ಮಂಗಳೂರು : ಅಮೇರಿಕೆಯ ಶಿಕಾಗೋ ನಗರದಲ್ಲಿ 1893 ಸೆಪ್ಟೆಂಬರ್ 11 ರಂದು ಜರುಗಿದ ಪ್ರಪ್ರಥಮ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಭಾಗವಹಿಸಿ ಭಾರತದ ಸನಾತನ ಪರಂಪರೆಯನ್ನು ಅತ್ಯಂತ ಪ್ರಭಾವಯುತವಾಗಿ ಮಂಡಿಸಿ ಸ್ವತ ಪಾಶ್ಚಾತ್ಯರೇ ತಲೆದೂಗುವಂತೆ ಮಾಡಿದ್ದರು. ತನ್ಮೂಲಕ ಭಾರತದ ಆತ್ಮಶಕ್ತಿ ಅಂತಶಕ್ತಿಯನ್ನು ಬಡೆದೆಬ್ಬಿಸಿ ಭಾರತೀಯರು ಹೆಮ್ಮೆ ಪಡುವಂತಾಯಿತು. ಅದರ ಸವಿನೆನೆಪಿನಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ರಾಮಕೃಷ್ಣ ಮಠ ಮಂಗಳೂರು ವಿಶಿಷ್ಟ ಕಾರ್ಯಕ್ರಮಗಳನ್ನು ಯೋಜಿಸಿ ಅದನ್ನು ಆದಷ್ಟು ಅರ್ಥಪೂರ್ಣವಾಗಿ ಆಚರಿಸುತ್ತ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ.
ಅದರಂತೆ ಇದೇ ಸೆಪ್ಟೆಂಬರ್ 7, 8 ಹಾಗೂ 9 ಈ ದಿನಗಳಂದು ದಿನವಿಡೀ ನಡೆಯುವ ಕಾರ್ಯಕ್ರಮಗಳ ವಿವರ ಇಂತಿದೆ.
ಪ್ರಜ್ಞಾ- ಕಾಲೇಜು ಅಧ್ಯಾಪಕರಿಗಾಗಿ ವಿಚಾರಗೋಷ್ಟಿ: ಸೆಪ್ಟೆಂಬರ್ 7 ಗುರುವಾದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 3-30 ರವರೆಗೆ ಕಾಲೇಜು ಅಧ್ಯಾಪಕರಿಗಾಗಿ ಎಜುಕೇಶನ್: ಡಿಸ್ಕವರಿಂಗ್ ಒನ್ಸೆಲ್ಫ್ ಎಂಬ ಕಲ್ಪನೆಯನ್ನು ಮುಂದಿಟ್ಟುಕೊಂಡು ಪ್ರಜ್ಞಾ ಎಂಬ ವಿಚಾರಗೋಷ್ಟಿ ನಡೆಯಲಿದೆ. ಅಂದು ಬೆಳಿಗ್ಗೆ 9-30 ಕ್ಕೆ ನವದೆಹಲಿ ರಾಮಕೃಷ್ಣ ಮಿಷನ್ನಿನ ಮುಖ್ಯಸ್ಥರಾದ ಪೂಜ್ಯ ಸ್ವಾಮಿ ಶಾಂತಾತ್ಮಾನಂದಜಿ ದೀಪಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ವಿನಯ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಿ ಶ್ರೀನಿವಾಸ್, ಸಿಇಓ, ಇಲ್ಲುಮಿನ್ ರಿಸೋರ್ಸ್ ಪ್ರೈ ಲಿ, ಮುಂಬಯಿ ಹಾಗೂ ಪ್ರೋ. ರಘೋತ್ತಮ ರಾವ್ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅಧ್ಯಾಪಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಶ್ರದ್ಧಾ – ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಚಾರಗೋಷ್ಟಿ : ಸೆಪ್ಟೆಂಬರ್ 8 ಶುಕ್ರವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 3-30 ರವರೆಗೆ ಸ್ನಾತಕೊತ್ತರ ವಿದ್ಯಾರ್ಥಿಗಳಿಗಾಗಿ ಅವೆಕನಿಂಗ್ ಇನ್ನರ್ ಸ್ಟ್ರೆಂಥ್ ಎಂಬ ಕಲ್ಪನೆಯನ್ನು ಮುಂದಿಟ್ಟುಕೊಂಡು ವಿಚಾರಗೋಷ್ಟಿ ನಡೆಯಲಿದೆ. ವಿಚಾರಗೋಷ್ಟಿಯ ಉದ್ಘಾಟನೆಯು ಅಂದು ಬೆಳಿಗ್ಗೆ 9-30 ನೆರವೇರಲಿದೆ. ಕರ್ನಾಟಕ ಸರಕಾರದ ಸನ್ಯಾನ್ಯ ಸಚಿವರಾದ ಶ್ರೀ ಪ್ರಮೋದ ಮಧ್ವರಾಜ್ ಅವರು ವಿಚಾರಗೋಷ್ಠಿಯನ್ನು ಉದ್ಘಾಟಿಸುವರು. ತದನಂತರ ಅರ್ಹ ವಿದ್ಯಾರ್ಥಿಗಳಿಗೆ ಶ್ರೀ ಮಠದಿಂದ ಕೊಡಮಾಡುವ ವಿದ್ಯಾರ್ಥಿವೇತನವನ್ನು ವಿತರಿಸಲಿದ್ದಾರೆ. ನವದೆಹಲಿ ರಾಮಕೃಷ್ಣ ಮಿಷನ್ನಿನ ಮುಖ್ಯಸ್ಥರಾದ ಪೂಜ್ಯ ಸ್ವಾಮಿ ಶಾಂತಾತ್ಮಾನಂದಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಯುವಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕರಾದ ಶ್ರೀ ಜೆ ಆರ್ ಲೋಬೋ ಭಾಗವಹಿಸಲಿದ್ದಾರೆ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾದ ಪ್ರೋ. ರಘೋತ್ತಮ ರಾವ್, ಬೆಂಗಳೂರು ಶ್ರೀ ವಿ ಶ್ರೀನಿವಾಸ್ ಸಿಇಓ ಇಲ್ಲುಮಿನ್ ರಿಸೋರ್ಸ್ ಪ್ರೈ ಲಿ ಮುಂಬಯಿ ಹಾಗೂ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅಧ್ಯಾಪಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಮೇಧಾ -ಬಿ.ಎಡ್. ವಿದ್ಯಾರ್ಥಿಗಳಿಗೆ ಸಂವಾದಗೋಷ್ಟಿ : ಸೆಪ್ಟೆಂಬರ್ 9 ಶನಿವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 3-30 ವರೆಗೆ ಬಿ ಎಡ್ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ನಡೆಯಲಿದೆ. ಟೀಚಿಂಗ್ – ಮದರ್ ಪ್ರೊಫೆಶನ್ಸ್ ಎಂಬ ಕಲ್ಪನೆಯಲ್ಲಿ ವಿಚಾರ ಗೋಷ್ಟಿ ಅನಾವರಣಗೊಳ್ಳಲಿದೆ. ಬೆಳಿಗ್ಗೆ 9-30 ಕ್ಕೆ ಗೋಷ್ಟಿಯನ್ನು ವಿಧಾನ ಪರಿಷತ್ತಿನಲ್ಲಿ ವಿರೋಧಪಕ್ಷದ ಚೀಫ್ ವಿಪ್ ಅವರಾದ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಅವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಆತ್ಮಜ್ಞಾನಂದಜಿ, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಧಾರವಾಡದ ಖ್ಯಾತ ಶಿಕ್ಷಣ ತಜ್ಞರಾದ ಶ್ರೀ ಸುರೇಶ್ ಕುಲಕರ್ಣಿ, ಶ್ರೀಮತಿ ಚಿಂತನಾ ಭಟ್ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಈ ವಿಚಾರಗೋಷ್ಟಿಗಳಲ್ಲಿ ಸಂವಾದ ನಡೆಸಲಿದ್ದಾರೆ.
ಮೂರೂ ದಿನಗಳಂದು ಆಶಯ ಭಾಷಣವನ್ನು ಆಶ್ರಮದ ಮುಖ್ಯಸ್ಥರಾದ ಸ್ವಾಮಿ ಜಿತಕಾಮಾನಂದಜಿ ಮಾಡಲಿದ್ದಾರೆ. ಈ ಮೇಲ್ಕಂಡ ವಿಚಾರಗೋಷ್ಟಿಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕರನ್ನು ಆಹ್ವಾನಿಸಲಾಗಿದೆ. ಭಾಗವಹಿಸಬಯಸುವವರು ತಮ್ಮ ಹೆಸರುಗಳನ್ನು ಮಠದ ಕಾರ್ಯಲಯದಲ್ಲಿ ನೋಂದಾಯಿಸಿಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.