ಪುಣೆ: ಓಲಾ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಪುಣೆಯ ಓಂ ಪೈತನೆ ಎಂಬುವವರು ಇದೀಗ ಸೇನಾಧಿಕಾರಿಯಾಗಿ ದೇಶ ಸೇವೆ ಮಾಡಲು ಸಿದ್ಧರಾಗಿದ್ದಾರೆ. ಮಾ.10ರಂದು ಅವರು ಆಫೀಸರ್ಸ್ ಟ್ರೈನಿಂಗ್ ಅಕಾಡಮಿಯಿಂದ ಪಾಸ್ಔಟ್ ಆಗಿದ್ದಾರೆ.
ಜೀವನ ನಿರ್ವಹಣೆಗಾಗಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಓಂ, ಜೊತೆಜೊತೆಗೆ ಓದುತ್ತಿದ್ದರು. ಅಲ್ಲದೇ ಆರ್ಮಿ ಸೇರುವ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದರು. ಇದೀಗ ಅವರ ಶ್ರಮದ ಫಲವಾಗಿ ಸೇನಾಧಿಕಾರಿಯಾಗಿ ನಿಯೋಜಿತರಾಗುತ್ತಿದ್ದಾರೆ. ಅವರ ಈ ಸಾಧನೆ ಅವರ ಕುಟುಂಬವನ್ನು ಹೆಮ್ಮೆ ಪಡುವಂತೆ ಮಾಡಿದೆ.
ಪುಣೆಯ ತೊಂಡಲ್ ಗ್ರಾಮದವರಾದ ಓಂ ಅವರ ತಂದೆ 25 ವರ್ಷಗಳಿಂದ ಚಾಲಕ ವೃತ್ತಿ ಮಾಡುತ್ತಿದ್ದಾರೆ. ಮಗನನ್ನು ಸೇನಾಧಿಕಾರಿಯಾಗಿ ಮಾಡುವ ಕನಸು ಅವರಿಗಿತ್ತು. ಅದೀಗ ಸಾಕಾರಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.