ಬೆಳ್ತಂಗಡಿ: ತಾಲೂಕಿನಲ್ಲಿ ಹೊಸದಾಗಿ ರಚನೆಯಾದ ಸುಲ್ಕೇರಿ, ನಾವೂರು, ಕಡಿರುದ್ಯಾವರ, ತೆಕ್ಕಾರು ಹಾಗೂ ಕಳೆಂಜ 5 ಪಂಚಾಯತುಗಳು ಸೇರಿದಂತೆ 48 ಗ್ರಾಮ ಪಂಚಾಯತುಗಳಿದ್ದು ಇದರಲ್ಲಿ ವೇಣೂರು ಮತ್ತು ಆರಂಬೋಡಿಗ್ರಾಮ ಪಂಚಾಯತು ಹೊರತು ಪಡಿಸಿ ಒಟ್ಟು 46 ಗ್ರಾಪಂಗಳಲ್ಲಿ ಚುನಾವಣೆ ನಡೆಯಲಿದೆ. ಅಳದಂಗಡಿ, ಮಿತ್ತಬಾಗಿಲು, ನಿಡ್ಲೆ ಮತ್ತು ಇಂದಬೆಟ್ಟು ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಆಡಳಿತವಿತ್ತು.
ಕಾಂಗ್ರೇಸ್ ಬೆಂಬಲಿತ ಆಡಳಿತವನ್ನು ಹೊಂದಿತ್ತು. ಇದರಿಂದ ಪುನರ್ವಿಂಗಡಣೆಯಾದ ಸುಲ್ಕೇರಿ, ಕಡಿರುದ್ಯಾವರ, ಕಳೆಂಜ, ನಾವೂರು ಮತ್ತುತೆಕ್ಕಾರು ಹೊಸ ಗ್ರಾಪಂಗಳಲ್ಲಿ 4 ಗ್ರಾಪಂಗಳ ನಿರ್ಗಮನ ಅಧ್ಯಕ್ಷರು ಇದ್ದಾರೆ.
ಸುಲ್ಕೇರಿ: ಅಳದಂಗಡಿ ಗ್ರಾಮ ಪಂಚಾಯತ್ನಿಂದ ವಿಂಗಡಣೆಯಾದ ಬಳಿಕ ರಚನೆಯಾದ ಹೊಸ ಗ್ರಾಮ ಪಂಚಾಯತ್ ಸುಲ್ಕೇರಿ. ಮೊದಲು 7 ವಾರ್ಡ್ಗಳಿದ್ದ 18 ಸದಸ್ಯರ ಬಲವನ್ನು ಹೊಂದಿದ್ದ ಅಳದಂಗಡಿ ಗ್ರಾ.ಪಂ. ವಿಂಗಡಣೆಯಾದ ಬಳಿಕ ಇದೀಗ ಸುಲ್ಕೇರಿಗ್ರಾ.ಪಂ. ನಲ್ಲಿ 3 ವಾರ್ಡ್ಗಳಿದ್ದು 7 ಸ್ಥಾನಗಳನ್ನು ಹೊಂದಿದೆ. ಸುಲ್ಕೇರಿ, ನಾವರ ಹಾಗೂ ಕುದ್ಯಾಡಿ ವಾರ್ಡ್ಗಳನ್ನು ಹೊಂದಿದೆ. ಈ ಮೂರು ವಾರ್ಡ್ಗಳಲ್ಲಿ ಒಟ್ಟು 2442 ಮಂದಿ ಜನಸಂಖ್ಯೆ ಇದೆ. 5 ಗ್ರಾ.ಪಂ.ಗಳ ಪೈಕಿ ಸುಲ್ಕೇರಿ ಸದಸ್ಯರ ಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಚಿಕ್ಕದ್ದು. ನಿರ್ಗಮನ ಅಧ್ಯಕ್ಷೆ ಭಾರತಿ ಬಂಗೇರಯವರು ಪಿಲ್ಯ ಗ್ರಾಮದವರಾಗಿದ್ದು ಇದು ಅಳದಂಗಡಿ ಗ್ರಾಪಂ ಮಿತಿಯಲ್ಲಿದೆ.
