ಇಂಧೋರ್: ಮಧ್ಯಪ್ರದೇಶದ ಜನರು ಪೊಲೀಸ್ ವಾಹನಗಳಿಗಿಂತ ಹೆಚ್ಚಾಗಿ ಹಳದಿ ವಾಹನಗಳಿಗೆ ಹೆಚ್ಚು ಹೆದರುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಬಿಜೆಪಿಯ ಮಾಲಿನಿ ಗೌರ್ ಅವರು ತೆಗೆದುಕೊಂಡಂತಹ ಕಟ್ಟುನಿಟ್ಟಿನ ಕ್ರಮ.
ರಸ್ತೆಯಲ್ಲಿ ಕಸ ಹಾಕುವವರ ವಿರುದ್ಧ ಸಮರ ಸಾರಿರುವ ಅವರು, ದಿನನಿತ್ಯ ಹಳದಿ ವಾಹನಗಳನ್ನು ಗಸ್ತು ತಿರುಗಿಸುತ್ತಿದ್ದರು. ಈ ವಾಹನಗಳು ಕಸ ಹಾಕುವವರಿಗೆ ದಂಡ ವಿಧಿಸುತ್ತದೆ.
ರೂ.100ರಿಂದ 1 ಲಕ್ಷ ರೂಪಾಯಿವರೆಗೂ ದಂಡ ವಿಧಿಸಲಾಗುತ್ತಿದೆ. ಜನನನಿಬಿಡ ಪ್ರದೇಶದಲ್ಲಿ ಕಸ ಹಾಕುವ ವ್ಯಾಪಾರಿಗಳಿಗೆ ಹೆಚ್ಚು ದಂಡವನ್ನು ವಿಧಿಸಲಾಗುತ್ತದೆ.
ಇಂಧೋರ್ ದೇಶದಲ್ಲೇ ಸ್ವಚ್ಛ ನಗರವೆಂಬ ಕೀರ್ತಿ ಪಡೆಯಲು ಅಲ್ಲಿನ ಮಹಾನಗರ ಪಾಲಿಕೆ ಮತ್ತು ಅದರ ಮೇಯರ್ ಮಾಲಿನಿ ಅವರ ಪಾಥ್ರ ಮಹತ್ವದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.