Date : Monday, 22-02-2016
ಸುವಾ: ಪೆಸಿಫಿಕ್ ದ್ವೀಪ ರಾಷ್ಟ್ರ ಫಿಜಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಬಿರುಗಾಳಿಗೆ 17 ಮಂದಿ ಸಾವನ್ನಪ್ಪಿರುವ ಬಗ್ಗೆ ಕೇರ್ ಆಸ್ಟ್ರೇಲಿಯಾ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಫಿಜಿಗೆ ಆಗಮಿಸಿದ್ದ ಅಂತಾರಾಷ್ಟ್ರೀಯ ಪ್ರವಾಸಿಗರು ತಕ್ಷಣವೇ ಇಲ್ಲಿಂದ ಹಿಂದಿರುಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ’ವಿನ್ಸ್ನ್’...
Date : Monday, 22-02-2016
ಢಾಕಾ: ಬಾಂಗ್ಲಾದೇಶದ ದೇಗುಲವೊಂದರಲ್ಲೇ ಅರ್ಚಕರೊಬ್ಬರನ್ನು ದುಷ್ಕರ್ಮಿಗಳು ಭಾನುವಾರ ಚುಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆಯ ಹೊಣೆಯನ್ನು ಇಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಢಾಕಾದಿಂದ 308 ಕಿ.ಮೀ. ದೂರದಲ್ಲಿರುವ ಪಂಚಘರ್ನ ದೇವಿಗನಿ ದೇಗುಲದಲ್ಲಿ 55 ವರ್ಷದ ಅರ್ಚಕ ಜೋಗೇಶ್ವರ್ ರಾಯ್ ಎಂಬುವವರನ್ನು ಕೊಂದು ಹಾಕಲಾಗಿದೆ....
Date : Saturday, 20-02-2016
ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿಯಾಗಿ ಕ್ರಿಸ್ಟೀನ್ ಲಗಾರ್ಡೆ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಮುಂಬರುವ ಜೂನ್ ತಿಂಗಳಿನಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದು, 5 ವರ್ಷಗಳ ಕಾಲ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಐಎಂಎಫ್ ಕಾರ್ಯಕಾರಿ ಮಂಡಳಿ ಸದಸ್ಯರ ಒಪ್ಪಿಗೆ ಮೇರೆಗೆ ಈ...
Date : Saturday, 20-02-2016
ಡಮಾಸ್ಕಸ್: ಅಲೆಪ್ಪೋದಲ್ಲಿ ಕಳೆದ ತಿಂಗಳು ನಡೆದ ಇಸಿಸ್ ದಾಳಿ ಕಳೆದ ಒಂದು ವರ್ಷದಲ್ಲೇ 89ನೇ ಪ್ರಕರಣವಾಗಿದೆ. ಇಸಿಸ್ ಸಂಘಟನೆ ಇಂತಹ ಆತ್ಮಾಹುತಿ ದಾಳಿಗಳನ್ನು ನಡೆಸಲು ಮಕ್ಕಳು, ಹದಿಹರೆಯದವರನ್ನು ನಿಯೋಜಿಸುತ್ತಿದೆ ಎಂದು ಹೊಸ ಸಂಶೋಧನೆ ಪ್ರಕಾರ ತಿಳಿದು ಬಂದಿದೆ. ಈ ಭಯೋತ್ಪಾದಕ ಸಂಘಟನೆ...
Date : Saturday, 20-02-2016
ಮುಂಬಯಿ: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರನ ಮಗ ಸೋಹೇಲ್ ಕಸ್ಕರ್ನನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಆರೋಪದ ಮೇರೆಗೆ ಬಂಧಿಸಲಾಗಿದೆ. 36 ವರ್ಷದ ಸೋಹೇಲ್ ಕಸ್ಕರ್ ವಿದೇಶಿ ಭಯೋತ್ಪಾದಕರಿಗೆ ಸಲಕರಣೆಗಳನ್ನು ಸಾಗಿಸುವುದು, ಕಾನೂನು ಬಾಹಿರವಾಗಿ ಕ್ಷಿಪಣಿ...
