×
Home About Us Advertise With s Contact Us

FedEx ಅಧ್ಯಕ್ಷರಾಗಿ ಭಾರತೀಯ ಸಂಜಾತ ಸುಬ್ರಹ್ಮಣಿಯನ್ ನೇಮಕ

ನವದೆಹಲಿ: ಅಮೆರಿಕಾದ ಬಹುರಾಷ್ಟ್ರೀಯ ಕೊರಿಯರ್ ಡೆಲಿವರಿ ಸಂಸ್ಥೆ FedEx ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಸಂಜಾತ ರಾಜೇಶ್ ಸುಬ್ರಹ್ಮಣಿಯಮ್ ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ರಾಜೇಶ್ ಸುಬ್ರಹ್ಮಣಿಯನ್ ಅವರು FedEx ಕಾರ್ಪೋರೇಶನ್‌ನ ಉಪಾಧ್ಯಕ್ಷ, ಮಾರ್ಕೆಟಿಂಗ್ ಮುಖ್ಯಸ್ಥ, ಕಮ್ಯೂನಿಕೇಶನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ....

Read More

ಸಿರಿಯಾದಿಂದ ವಾಪಾಸ್ಸಾಗುತ್ತಿವೆ ಅಮೆರಿಕಾ ಸೇನಾಪಡೆಗಳು

ವಾಷಿಂಗ್ಟನ್: ಇಸಿಸ್ ಉಗ್ರರ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿರುವುದಾಗಿ ಘೋಷಿಸಿಕೊಂಡಿರುವ ಅಮೆರಿಕಾ, ಸಿರಿಯಾದಲ್ಲಿನ ತನ್ನ ಪಡೆಯನ್ನು ವಾಪಾಸ್ ಪಡೆದುಕೊಳ್ಳುತ್ತಿದೆ. ಖಲಿಫತ್ ಸಾಮ್ರಾಜ್ಯವನ್ನು ಹೊಡೆದುರುಳಿಸಿರುವುದಾಗಿ ಘೋಷಿಸಿರುವ ಅಮೆರಿಕಾ, ಇಸಿಸ್ ನಾಶದ ಬಗ್ಗೆ ಯಾವುದೇ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಯುಎಸ್ ಪಡೆಗಳು ಸಿರಿಯಾದಿಂದ ಹಿಂದಿರುಗುತ್ತಿವೆ...

Read More

ಧಾರ್ಮಿಕ ಸ್ವಾತಂತ್ರ್ಯ ಪ್ರತಿಪಾದಿಸುವ ಯುಎಸ್ ಮಂಡಳಿಗೆ ಭಾರತೀಯ ಸಂಜಾತೆ ಮುಖ್ಯಸ್ಥೆ

ವಾಷಿಂಗ್ಟನ್: ಅಮೆರಿಕಾದ ಇಂಟರ್‌ನ್ಯಾಷನಲ್ ರಿಲೀಜಿಯಸ್ ಫ್ರೀಡಂ ಕಮಿಷನ್(USCIRF)ಗೆ ಭಾರತೀಯ ಮೂಲದ ನಾಗರಿಕ ಹಕ್ಕುಗಳ ವಕೀಲೆ ಅರುಣಿಮಾ ಭಾರ್ಗವ ಅವರು ಕಮಿಷನರ್ ಆಗಿ ನೇಮಕವಾಗಿದ್ದಾರೆ. ಇಂಟರ್‌ನ್ಯಾಷನಲ್ ರಿಲೀಜಿಯಸ್ ಫ್ರೀಡಂ ಕಮಿಷನ್, ಯುಎಸ್ ಕಾಂಗ್ರೆಸ್ ಸ್ಥಾಪನೆ ಮಾಡಿರುವ ಸ್ವತಂತ್ರ, ಉಭಯಪಕ್ಷೀಯ ಸಂಯುಕ್ತ ಘಟಕವಾಗಿ. ಧಾರ್ಮಿಕ...

Read More

ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಮೊದಲ ಹಿಂದೂ ಆಗಲಿದ್ದಾರಾ ತುಳಸಿ ಗಬ್ಬಾರ್ಡ್?

ವಾಷಿಂಗ್ಟನ್; ಅಮೆರಿಕಾದ ಮೊತ್ತ ಮೊದಲ ಹಿಂದೂ ಸಂಸದೆಯಾಗಿರುವ ತುಳಸಿ ಗಬ್ಬಾರ್ಡ್ ಅವರು, 2020ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಅತ್ಯಂತ ಗಂಭೀರ ಚಿಂತನೆಯನ್ನು ನಡೆಸುತ್ತಿದ್ದಾರೆ. ಅಧ್ಯಕ್ಷೀಯ ಹುದ್ದೆಯನ್ನೇರುವ ತಮ್ಮ ಇಂಗಿತವನ್ನು ಅವರೇ ಬಹಿರಂಗಪಡಿಸಿದ್ದಾರೆ. ಡೆಮಾಕ್ರಾಟಿಕ್ ಪಕ್ಷದ ಗಬ್ಬಾರ್ಡ್ ಅವರು, ಯುಎಸ್ ಹೌಸ್ ಆಫ್...

