಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಸರಳಗೊಳಿಸಿದೆ. ತ್ವರಿತ ಹಾಗೂ ಅತೀ ಪಾರದರ್ಶಕ ರೀತಿಯಲ್ಲಿ ಅನುಮೋದನಾ ಪ್ರಕ್ರಿಯೆಗಳು ನಡೆಯಲಿ ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ....
Date : Saturday, 19-08-2017
ಮುಂಬಯಿ: ಮಹಾರಾಷ್ಟ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ ನಾರಾಯಣ ರಾಣೆಯವರು ಈ ತಿಂಗಳ ಅಂತ್ಯದ ವೇಳೆಗೆ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಈ ನಿಟ್ಟಿನಲ್ಲಿ ಅವರು ಸಿದ್ಧತೆ ಆರಂಭಿಸಿದ್ದಾರೆ. ಆ.27ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಮುಂಬಯಿಗೆ ಆಗಮಿಸಲಿದ್ದು, ಅವರ...
Date : Saturday, 19-08-2017
ಮುಂಬಯಿ: ಗಣೇಶೋತ್ಸವಕ್ಕೆ ಇಡೀ ಮುಂಬಯಿ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಧ ವಿಧದ ಗಣಪನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಭಕ್ತಿ, ಪ್ರೀತಿಯಿಂದ ಗಣಪನನ್ನು ಸ್ವಾಗತಿಸಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಗಣೇಶ ಹಬ್ಬದ ಸಂದರ್ಭದಲ್ಲಿ ರೈಲ್ವೇ ಕೂಡ ಮಹಾರಾಷ್ಟ್ರದಾದ್ಯಂತ 145 ವಿಶೇಷ ರೈಲುಗಳನ್ನು ಓಡಿಸಲು...
Date : Saturday, 19-08-2017
ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶನಿವಾರ ಗೋರಖ್‌ಪುರದಲ್ಲಿ ‘ಸ್ವಚ್ಛ ಉತ್ತರಪ್ರದೇಶ, ಸ್ವಸ್ಥ ಉತ್ತರಪ್ರದೇಶ’ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಸ್ವತಃ ಪೊರಕೆ ಹಿಡಿದು ಇಲ್ಲಿನ ಅಮಧಿಯಾರಿ ಬಾಗ್ ಪ್ರದೇಶವನ್ನು ಗುಡಿಸಿ ಸ್ವಚ್ಛಗೊಳಿಸಿದರು. ಸಾಮಾನ್ಯ ಜನರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು,...
Date : Saturday, 19-08-2017
ನವದೆಹಲಿ: 2018ರ ಸಾಲಿನ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಳಿಸಲು ಸೆಪ್ಟಂಬರ್ 15 ಕೊನೆಯ ದಿನಾಂಕವಾಗಿದೆ. ಯಾರೂ ಬೇಕಾದರು ಯಾರ ಹೆಸರನ್ನು ನಾಮನಿರ್ದೇಶನಗೊಳಿಸಬಹುದಾಗಿದೆ. ಪ್ರತಿಷ್ಟಿತ ಪದ್ಮ ಪ್ರಶಸ್ತಿಗಳನ್ನು ಪಡೆಯಲು ಅರ್ಹತೆಯಿರುವ ಸಾಮಾಜಿಕ ನಾಯಕರ ಹೆಸರನ್ನು ನಾಮನಿರ್ದೇಶನಗೊಳಿಸುವಂತೆ ಜನರನ್ನು ಪ್ರೇರೇಪಿಸಲಾಗಿದೆ. ಪದ್ಮ ಪ್ರಶಸ್ತಿಗಳ ಆನ್‌ಲೈನ್ ಪೋರ್ಟಲ್ www.padmaawards.gov.inನಲ್ಲಿ...
