ಹೈದರಾಬಾದ್: ತಮ್ಮ ಅಪ್ರಾಪ್ತ ಮಕ್ಕಳ ಕೈಗೆ ವಾಹನಗಳನ್ನು ನೀಡಿ ಅವರು ಅದನ್ನು ಚಲಾಯಿಸುವಂತೆ ಮಾಡಿದ 10 ಪೋಷಕರನ್ನು ಜೈಲಿಗೆ ಕಳುಹಿಸುವಂತೆ ಹೈದರಾಬಾದ್ನ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಅಲ್ಲದೇ ಈ ಪೋಷಕರಿಂದ ಮೋಟಾರು ವಾಹನ ಕಾಯ್ದೆ 180ರಡಿ ರೂ.500 ದಂಡವನ್ನೂ ಸ್ವೀಕರಿಸಲಾಗಿದೆ.
ಅಲ್ಲದೇ ವಾಹನ ಚಲಾಯಿಸುವ 14 ವರ್ಷದೊಳಗಿನ ಮಕ್ಕಳನ್ನು ಸಹ ಒಂದು ದಿನದ ಮಟ್ಟಿಗೆ ಬಾಲಪರಾಧ ಕೇಂದ್ರದಲ್ಲಿ ಇಡುವ ಅವಕಾಶವೂ ಈ ಕಾನೂನಿನಡಿ ಇದೆ.
ಈ ಎಲ್ಲಾ 10ಪ್ರಕರಣಗಳಲ್ಲಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಕ್ಕಳನ್ನು ಮತ್ತು ಪೋಷಕರನ್ನು ಟ್ರಾಫಿಕ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನ ಕೌನ್ಸೆಲಿಂಗ್ಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಬಳಿಕ ವಿಚಾರಣೆ ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.