Date : Friday, 16-03-2018
ಚಂಡೀಗಢ: ಮಧ್ಯಪ್ರದೇಶ, ರಾಜಸ್ಥಾನದಂತೆ ಹರಿಯಾಣವೂ 12 ವರ್ಷದೊಳಗಿನ ಅಪ್ರಾಪ್ತಿಯರನ್ನು ಅತ್ಯಾಚಾರಗೊಳಿಸುವ ಅಪರಾಧಿಗಳಿಗೆ ಮರಣದಂಡನೆಯ ಶಿಕ್ಷೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಗುರುವಾರ ಈ ಬಗ್ಗೆ ಅಸೆಂಬ್ಲಿಯಲ್ಲಿ ಮಸೂದೆಯನ್ನೂ ಮಂಡಿಸಿದೆ.ಭಾರತೀಯ ದಂಡ ಸಂಹಿತೆಯ ಲೈಂಗಿಕ ದೌರ್ಜನ್ಯ ಕಲಂಗೆ ತಿದ್ದುಪಡಿಯನ್ನು ತರುವ ಮಸೂದೆಯನ್ನು ಮಂಡಿಸಿದೆ. ಅಪರಾಧ ಕಾನೂನು(ಹರಿಯಾಣ ತಿದ್ದುಪಡಿ)...
Date : Friday, 16-03-2018
ನವದೆಹಲಿ: ದೇಶದಲ್ಲಿ ಒಟ್ಟು 1,496ಅಧಿಕಾರಿಗಳ ಕೊರತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ. ಭಾರತದ ಐಎಎಸ್‌ನ ಒಟ್ಟು ಸಾಮರ್ಥ್ಯ 6,500. ಆದರೆ 2018ರ ಜನವರಿ 1ರ ವೇಳೆಗೆ ಇಡೀ ದೇಶದಲ್ಲಿ ಇದ್ದುದು 5,004 ಅಧಿಕಾರಿಗಳು. ಅಂದರೆ...
Date : Thursday, 15-03-2018
ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಎಲೆಕ್ಟ್ರಾನಿಕ್ ಮೀಡಿಯಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಷಾ ಅವರು ದಿ ವೈರ್ ವೆಬ್‌ಸೈಟ್ ವಿರುದ್ಧ ಹುಡಿರುವ...
Date : Thursday, 15-03-2018
ನವದೆಹಲಿ: ಬ್ಯಾಂಕುಗಳಿಗೆ ಸಾಲ ವಂಚಿಸುತ್ತಿರುವ ಕಂಪನಿಗಳೊಂದಿಗೆ ಸಂಬಂಧ ಹೊಂದಿರುವ 91 ಜನರನ್ನು ಭಾರತ ಬಿಟ್ಟು ತೆರಳುವುದಕ್ಕೆ ನಿರ್ಬಂಧ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ 91 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಉದ್ದೇಶಪೂರ್ವಕವಾಗಿ ಸಾಲಗಳನ್ನು ವಂಚಿಸಿರುವ ಕಂಪನಿಗಳ ಮಾಲೀಕರು, ನಿರ್ದೇಶಕರು ಸೇರಿದಂತೆ ಇತರರು...
Date : Thursday, 15-03-2018
ನವದೆಹಲಿ: ವಿಶ್ವ ಗ್ರಾಹಕ ಹಕ್ಕುಗಳ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ. ‘ವಿಶ್ವ ಗ್ರಾಹಕ ಹಕ್ಕುಗಳ ದಿನದ ಅಂಗವಾಗಿ ಶುಭಾಶಯಗಳು. ಆರ್ಥಿಕತೆಯಲ್ಲಿ ಗ್ರಾಹಕ ಮಹತ್ವದ ಪಾತ್ರ ವಹಿಸುತ್ತಾನೆ. ಭಾರತ ಸರ್ಕಾರ ಗ್ರಾಹಕರ ರಕ್ಷಣೆಯತ್ತ ಮಾತ್ರವಲ್ಲದೇ ಗ್ರಾಹಕರ ಸಮೃದ್ಧಿಯತ್ತಲೂ...
