ವಾಷಿಂಗ್ಟನ್: ಅಮೆರಿಕಾದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೋಮವಾರ ಇನ್ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಹಾಕಿ, ಇದು ಮಹಾತ್ಮ ಗಾಂಧಿ ಹೇಳಿದ್ದು ಎಂದಿದ್ದರು.
ಆದರೆ ಗಾಂಧೀಜಿ ಆ ಮಾತನ್ನು ಎಂದೂ ಹೇಳೇ ಇಲ್ಲ, ಇದು ತಪ್ಪು ಸಂದೇಶ ಎಂದು ಟ್ರಂಪ್ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯನ್ನು ಆರಂಭಿಸಿದ್ದಾರೆ.
’ಮೊದಲು ನಿಮ್ಮನ್ನು ಅವರು ನಿರ್ಲಕ್ಷ್ಯಿಸುತ್ತಾರೆ, ಬಳಿಕ ನಿಮ್ಮನ್ನು ನೋಡಿ ನಗುತ್ತಾರೆ, ಬಳಿಕ ನಿಮ್ಮೊಂದಿಗೆ ಹೋರಾಡುತ್ತಾರೆ, ಬಳಿಕ ನೀವು ಜಯಿಸುತ್ತೀರಿ-ಮಹಾತ್ಮ ಗಾಂಧೀ’ ಎಂದು ಟ್ರಂಪ್ ಪೋಸ್ಟ್ ಮಾಡಿದ್ದರು.
ಆದರೆ ಗಾಂಧೀ ಈ ಮಾತನ್ನು ಹೇಳಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅಮೆರಿಕಾದ ಮಾಧ್ಯಮಗಳು ಹೇಳಿವೆ.
ಟ್ರಂಪ್ ಪ್ರಚಾರ ತಂಡ ಈ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.