ನವದೆಹಲಿ: ದೇಶದಲ್ಲಿ ಒಟ್ಟು 1,496ಅಧಿಕಾರಿಗಳ ಕೊರತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.
ಭಾರತದ ಐಎಎಸ್ನ ಒಟ್ಟು ಸಾಮರ್ಥ್ಯ 6,500. ಆದರೆ 2018ರ ಜನವರಿ 1ರ ವೇಳೆಗೆ ಇಡೀ ದೇಶದಲ್ಲಿ ಇದ್ದುದು 5,004 ಅಧಿಕಾರಿಗಳು. ಅಂದರೆ ಒಟ್ಟು 1,496 ಅಧಿಕಾರಿಗಳ ಕೊರತೆ ಇದೆ ಎಂದು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಹುದ್ದೆಗಳು ಖಾಲಿಯಾಗುವುದು, ಅವುಗಳನ್ನು ಭರ್ತಿ ಮಾಡುವುದು ನಡೆಯುತ್ತಲೇ ಇರುವ ಪ್ರಕ್ರಿಯೆ ಎಂದಿರುವ ಅವರು, ವಾರ್ಷಿಕವಾಗಿ 180 ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.