ಇಂಡೋನೇಷ್ಯಾದ ಕುಂಪುಂಗ್ ಪೆಲಂಗಿ ಗ್ರಾಮ ಇದೀಗ ’ರೈನ್ಬೋ ವಿಲೆಜ್’ ಆಗಿ ಕಂಗೊಳಿಸುತ್ತಿದೆ. ಆ ಗ್ರಾಮದ ಬಣ್ಣ ಬಣ್ಣದ ಮನೆ, ಕಟ್ಟಡಗಳು ನೋಡುಗರನ್ನು ಇನ್ನಿಲ್ಲದ ರೀತಿ ಸೆಳೆಯುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ.
ಕಳೆದ ತಿಂಗಳುಗಳವರೆಗೆ ಸಾಮಾನ್ಯ ಗ್ರಾಮವಾಗಿದ್ದ ಇದು ಸ್ಥಳಿಯ ಸಿಟಿ ಕೌನ್ಸಿಲ್ನಿಂದಾಗಿ ಕಾಮನನಿಲ್ಲಿನಂತೆ ಬಣ್ಣ ಬಣ್ಣದಿಂದ ಕಂಗೊಳಿಸುತ್ತಿದೆ. ಈ ಐಡಿಯಾದ ಹಿಂದೆ ಇರುವವರು 54 ವರ್ಷದ ಶಾಲಾ ಪ್ರಾಂಶುಪಾಲ ಸ್ಲಮೆಟ್ ವಿಡೊಡೊ.
ಇಲ್ಲಿನ 232 ಮನೆಗಳಿಗೆ ಹಳದಿ, ಹಸಿರು, ಕೇಸರಿ, ನೇರಳೆಯಂತಹ ಕಡು ಬಣ್ಣಗಳು ಬಲಿದು ಹೊಳೆಯುವಂತೆ ಮಾಡಲಾಗಿದೆ. ಸಿಟಿ ಕೌನ್ಸಿಲ್ ಈ ಗ್ರಾಮವನ್ನು ’ರೈನ್ಬೋ ವಿಲೇಜ್’ ಆಗಿ ಪರಿವರ್ತಿಸಲು 14 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದೆ.
ಇಲ್ಲಿಗೆ ಆಗಮಿಸುವ ಪ್ರವಾಸಿಗರು ಇದರ ಫೋಟೋ ತೆಗೆದು ಇನ್ಸ್ಟಾಗ್ರಾಂ, ಫೇಸ್ಬುಕ್ ಮುಂತಾದ ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದರಿಂದ ಈ ಗ್ರಾಮ ಇನ್ನಷ್ಟು ಪ್ರಸಿದ್ಧಿಯನ್ನು ಪಡೆಯುತ್ತಿದೆ.
ಇದೀಗ ಇಲ್ಲಿನ ಗ್ರಾಮಸ್ಥರು ಪ್ರವಾಸಿಗರಿಗೆ ಆಹಾರ, ವಸ್ತುಗಳನ್ನು ಮಾರಾಟ ಮಾಡಿ ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಪರಿವರ್ತನೆಯ ಚಿಂತನೆ ಈ ಗ್ರಾಮದ ಚೆಲುವು ಮತ್ತು ಅದೃಷ್ಟ ಎರಡನ್ನೂ ಬದಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.