ಮಂಗಳೂರು : ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ ಕೋಡಿಯಾಲ್ಬೈಲ್ನ ಶಾರದಾ ಪದವಿ ಪೂರ್ವ ಕಾಲೇಜಿನ ಸಂಹಿತಾ ಡಿ. ಮತ್ತು ಆಶಾ ಸಿ. ಶೆಣೈ ಇವರು ಇಂಗ್ಲಿಷ್ ವಿಷಯದಲ್ಲಿ 6 ಹೆಚ್ಚುವರಿ ಅಂಕಗಳನ್ನು ಗಳಿಸಿ ಕ್ರಮವಾಗಿ 600 ರಲ್ಲಿ 593 ಮತ್ತು 592 ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೇ ನಾಲ್ಕನೆಯ ಮತ್ತು ಐದನೆಯ ಸ್ಥಾನಗಳನ್ನು ಗಳಿಸಿರುತ್ತಾರೆ.
ಸಂಹಿತಾ ಅವರು ಈ ಮೊದಲು ಪಿ.ಸಿ.ಎಂ.ಬಿ. ವಿಷಯದಲ್ಲಿ 100 ರಲ್ಲಿ 100 ಅಂಕಗಳನ್ನು ಗಳಿಸಿದ್ದರೆ, ಕನ್ನಡದಲ್ಲಿ 97 ಮತ್ತು ಇಂಗ್ಗೀಷ್ನಲ್ಲಿ 90 ಅಂಕಗಳನ್ನು ಗಳಿಸಿದ್ದರು. ಈಗ ಇಂಗ್ಲೀಷ್ನಲ್ಲಿ 6 ಹೆಚ್ಚುವರಿ ಅಂಕಗಳು ಬಂದು ಒಟ್ಟು 593 ಅಂಕಗಳನ್ನು ಪಡೆದಿದ್ದಾರೆ.
ಆಶಾ ಸಿ. ಶೆಣೈ ಅವರು ಭೌತಶಾಸ್ತ್ರ , ಗಣಿತ, ಗಣಕ ವಿಜ್ಞಾನ ಮತ್ತು ಸಂಸ್ಕೃತದಲ್ಲಿ 100 ಅಂಕಗಳಿಸಿದ್ದರೆ, ರಸಾಯನ ಶಾಸ್ತ್ರದಲ್ಲಿ 99 ಅಂಕ ಹಾಗೂ ಇಂಗ್ಲೀಷ್ನಲ್ಲಿ 87 ಅಂಕಗಳನ್ನು ಪಡೆದಿದ್ದರು. ಈಗ ಇಂಗ್ಲೀಷ್ನಲ್ಲಿ 6 ಹೆಚ್ಚುವರಿ ಅಂಕಗಳನ್ನು ಗಳಿಸಿ ಒಟ್ಟು 592 ಅಂಕಗಳನ್ನು ಪಡೆದಿದ್ದಾರೆ.
ಇವರ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆಗಳನ್ನು ಸಲ್ಲಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.