Date : Saturday, 19-08-2017
ನವದೆಹಲಿ: ಭಾರತ ಮತ್ತು ಅಮೆರಿಕಾ ಹೊಸದಾಗಿ ರಚನೆಯಾಗಿರುವ 2+2 ಫಾರ್ಮೆಟ್‌ನಲ್ಲಿ ಮೊತ್ತ ಮೊದಲ ಉಭಯ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರುಗಳನ್ನೊಳಗೊಂಡ ಸಭೆಯನ್ನು ನಡೆಸಲು ನಿರ್ಧರಿಸಿವೆ. ತಂತ್ರಗಾರಿಕ ಮತ್ತು ವಾಣಿಜ್ಯ ಮಾತುಕತೆಗಳೂ ಇಲ್ಲಿ ನಡೆಯಲಿವೆ. ಸ್ವಾತಂತ್ರ್ಯ ದಿನಾಚರಣೆಯ ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್...
Date : Saturday, 19-08-2017
ನವದೆಹಲಿ: ರಾಜಸ್ಥಾನದಲ್ಲಿ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಆಗಸ್ಟ್ 29ರಂದು ಮೋದಿ ಉದಯ್‌ಪುರಕ್ಕೆ ಭೇಟಿಕೊಡಲಿದ್ದು, ಸುಮಾರು 873 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕಾಮಕಾರಿಗೆ ಆರಂಭ...
Date : Saturday, 19-08-2017
ಭೋಪಾಲ್: ಒಬ್ಬ ಒಳ್ಳೆಯ ರಾಜಕಾರಣಿಯಾದವನು ತ್ಯಾಗಗಳನ್ನು ಮಾಡುತ್ತಾನೆ ಎಂದು ರಾಜ್ಯಸಭಾ ಸಂಸದ ಡಾ.ಸುಭಾಷ್ ಚಂದ್ರ ಹೇಳಿದ್ದಾರೆ. ಭೋಪಾಲದಲ್ಲಿ ಶುಕ್ರವಾರ ಜರುಗಿದ ಇಂಡಿಯಾ ಏಸೀನ್ ಯೂತ್ ಸಮಿತ್ 2017ರಲ್ಲಿ ಮಾತನಾಡಿದ ಅವರು, ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದೆ, ಪ್ರತಿನಿತ್ಯ...
Date : Saturday, 19-08-2017
ಪಾಟ್ನಾ: ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ಖಾದಿ ಉಡುಗೆಗಳನ್ನು ಧರಿಸುವಂತೆ ಸರ್ಕಾರಿ ಉದ್ಯೋಗಿಗಳಿಗೆ ಬಿಹಾರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಬಿಹಾರದ ಖಾದಿ ಮತ್ತು ಗ್ರಾಮೀಣ ಕೈಗಾರಿಕ ಮಂಡಳಿ ಈ ಮನವಿಯನ್ನು ಮಾಡಿಕೊಂಡಿದೆ. ಸರ್ಕಾರಿ ಕಛೇರಿ, ಸರ್ಕಾರಿ ಗೆಸ್ಟ್ ಹೌಸ್, ಸರ್ಕ್ಯುಟ್ ಹೌಸ್‌ಗಳಲ್ಲಿ ಖಾದಿ...
Date : Saturday, 19-08-2017
ಚಂಡೀಗಢ: 3ರಿಂದ 10ನೇ ತರಗತಿಯ ಮಕ್ಕಳಿಗಾಗಿ 10 ಸಾವಿರ ಪ್ರಶ್ನೆಗಳುಳ್ಳ ಕ್ವಿಝ್ ಬ್ಯಾಂಕ್ ಆರಂಭಿಸಿರುವ ಹರಿಯಾಣ ಶಿಕ್ಷಣ ಇಲಾಖೆ ಮಕ್ಕಳ ಕೌಶಲ್ಯ ವೃದ್ಧಿಗೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜ್ಞಾನ ವೃದ್ಧಿಗಾಗಿ ಕ್ವಿಝ್ ಬ್ಯಾಂಕ್ ಆರಂಭಿಸಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಹರಿಯಾಣ ಪಾತ್ರವಾಗಿದೆ....