ವಾಷಿಂಗ್ಟನ್: ಶುಕ್ರವಾರ ಓವಲ್ ಕಚೇರಿಯಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ಮಾತುಕತೆ ನಡೆದಿದ್ದು, ಈ ಮಾತುಕತೆ ಜಟಾಪಟಿಯಲ್ಲಿ ಅಂತ್ಯಗೊಂಡಿದೆ. ಬಳಿಕ ಝೆಲನ್ಸ್ಕಿ ಅವರನ್ನು ಟೀಕಿಸಿ ಟ್ರಂಪ್ ಹೇಳಿಕೆ ನೀಡಿದ್ದಾರೆ.
ಖನಿಜ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ಉಭಯ ನಾಯಕರು ಜೊತೆಗೂಡಿದ್ದರು. ಈ ವೇಳೆ ಟ್ರಂಪ್, ” ಝೆಲೆನ್ಸ್ಕಿ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಚೆಲ್ಲಾಟವಾಡುತ್ತಿದ್ದಾರೆ, ಉಕ್ರೇನಿಯರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕಾ ಉಕ್ರೇನ್ಗೆ ಅನೇಕ ವರ್ಷಗಳಿಂದ ನೆರವು ನೀಡುತ್ತಲೇ ಬಂದಿದೆ, ಆದರೆ ನೀವು ಅಮೆರಿಕಾ ಜನರಿಗೆಯೇ ಅವಮಾನ ಮಾಡಿದ್ದೀರಿ, ಯುದ್ಧವನ್ನು ನಿಲ್ಲಿಸುವಂತೆ ಸಾಕಷ್ಟು ಮನವಿ ಮಾಡಿದರೂ ನಮ್ಮ ಮಾತನ್ನು ನೀವು ಕೇಳಿಸಿಕೊಳ್ಳುತ್ತಿಲ್ಲ, ಕದನ ವಿರಾಮಕ್ಕೆ ಒಪ್ಪುತ್ತಿಲ್ಲ. ಸಾವನ್ನು ತಡೆಯಲು ಅಮೆರಿಕಾ ಪ್ರಯತ್ನಿಸಿದರೆ ನೀವು ಮಾತ್ರ ಹೆಣ ನೋಡಲು ಬಯಸುತ್ತೀರಿ ಎಂದು ಟ್ರಂಪ್ ಎಂದಿದ್ದಾರೆ.
ಈ ಮಾತುಗಳಿಂದ ಕುಪಿತಗೊಂಡ ಝೆಲೆನ್ಸ್ಕಿ ಒಪ್ಪಂದಕ್ಕೆ ಸಹಿ ಹಾಕದೆಯೇ ಸಭೆಯ ಮಧ್ಯದಲ್ಲೇ ಹೊರ ನಡೆದಿದ್ದಾರೆ.
ಉಕ್ರೇನ್ ಯಾವುದೇ ರಾಷ್ಟ್ರದ ವ್ಯಾಪ್ತಿಗೂ ಒಳಪಟ್ಟಿಲ್ಲ, ನಾವು ಯಾರ ಮೇಲೂ ಆಕ್ರಮಣ ಮಾಡಿಲ್ಲ, ರಷ್ಯಾವೇ ನಮ್ಮ ಮೇಲೆ ಆಕ್ರಮಣ ಮಾಡಿದ್ದು ಎನ್ನುತ್ತಾ ಸಭೆಯಿಂದ ಹೊರ ನಡೆದಿದ್ದಾರೆ. ಬಳಿಕ ಎಕ್ಸ್ ಪೋಸ್ಟ್ ಮಾಡಿ, ಬೆಂಬಲಕ್ಕಾಗಿ ಅಮೆರಿಕಾದ ಜನತೆಗೆ ಧನ್ಯವಾದಗಳು ಎಂದಿದ್ದಾರೆ.
At first glance, I thought this was AI-generated, but then I double-checked. This is real! Trump giving a public beating to Zelensky! Seems like the Russia-Ukraine war will soon end on Russia's terms. pic.twitter.com/zvqyCGvcWG
— THE SKIN DOCTOR (@theskindoctor13) February 28, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.