Date : Thursday, 15-03-2018
ಅಂಟಾನನಾರಿವೋ: ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಭಾರತ ಮತ್ತು ಮಡಗಾಸ್ಕರ್ ರಕ್ಷಣೆ, ವಾಯು ಸಂಪರ್ಕ, ಕೃಷಿ ಸೇರಿದಂತೆ ಹಲವಾರು ವಲಯಗಳಿಗೆ ಸಂಬಂಧಿಸಿದ ತಿಳುವಳಿಕೆಯ ಸ್ಮರಣಿಕೆ(Memorandum of Understanding) ಗೆ ಸಹಿ ಹಾಕಿವೆ. ಮಡಗಾಸ್ಕರ್‌ಗೆ ಭೇಟಿ ನೀಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು...
Date : Thursday, 15-03-2018
ನವದೆಹಲಿ: ಬ್ಯಾಂಕಿಂಗ್ ವಂಚನೆಗಳ ವಿರುದ್ಧ ತೀವ್ರ ನೋವು ವ್ಯಕ್ತಪಡಿಸಿರುವ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು, ವ್ಯವಸ್ಥೆಯನ್ನು ಸುಧಾರಣೆಗೊಳಿಸುವ ಸಲುವಾಗಿ ಆರ್‌ಬಿಐ ನೀಲಕಂಠನಂತೆ ವಿಷ ಕುಡಿಯಲೂ ಸಿದ್ಧವಾಗಿದೆ, ಎಂದಿಗೂ ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ, ಪ್ರತಿ ಘಟನೆಯಿಂದಲೂ ಉತ್ತಮವಾಗಿ ಹೊರಬರಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ. ಡೈಮಂಡ್...
Date : Thursday, 15-03-2018
ನವದೆಹಲಿ: ನಾವಿಕ ಸಾಗರ ಪರಿಕ್ರಮ ಯಾತ್ರೆಯನ್ನು ಕೈಗೊಂಡಿರುವ ಭಾರತೀಯ ನೌಕಾ ಸೇನೆಯ ಮಹಿಳಾ ಸಿಬ್ಬಂದಿಗಳನ್ನು ಹೊತ್ತ ಐಎನ್‌ಎಸ್‌ವಿ ಬುಧವಾರ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ಗೋವಾಗೆ ಹಿಂದಿರುಗುತ್ತಿದೆ. ಕ್ಯಾಪ್ಟನ್ ಲೆ.ಕಮಾಂಡರ್ ವರ್ತಿಕಾ ಜೋಶಿ ನೇತೃತ್ವದ ಸಾಗರ ಪರಿಕ್ರಮ ತಂಡ ತನ್ನ ಜಾಗತಿಕ ಸಮುದ್ರ...
Date : Thursday, 15-03-2018
ನವದೆಹಲಿ: ಆರೋಗ್ಯ ಮತ್ತು ಔಷಧ ವಲಯಕ್ಕೆ ಸಂಬಂಧಪಟ್ಟಂತೆ ಭಾರತ ಮತ್ತು ಇರಾನ್ ಸಹಿ ಹಾಕಿರುವ ತಿಳುವಳಿಕೆಯ ಸ್ಮರಣಿಕೆಗೆ(Memorandum of Understanding) ಪ್ರಧಾನಿ ನರೇಂದ್ರ ಮೋದಿ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿರುವ ಸಚಿವ ಸಂಪುಟ ಸಭೆಯಲ್ಲಿ, ಇರಾನ್...
Date : Thursday, 15-03-2018
ನವದೆಹಲಿ: ದೇಶದಲ್ಲಿ 3.23 ಮಿಲಿಯನ್ ಟನ್ ಬಿದಿರು ಇದೆ ಎಂದು ಅಂದಾಜಿಸಲಾಗಿದ್ದು, ಇದರ ಉತ್ಪಾದನೆಗೆ ಉತ್ತೇಜನ ನೀಡಿದರೆ ಭಾರತ ಅಂತಾರಾಷ್ಟ್ರೀಯ ಬಿದಿರು ರಫ್ತಿನಲ್ಲಿ ಮಹತ್ವದ ಪಾತ್ರವನ್ನು ವಹಿಸಬಹುದಾಗಿದೆ. ಹೀಗಾಗಿಯೇ ಸರ್ಕಾರ ಭಾರತವನ್ನು ಬ್ಯಾಂಬೋ ಹಬ್ ಆಗಿಸುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ತರಬೇತಿ...