ನವದೆಹಲಿ: ದೇಶದಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತಿರುವ ಕೇಂದ್ರ ಸರ್ಕಾರದ ಭಾಗವಾದ ‘ಇನ್ವೆಸ್ಟ್ ಇಂಡಿಯಾ’ ಮಂಡಳಿಗೆ ವಿಶ್ವಸಂಸ್ಥೆಯ ಉನ್ನತ ಹೂಡಿಕೆ ಉತ್ತೇಜನಾ ಪ್ರಶಸ್ತಿ ಲಭಿಸಿದೆ.
ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಲು ಮಹತ್ವದ ಉತ್ತೇಜನವನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಇನ್ವೆಸ್ಟ್ ಇಂಡಿಯಾಗೆ ಅ.22ರಂದು ‘ಯುಎನ್ ಇನ್ವೆಸ್ಟ್ಮೆಂಟ್ ಪ್ರೊಮೋಷನ್ ಅವಾರ್ಡ್’ ಲಭಿಸಿದೆ.
ಯುಎನ್ ಕನ್ವೆನ್ಷನ್ ಆನ್ ಟ್ರೇಡ್ ಆಂಡ್ ಡೆವಲಪ್ಮೆಂಟ್( ಯುಎನ್ಸಿಟಿಎಡಿ) ಜಿನೆವಾದಲ್ಲಿ ಸೋಮವಾರ ಆಯೋಜನೆಗೊಳಿಸಿದ್ದ ವರ್ಲ್ಡ್ ಇನ್ವೆಸ್ಟ್ಮೆಂಟ್ ಫೋರಂನಲ್ಲಿ ಅರ್ಮೆನಿಯನ್ ಅಧ್ಯಕ್ಷ ಅರ್ಮನ್ ಸರ್ಕಿಸಿಯನ್ ಅವರು ಈ ಅವಾರ್ಡ್ನ್ನು ಇನ್ವೆಸ್ಟ್ ಇಂಡಿಯಾ ಸಿಇಓ ದೀಪಕ್ ಬಾಗ್ಲಾ ಅವರಿಗೆ ಪ್ರದಾನ ಮಾಡಿದರು.
ಹೂಡಿಕೆಯನ್ನು ಉತ್ತೇಜಿಸುತ್ತಿರುವ ಏಜೆನ್ಸಿಗಳಿಗೆ ಮತ್ತು ಅದರ ಸರ್ಕಾರಗಳಿಗೆ ಗೌರವ ನೀಡುವ ಸಲುವಾಗಿ ಯುಎನ್ ಕಾನ್ಫರೆನ್ಸ್ ಆನ್ ಟ್ರೇಡ್ ಆಂಡ್ ಡೆವಲಪ್ಮೆಂಟ್ ಈ ಪ್ರಶಸ್ತಿಯನ್ನು ನೀಡುತ್ತದೆ.
source: www.jagranjosh.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.