ನವದೆಹಲಿ: ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಭಾರತದಲ್ಲಿ ಹೋಳಿ ಹಬ್ಬದ ಬಗ್ಗೆ ಅಂಚೆ ಚೀಟಿಯಿಲ್ಲ. ಆದರೆ ದೂರದ ಗಯಾನ ದೇಶದಲ್ಲಿ ಹೋಳಿ ಅಂಚೆ ಚೀಟಿ ಇದೆ ಎಂಬುದು ವಿಶೇಷ.
ಈ ಸೌತ್ ಅಮೆರಿಕನ್ ದೇಶದಲ್ಲಿ ಸಾಕಷ್ಟು ಪ್ರಮಾಣ ಬಿಹಾರಿ ಜನರಿದ್ದಾರೆ. 1969ರಲ್ಲಿ ಇಲ್ಲಿ ಶ್ರೀಕೃಷ್ಣ ಗೋಪಿಕಾ ಸ್ತ್ರೀಯರೊಂದಿಗೆ ರಂಗಿನಾಟ ಆಡುವ ಪೋಸ್ಟಲ್ ಸ್ಟ್ಯಾಂಪ್ನ್ನು ಬಿಡುಗಡೆ ಮಾಡಲಾಗಿದೆ. 6,25,30 ಮತ್ತು 40 ಸೆಂಟ್ಸ್ ಡಿನಾಮಿನೇಶನ್ನಲ್ಲಿ ಇದು ಲಭ್ಯವಿದೆ.
ಆದರೆ ಭಾರತದಲ್ಲಿ ಹೋಲಿಗೆ ಸಂಬಂಧಿಸಿದ ಯಾವುದೇ ಸ್ಟ್ಯಾಂಪ್ ಇಲ್ಲ. 2002ರ ಮಕ್ಕಳ ದಿನಾಚರಣೆಯಂದು ಮಕ್ಕಳು ಬಣ್ಣದಲ್ಲಿ ಆಡುವ ಚಿತ್ರವುಳ್ಳ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.