Read More

ಶಾಂತಿ ಸ್ಥಾಪನೆಗೆ ಶ್ರಮಿಸುತ್ತಿರುವ ಮೋದಿಯನ್ನು ಬೆಂಬಲಿಸಿ: ಪಾಕ್‌ಗೆ ಅಮೆರಿಕಾ

ವಾಷಿಂಗ್ಟನ್: ಪಾಕಿಸ್ಥಾನದ ವಿರುದ್ಧ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಶಾಂತಿ ಸ್ಥಾಪನೆಯ ಪ್ರಯತ್ನಕ್ಕೆ ಕೈಜೋಡಿಸುವಂತೆ ಆ ದೇಶಕ್ಕೆ ಸಲಹೆ ನೀಡಿದ್ದಾರೆ. ಸೋಮವಾರ ಪೆಂಟಗಾನ್‌ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಸ್ವಾಗತಿಸಿ ಮಾತನಾಡಿದ...

Read More

ಅಮೆರಿಕಾದ 41ನೇ ಅಧ್ಯಕ್ಷ ಜಾರ್ಜ್ H.W ಬುಶ್ ವಿಧಿವಶ

ವಾಷಿಂಗ್ಟನ್: ಅಮೆರಿಕಾದ 41ನೇ ಅಧ್ಯಕ್ಷ ಜಾರ್ಜ್ ಎಚ್. ಡಬ್ಲ್ಯೂ ಬುಶ್ ನ.30ರಂದು ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ಅಮೆರಿಕಾ ಮೂಲಗಳು ಸ್ಪಷ್ಟಪಡಿಸಿವೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅತ್ಯಂತ ಸುದೀರ್ಘ ಅವಧಿ ಬದುಕಿದ ಅಮೆರಿಕಾದ ಅಧ್ಯಕ್ಷ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಎರಡನೇ ವಿಶ್ವಯುದ್ಧದ...

Read More

ಪಾಕ್‌ಗೆ 11 ಸಾವಿರ ಕೋಟಿ ರೂ. ನೆರವು ರದ್ದುಗೊಳಿಸಿದ ಟ್ರಂಪ್

ವಾಷಿಂಗ್‌ಟನ್: ಭಯೋತ್ಪಾದನೆಯನ್ನು ಪೋಷಿಸುತ್ತಾ ಬಂದಿರುವ ಪಾಕಿಸ್ಥಾನಕ್ಕೆ ಅಮೆರಿಕಾ ಸರ್ಕಾರ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ನಿರ್ದೇಶನದಂತೆ 11 ಸಾವಿರ ಕೋಟಿ ಭದ್ರತಾ ನೆರವನ್ನು ನಿಷೇಧಿಸಲಾಗಿದೆ. ಪಾಕಿಸ್ಥಾನದ ನಡೆಗಳು ಅಮೆರಿಕಾವನ್ನು ನಿರಾಶೆಗೊಳಿಸಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು...

Read More

ಕ್ಯಾಲಿಫೋರ್ನಿಯಾದ ಅನಾಹೆಮ್ ನಗರದ ಮೇಯರ್ ಆದ ಭಾರತೀಯ ಸಂಜಾತ

ವಾಷಿಂಗ್ಟನ್: ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಂಜಾತ ಹರಿ ಸಿಂಗ್ ಸಿಧು ಅವರು ಕ್ಯಾಲಿಫೋರ್ನಿಯಾದ ಅತೀ ದೊಡ್ಡ ನಗರ ಅನಾಹೆಮ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಯಶಸ್ವಿ ಉದ್ಯಮಿಯೂ ಆಗಿರುವ ಹರಿ ಸಿಂಗ್, 2002ರಿಂದ 2012ರವರೆಗೆ 8 ವರ್ಷಗಳ ಕಾಲ ಅನಾಹೆಮ್ ಸಿಟಿ ಕೌನ್ಸಿಲ್‌ನಲ್ಲಿ ಸದಸ್ಯರಾಗಿ...

Read More

ಇರಾಕ್‌ನಲ್ಲಿ ಯುಎಸ್‌ನಿಂದ ವೈಮಾನಿಕ ದಾಳಿ: 25 ಇಸಿಸ್ ಉಗ್ರರ ಹತ್ಯೆ

ಕಿರ್‌ಕುಕು: ಇರಾಕ್‌ನ ಉತ್ತರ ಪ್ರಾಂತ್ಯದ ಕಿರ್‌ಕುಕ್ ಪ್ರದೇಶದಲ್ಲಿ ಭಾನುವಾರ ಅಮೆರಿಕಾ ವೈಮಾನಿಕ ದಾಳಿ ನಡೆಸಿದ್ದು, 25 ಇಸಿಸ್ ಉಗ್ರರು ಹತ್ಯೆಯಾಗಿದ್ದಾರೆ ಎನ್ನಲಾಗಿದೆ. ದಾಳಿಯಿಂದಾಗಿ ಇಸಿಸ್‌ನ ಎರಡು ನೆಲೆಗಳು ಧ್ವಂಸಗೊಂಡಿದ್ದು, ಹಲವಾರು ಉಗ್ರರು ಅವಿತುಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಇಸಿಸ್ ಮೇಲೆ ವಿಜಯ...

Read More

ನೆದರ್‌ಲ್ಯಾಂಡ್: ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಾಣವಾಗಿದೆ ತೇಲುವ ಪಾರ್ಕ್

ಲಂಡನ್: ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಗೊಂದಲ ಇನ್ನೂ ಇದೆ. ಆದರೆ ಯುರೋಪಿಯನ್ ನಗರಗಳು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಪಾರ್ಕ್‌ಗಳನ್ನೇ ನಿರ್ಮಾಣ ಮಾಡುತ್ತಿದೆ. ಹೌದು, ನೆದರ್‌ಲ್ಯಾಂಡ್‌ನ ರೊಟರ್‌ಡ್ಯಾಂನಲ್ಲಿ ತೇಲುವ...

Read More

 

Recent News

Back To Top
error: Content is protected !!