Date : Friday, 19-02-2016
ಇಸ್ಲಾಮಾಬಾದ್: ಮುಂದಿನ ತಿಂಗಳು ವಾಷಿಂಗ್ಟನ್ಗೆ ಪ್ರಯಾಣಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಮಾರ್ಚ್ 31 ಮತ್ತು ಎಪ್ರಿಲ್ 1ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ನ್ಯೂಕ್ಲಿಯರ್ ಸಮಿತ್ನ್ನು ಏರ್ಪಡಿಸಿದ್ದು,...
Date : Wednesday, 17-02-2016
ಜಿನೇವಾ: ಜೂನ್ ತಿಂಗಳ ಒಳಗಾಗಿ ಝಿಕಾ ವೈರಸ್ ಎದುರಿಸುವ ಅದರ ಲಸಿಕೆ ಹಾಗೂ ರೋಗ ನಿರೋಧಕಗಳನ್ನು ತಯಾರಿಸಲು 56 ಮಿಲಿಯನ್ ಡಾಲರ್ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಈ ಪೈಕಿ 25 ಮಿಲಿಯನ್ ಡಾಲರ್ ವಿಶ್ವ ಸಂಸ್ಥೆ ತನ್ನಲ್ಲೇ ಇರಿಸಲಿದ್ದು,...
Date : Wednesday, 17-02-2016
ಕೊಲಂಬೋ: ’ಪ್ರಾಜೆಕ್ಟ್ ಲೂನ್’ ಎಂದು ಕರೆಯಲ್ಪಡುವ ಗೂಗಲ್ನ ಬಲೂನ್ ಚಾಲಿತ ಹೈ-ಸ್ಪೀಡ್ ಇಂಟರ್ನೆಟ್ನ್ನು ಶ್ರೀಲಂಕಾದಲ್ಲಿ ಪರೀಕ್ಷಾರ್ಥವಾಗಿ ಮೊದಲ ಬಾರಿಗೆ ಆರಂಭಿಸಲಾಗಿದೆ. ಕೊಲಂಬೋ ಜೊತೆಗಿನ ಜಂಟಿ ಯೋಜನೆ ಇದಾಗಿದೆ ಎಂದು ಶ್ರೀಲಂಕಾದ ಹಿರಿಯ ಐಟಿ ಅಧಿಕಾರಿ ತಿಳಿಸಿದ್ದಾರೆ. ಮೂರು ಬಲೂನ್ಗಳ ಪೈಕಿ ಒಂದು...
Date : Tuesday, 16-02-2016
ಮೆಕ್ಸಿಕೋ ಸಿಟಿ: ಹೊರಸೂಸುವಿಕೆ ಮಾನದಂಡಗಳನ್ನು ಅನುಸರಿಸುವ ಅಧಿಕೃತ ಪ್ರಮಾಣಪತ್ರಗಳನ್ನು ಹೊಂದದೆ 2016ನೇ ಸಾಲಿನಲ್ಲಿ 45,494 ವಾಹನಗಳನ್ನು ಮಾರಾಟ ಮಾಡಿದ ವೋಕ್ಸ್ವ್ಯಾಗನ್ ಮೆಕ್ಸಿಕೋ ವಿರುದ್ಧ ಮೆಕ್ಸಿಕೋ ರೂ.8.9 ಮಿಲಿಯನ್ ಡಾಲರ್ ದಂಡ ವಿಧಿಸಿದೆ. ವೋಕ್ಸ್ವ್ಯಾಗನ್ ಹೊರಸೂಸುವಿಕೆ ಪರೀಕ್ಷೆಗಳಿಗೆ ಸಾಫ್ಟ್ವೇರ್ ಬಳಸುವ ಮೂಲಕ ಮೋಸ...
Date : Tuesday, 16-02-2016
ನವದೆಹಲಿ: ವೆಸ್ಟರ್ನ್ ರಷ್ಯಾದ ಮೆಡಿಕಲ್ ಯೂನಿರ್ಸಿಟಿಯಲ್ಲಿ ನಡೆದ ಬೆಂಕಿ ಅವಘಢದಲ್ಲಿ ಭಾರತದ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ. ಈ ವಿಷಯವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ರಷ್ಯಾದ ಸ್ಮೊಲೆನಸ್ಕ್ ಮೆಡಿಕಲ್ ಅಕಾಡೆಮಿಯಲ್ಲಿ ನಡೆದ ಬೆಂಕಿ...