ನಾವೂರು: ಇಂದಬೆಟ್ಟುಗ್ರಾಮ ಪಂಚಾಯತ್ನೊಂದಿಗೆ ಇದ್ದ 2 ವಾರ್ಡ್ನ್ನು ಹೊಂದಿದ್ದ ನಾವೂರು ಗ್ರಾಮ ಪಂಚಾಯತ್ ಇದೀಗ ಪ್ರತ್ಯೇಕ 8 ಸದಸ್ಯ ಬಲವನ್ನು ಹೊಂದಿದೆ. ಇಂದಬೆಟ್ಟು ಗ್ರಾಪಂ 6 ವಾರ್ಡ್ನ್ನು ಹೊಂದಿತ್ತು. 17 ಸದಸ್ಯರ ಬಲ ಇದ್ದಇಂದಬೆಟ್ಟು 11 ಸ್ಥಾನಗಳನ್ನು ಹೊಂದಿದ್ದರೆ, ಹೊಸತಾಗಿ ರಚನೆಯಾದ ನಾವೂರು ಗ್ರಾಪಂ 3162 ಜನಸಂಖ್ಯೆಯನ್ನು ಹೊಂದಿದೆ. ನಾವೂರು 1 ಮತ್ತು 2 ವಾರ್ಡ್ಇದೆ. ಇಂದಬೆಟ್ಟು ಗ್ರಾಪಂನ ನಿರ್ಗಮನ ಅಧ್ಯಕ್ಷ ಹರೀಶ್ ಸಾಲಿಯನ್ ಅವರು ಹೊಸತಾಗಿ ರಚನೆಯಾದ ನಾವೂರು ಗ್ರಾಪಂನ ವ್ಯಾಪ್ತಿಯಲ್ಲಿ ಬರುತ್ತಾರೆ.
ಕಡಿರುದ್ಯಾವರ: ಮಿತ್ತಬಾಗಿಲು ಗ್ರಾಪಂನಿಂದ ಪ್ರತ್ಯೇಕಗೊಂಡು ಹೊಸತಾಗಿ ರಚನೆಯಾದ ಕಡಿರುದ್ಯಾವರ ಗ್ರಾಪಂನಲ್ಲಿ 3421 ಮಂದಿ ಜನಸಂಖ್ಯೆಯಿದೆ. 3 ವಾರ್ಡ್ಗಳನ್ನು ಹೊಂದಿರುವ ಈ ಪಂಚಾಯತ್ನಲ್ಲಿ 9 ಸ್ಥಾನವನ್ನು ಹೊಂದಿದೆ. ಹಿಂದೆ ಮಿತ್ತಬಾಗಿಲು ಗ್ರಾಪಂಗೆ6 ವಾರ್ಡ್ ಇದ್ದು 17 ಸದಸ್ಯರ ಬಲವನ್ನು ಹೊಂದಿತ್ತು. ಕಡಿರುದ್ಯಾವರ 1, 2 ಮತ್ತು 3 ವಾರ್ಡ್ಇದೆ. ನಿರ್ಗಮನ ಅಧ್ಯಕ್ಷೆ ಭಾರತಿ ಅವರು ಹೊಸತಾಗಿ ರಚನೆಯಾದ ಕಡಿರುದ್ಯಾವರ ಗ್ರಾಪಂನ ವ್ಯಾಪ್ತಿಯಲ್ಲಿ ಬರುತ್ತಾರೆ.
ತೆಕ್ಕಾರು: ಬಾರ್ಯಗ್ರಾಪಂನಿಂದ ವಿಂಗಡಣೆಯಾಗಿ ರಚನೆಯಾದ ತೆಕ್ಕಾರುಗ್ರಾಮ ಪಂಚಾಯತ್ನಲ್ಲಿ 9 ಸ್ಥಾನಗಳಿದೆ. 3235 ಮಂದಿ ಜನಸಂಖ್ಯೆಯನ್ನು ಹೊಂದಿದ್ದು ತೆಕ್ಕಾರು 1,2 ಮತ್ತು 3 ವಾರ್ಡ್ಗಳನ್ನು ಹೊಂದಿದೆ. ಬಾರ್ಯ ಗ್ರಾಪಂಇದ್ದಾಗ ೨೨ ಸದಸ್ಯರ ಬಲವನ್ನು ಹೊಂದಿತ್ತು. ಮಾಜಿಉಪಾಧ್ಯಕ್ಷ ಅಬ್ದುಲ್ರಝೂಕ್ ತೆಕ್ಕಾರುಗ್ರಾಪಂನ ವ್ಯಾಪ್ತಿಯಲ್ಲಿದ್ದಾರೆ.
