ನವದೆಹಲಿ: ದೂರದರ್ಶನ ಕಾಶ್ಮೀರ ಚಾನೆಲ್ನಲ್ಲಿ ಜಾತ್ಯಾತೀತತೆ, ಶಾಂತಿ, ದೇಶಭಕ್ತಿಯನ್ನು ಪ್ರಚುರಪಡಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರಗೊಳಿಸಲು ಕೇಂದ್ರ ಚಿಂತನೆ ನಡೆಸಿದ್ದು, ಅದಕ್ಕಾಗಿ ಹಲವಾರು ಪ್ರಸ್ತಾವಣೆಗಳನ್ನು ಪರಿಶೀಲನೆ ನಡೆಸುತ್ತಿದೆ.
ಖ್ಯಾತ ಟಿವಿ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ಪತಿ’ ಮತ್ತು ಇತ ಸಂಗೀತ, ನೃತ್ಯ ಪ್ರತಿಭಾ ಕಾರ್ಯಕ್ರಮಗಳನ್ನು ಕೇಂದ್ರ ಗೃಹಸಚಿವಾಲಯ ಡಿಡಿ ಕಾಶ್ಮೀರದಲ್ಲಿ ಪ್ರಸಾರಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ನೃತ್ಯ, ಸಂಗೀತ ಕಾರ್ಯಕ್ರಮಗಳು ಮನೋರಂಜನೆಯ ಸಲುವಾಗಿಯಾದರೆ, ಕಾಶ್ಮೀರಿಗರಿಗೆ ಭಾರತದ ಇತರ ಸಂಸ್ಕೃತಿಯ ಬಗ್ಗೆ ಪರಿಚಯಿಸುವ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಭಾರತದ ಪ್ರಜಾಪ್ರಭುತ್ವ ಮೌಲ್ಯಗಳು, ಶಾಂತಿ, ರಾಷ್ಟ್ರೀಯ ಏಕತೆ, ಕೋಮು ಸೌಹಾರ್ದತೆ, ಜಾತ್ಯಾತೀತೆಯ ಮೌಲ್ಯಗಳು, ದೇಶಭಕ್ತಿಯ ಥೀಮ್ವುಳ್ಳ ಕಾರ್ಯಕ್ರಮಗಳು ಡಿಡಿ ಕಾಶ್ಮೀರದಲ್ಲಿ ಶೀಘ್ರವೇ ಪ್ರಸಾರವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.