Date : Tuesday, 25-09-2018
ನವದೆಹಲಿ: ಜಮ್ಮು ಕಾಶ್ಮೀರದ ಪ್ರಸ್ತುತ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು, ವಾಸ್ತವ ಗಡಿ ನಿಯಂತ್ರಣ ಪ್ರದೇಶದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಅನಿವಾರ್ಯತೆ ಇದೆ ಎಂಬುದಾಗಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು,...
Date : Tuesday, 25-09-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ‘ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ’ವನ್ನು ಅನಾವರಣಗೊಳಿಸಿದ ಕೇವಲ 24 ಗಂಟೆಗಳಲ್ಲಿ 1 ಸಾವಿರ ಮಂದಿ ಅದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಛತ್ತೀಸ್ಗಢ ಮತ್ತು ಹರಿಯಾಣದ ಅತೀ ಹೆಚ್ಚು ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದು, ಝಾರ್ಖಂಡ್, ಅಸ್ಸಾಂ ಮತ್ತು ಮಧ್ಯಪ್ರದೇಶ...
Date : Tuesday, 25-09-2018
ವಿಶ್ವಸಂಸ್ಥೆ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಣ ಆಳವಾದ ಬಾಂಧವ್ಯ ಮತ್ತೊಮ್ಮೆ ಸಾಬೀತಾಗಿದೆ. ವಿಶ್ವಸಂಸ್ಥೆಯಲ್ಲಿ ಮಾತನಾಡಿದ ವೇಳೆ ಟ್ರಂಪ್ ಮೋದಿ ಬಗೆಗಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ನಾಯಕರು ಭಾಗವಹಿಸಿದ್ದ ಬೃಹತ್ ಸಭೆಯ ಸಮ್ಮುಖದಲ್ಲೇ...
Date : Monday, 24-09-2018
ನವದೆಹಲಿ: ಭಾರತೀಯ ಕುಸ್ತಿಪಟು ದೀಪಕ್ ಪೂನಿಯಾ ಅವರು ಜೂನಿಯರ್ ವರ್ಲ್ಡ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. 86 ಕೆ.ಜಿ ವಿಭಾಗದಲ್ಲಿ ಅವರು ಈ ಸಾಧನೆಯನ್ನು ಮಾಡಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಅವರು ಟರ್ಕಿಯ ಆರಿಫ್ ಒಝನ್ ವಿರುದ್ಧ 1-2 ಅಂಕಗಳಿಂದ ಪರಾಭವಗೊಂಡ ಹಿನ್ನಲೆಯಲ್ಲಿ ಕಂಚಿನ ಪದಕಕ್ಕೆ...
Date : Monday, 24-09-2018
ಗ್ಯಾಂಗ್ಟಾಕ್ : ಸಿಕ್ಕಿಮ್ ರಾಜ್ಯದ ಮೊಟ್ಟಮೊದಲ ಏರ್ಪೋರ್ಟ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದಾರೆ. ಈ ಸಂದರ್ಭ ಸಿಕ್ಕಿಮ್ ಸಿಎಂ ಪವನ್ ಚಾಮ್ಲಿಂಗ್ ಮತ್ತು ಕೇಂದ್ರ ಸಚಿವ ಸುರೇಶ ಪ್ರಭುಅವರು ಉಪಸ್ಥಿತರಿದ್ದರು. ಪಾಕ್ಯೋಂಗ್ ಏರ್ಪೋರ್ಟ್ ಸಿಕ್ಕಿಮ್ನ ಮೊಟ್ಟಮೊದಲ ವಾನಿಜ್ಯ ವಿಮಾನನಿಲ್ದಾಣವಾಗಿದ್ದು,...
Date : Monday, 24-09-2018
ನವದೆಹಲಿ: ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಅವರು ನೀಡಿದ ಹೇಳಿಕೆಯನ್ನು ಹಿಡಿದುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ....
Date : Monday, 24-09-2018
ಮುಂಬೈ : ಗಳಿಸಿದ್ದನ್ನು ಸಮಾಜಕ್ಕೆ ಹಿಂತಿರುಗಿಸುವುದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸದಾ ಮುಂದು. ದಾನ , ಧರ್ಮಗಳನ್ನು ಮಾಡುವ ಮೂಲಕ ಅವರು ಇತರರಿಗೆ ಮಾದರಿ ಎನಿಸಿಕೊಂಡ ನಟ. ಈಗಾಗಲೇ ಸಾಕಷ್ಟು ಹಣವನ್ನು ರೈತರಿಗೆ, ಹುತಾತ್ಮ ಯೋಧರ ಕುಟುಂಬಗಳಿಗೆ ದಾನ ನೀಡಿರುವ...
Date : Monday, 24-09-2018
ದೇಶದ ಮೊದಲ ವೇದಿಕ ಸಂಶೋಧನಾ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ(ಸೆಪ್ಟೆಂಬರ್ 18)ರಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಪ್ರಧಾನಿ ಮೋದಿಯವರು ತಮ್ಮ ಜನ್ಮದಿನದಂದು ಸ್ವಕ್ಷೇತ್ರಕ್ಕೆ ತೆರಳಿದ ಸಂದರ್ಭದಲ್ಲಿ ಈ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮರೆತುಹೋದ...
Date : Monday, 24-09-2018
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ದೇಶದಲ್ಲಿ ನೆಲೆಯೂರಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಬಿಜೆಪಿ ದೆಹಲಿ ಘಟಕ ಆಯೋಜಿಸಿದ್ದ ಪೂರ್ವಾಂಚಲ ಮಹಾಕುಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ವಲಸಿಗರನ್ನು ರಕ್ಷಣೆ ಮಾಡುವ ಮೂಲಕ...
Date : Monday, 24-09-2018
ನವದೆಹಲಿ: ಭಾರತ ಭಾನುವಾರ ರಾತ್ರಿ ಇಂಟರ್ಸೆಪ್ಟರ್ ಮಿಸೈಲ್ ಪರೀಕ್ಷೆಯನ್ನು ಓರಿಸ್ಸಾ ಕರಾವಳಿಯಲ್ಲಿ ಯಶಸ್ವಿಯಾಗಿ ನಡೆಸಿದೆ. ಈ ಮೂಲಕ 2 ಲೇಯರ್ಗಳ ಬ್ಯಾಲಿಸ್ಟಿಕ್ ಮಿಸೈಲ್ ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಹಿಂದೆ ವ್ಹೀಲರ್ ದ್ವೀಪ ಎಂದು ಕರೆಯಲ್ಪಡುತ್ತಿದ್ದ ಈಗಿನ ಅಬ್ದುಲ್...