ಕಳೆಂಜ: ನಿಡ್ಲೆ ಮತ್ತು ಕಳೆಂಜ ಗ್ರಾಮಗಳ ನಿಡ್ಲೆಗ್ರಾಪಂನಲ್ಲಿ ಕಳೆದ ಬಾರಿ 19 ಸ್ಥಾನಗಳಿದ್ದು ಅದರಿಂದ ಪುನರ್ವಿಂಗಡಣೆಯಲ್ಲಿ ರಚನೆಯಾದ ಕಳೆಂಜ ಗ್ರಾಪಂನಲ್ಲಿ 13 ಸ್ಥಾನಗಳಿದೆ. ನಿಡ್ಲೆಗ್ರಾಪಂನಲ್ಲಿ ಈ ಬಾರಿ 8ಸ್ಥಾನಗಳಿವೆ. ಕಳೆಂಜ ಗ್ರಾಪಂನಲ್ಲಿ 4 ವಾಡ್ಗಳಿದ್ದು 4988 ಮಂದಿ ಜನಸಂಖ್ಯೆ ಇದೆ. ನಿಡ್ಲೆ ಗ್ರಾಪಂನ ನಿರ್ಗಮನ ಅಧ್ಯಕ್ಷ ಬಾಲಕೃಷ್ಣ ಅವರು ಕಳೆಂಜ ಗ್ರಾಮದವರಾಗಿದ್ದು ನೂತನ ಗ್ರಾಪಂನ ವ್ಯಾಪ್ತಿಯಲ್ಲಿದ್ದಾರೆ.
ಹೊಸ ಗ್ರಾಪಂಗಳ ಕೇಂದ್ರಸ್ಥಾನಗಳು:ಸುಲ್ಕೇರಿ: ಸುಲ್ಕೇರಿ, ನಾವೂರು: ನಾವೂರು, ಕಡಿರುದ್ಯಾವರ: ಹೇಡ್ಯ, ತೆಕ್ಕಾರು: ಬಾಜಾರು, ಕಳೆಂಜ: ಕಾರ್ಯತಡ್ಕ
ಹೊಸತಾಗಿರಚನೆಯಾದ ೫ ಗ್ರಾಮ ಪಂಚಾಯತ್ಗಳಿಗೆ ಸ್ವಂತಕಟ್ಟಡ ಭಾಗ್ಯವಿಲ್ಲ. ಸುಲ್ಕೇರಿಗ್ರಾಪಂಗೆ ಹೊಸತಾದಕಟ್ಟಡಆಗಬೇಕಾಗಿದೆ. ಅಳದಂಗಡಿ ಗ್ರಾಪಂಕಚೇರಿ ಹೊಸ ಕಟ್ಟಡದಲ್ಲಿಕಾರ್ಯಾಚರಿಸುತ್ತಿದೆ. ಹಳೆ ಕಟ್ಟಡದಲಿ ತಾತ್ಕಾಲಿಕವಾಗಿ ಸುಲ್ಕೇರಿ ಗ್ರಾಪಂಕಾರ್ಯ ಮಾಡಬೇಕಾಗಬಹುದು. ಚುನಾವಣೆ ಮುಗಿದು ಹೊಸ ಆಡಳಿತ ಬಂದಾಗ ಸರಕಾರದಿಂದ ಅಸೂಚನೆ ಬಂದ ಬಳಿಕವೇ ಗೊತ್ತಾಗಬಹುದು. ನಾವೂರು ಗ್ರಾಪಂನ ಪರಿಸ್ಥಿತಿಯೂ ಇದೆಆಗಿದೆ. ಚುನಾವಣೆ ಪ್ರಕ್ರಿಯೆ ಎಲ್ಲಾ ಇಂದಬೆಟ್ಟು ಗ್ರಾಪಂನಲ್ಲಿಯೇ ನಡೆಯುತ್ತಿದೆ. ಕಟ್ಟಡವಿಲ್ಲದೆ ಬಾಡಿಗೆಕಟ್ಟಡದಲ್ಲಿ ಹೊಸ ಗ್ರಾಪಂಕಚೇರಿಯನ್ನು ಆರಂಭಿಸಬೇಕಾಗುತ್ತದೆ. ಪರ್ಯಾಯ ವ್ಯವಸ್ಥೆಇಲ್ಲ. ಕಡಿರುದ್ಯಾವರ ಗ್ರಾಪಂಗೆ ಹೇಡ್ಯದಲ್ಲೊಂದು ಗ್ರಾಪಂನ ಕಟ್ಟಡಇದೆ. ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸದ್ಯಕ್ಕೆ ಈ ಕಟ್ಟಡದಲ್ಲಿಯೇ ಕಚೇರಿಯನ್ನು ಆರಂಭಿಸುವ ಲಕ್ಷಣಕಾಣುತ್ತಿದೆ. ತೆಕ್ಕಾರುಗ್ರಾಮ ಪಂಚಾಯತ್ಗೆ ಸ್ವಂತಕಟ್ಟಡ ಇಲ್ಲ. ಬಾಜಾರುವಿನಲ್ಲಿರುವ ಅಕ್ಷರ ಸದನದಲ್ಲಿ ತಾತ್ಕಾಲಿಕವಾಗಿ ಕಚೇರಿಯನ್ನು ಮಾಡಲಾಗಿದೆ. ಕಳೆಂಜ ಗ್ರಾಪಂಗೂ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡದಲ್ಲಿ ಕಚೇರಿಯನ್ನು ಆರಂಭಿಸಬೇಕಾಗುತ್ತದೆ.
ಐದು ವರ್ಷ ಗ್ರಾಪಂ ಸದಸ್ಯೆಯಾಗಿದ್ದೆ. ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಜನರಿಂದ ಚುನಾವಣೆಗೆ ನಿಲ್ಲಲು ಒತ್ತಡ ಇದೆ.ಆದರೆ ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಅನಿಸಿಕೆ.-ಭಾರತಿ ಬಂಗೇರ, ಅಳದಂಗಡಿ ಗ್ರಾಪಂ ನಿರ್ಗಮನಅಧ್ಯಕ್ಷೆ
ಕಳೆದ ೧೫ ವರ್ಷಗಳಿಂದ ಸದಸ್ಯನಾಗಿ, ೩ ವರ್ಷಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಕಾರ್ಯಕರ್ತರ ಸಹಕಾರದಿಂದ ಈ ಬಾರಿಯೂ ಚುನಾವಣೆಯಲ್ಲಿ ರ್ಸ್ಪಸುತ್ತಿದ್ದೇನೆ. – ಹರೀಶ್ ಸಾಲಿಯಾನ್, ಇಂದಬೆಟ್ಟುಗ್ರಾಪಂ ನಿರ್ಗಮನ ಅಧ್ಯಕ್ಷ
ಐದು ವರ್ಷದಿಂದ ಸದಸ್ಯೆಯಾಗಿದ್ದು ಅಧ್ಯಕ್ಷೆಯಾಗಿ ಸೇವೆ ಕೂಡಾ ಸಲ್ಲಿಸಿದ್ದೇನೆ. ಹೊಸ ಗ್ರಾಪಂ ರಚನೆಯಾಗಿದ್ದು ಮೀಸಲಾತಿಯಿಂದಾಗಿ ವಾರ್ಡ್ಗಳ ಬದಲಾವಣೆ ಸಾಧ್ಯತೆ ಇದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಥಿಸಲು ಅವಕಾಶವಿದ್ದರೆ ನಿಲ್ಲುತ್ತೇನೆ. ಪಕ್ಷದ ಕಾರ್ಯಕರ್ತರ, ಹಿರಿಯ ನಾಯಕರಅಭಿಪ್ರಾಯ ಮುಖ್ಯ.- ಭಾರತಿ, ಮಿತ್ತಬಾಗಿಲುಗ್ರಾಪಂ ನಿರ್ಗಮನ ಅಧ್ಯಕ್ಷೆ
ಐದು ವರ್ಷದ ಅವಯಲ್ಲಿ ಸದಸ್ಯನಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಈ ಬಾರಿ ಕಳೆಂಜ ಗ್ರಾಪಂನಿಂದ ಸ್ಪರ್ಧಿಸುತ್ತಿದ್ದೇನೆ.– ಬಾಲಕೃಷ್ಣ, ನಿಡ್ಲೆಗ್ರಾಪಂ ನಿರ್ಗಮನಅಧ್ಯಕ್ಷ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.