ರಾಯಚೂರು: ವೈಟಿಪಿಎಸ್ 2 ನೇ ಘಟಕವು ಅಧಿಕೃತವಾಗಿ ರಾಜ್ಯ ವಿದ್ಯುತ್ ಜಾಲಕ್ಕೆ ಸೇರ್ಪಡೆಯಾಯಿತು.
ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ಕೇಂದ್ರ ಒಟ್ಟು 1800 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು, 2ನೇ ಘಟಕದಿಂದ 800 ಘಟಕ ಉತ್ಪಾದಿಸುವ ಮೂಲಕ ಸಿಒಡಿ (ವಾಣಿಜ್ಯಿಕ ಉತ್ಪಾದನೆ) ಘೋಷಿಸಲಾಯಿತು.
2 ನೇ ಘಟಕವು ಕಳೆದೆರಡು ವರ್ಷಗಳ ಹಿಂದೆಯೇ ಆರಂಭವಾಗಬೇಕಿತ್ತು. 2ನೇ ಘಟಕಕ್ಕೆ ಬಳಕೆ ಮಾಡಲಾಗಿರುವ ಎಲ್ಲಾ ಮಿಷನ್, ಯಂತ್ರೋಪಕರಣ, ಸಲಕರಣೆಗಳು ಸ್ವದೇಶದಲ್ಲೇ ತಯಾರಿಸಿರುವುದು ವಿಶೇಷ.
ಈ ನೂತನ ಘಟಕದ ನಿಗದಿ ಗುರಿ ತಲುಪಿದ ಮೇಲೆ ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕರು ಸಿಹಿ ಹಂಚಿ ಸಂಭ್ರಮಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.