ಮಹಿಳೆ ದಿನ ಆಚರಿಸಿದ ಖುಷಿಯಲ್ಲಿದೇವೆ. ಈ ವಾರವಿಡೀ ದೇಶ, ರಾಜ್ಯದಲ್ಲಿ ಮಹಿಳೆಯರೇ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಗುರ್ಮೆಹರ್ ಕೌರ್ ಮತ್ತು ಸುಹಾನಎಲ್ಲರ ಗಮನ ಸೆಳೆದಿದ್ದಾರೆ. ಎರಡೂ ಪ್ರಕರಣಗಳಲ್ಲಿ ಮೂಲಭೂತವಾದಿ ಧರ್ಮ ರಕ್ಷಕರು ಮತ್ತು ಮೂಲಭೂತವಾದವನ್ನು ವಿರೋಧಿಸುತ್ತೇವೆ ಎನ್ನುವ ಬುದ್ಧಿ ಜೀವಿಗಳು ಬೆತ್ತಲಾಗಿದ್ದಾರೆ.
“ಯುದ್ಧವೇ ನನ್ನ ತಂದೆಯನ್ನು ಕೊಂದಿತು” ಎನ್ನುವ ಕೌರ್ನನ್ನು ನಾನು ಖಂಡಿತಾ ವಿರೋಧಿಸುವುದಿಲ್ಲ ಆದರೆ ಆಕೆಯನ್ನು ಬೆಂಬಲಿಸುವವರ ದ್ವಂದ್ವಗಳ ಕುರಿತು ನನ್ನ ಆಕ್ಷೇಪ.
ಯುದ್ಧವೇ ಕೊಂದದ್ದು ಎಂದು ವಿಶಾಲ ದೃಷ್ಟಿಕೋನದಲ್ಲಿ ಹೇಳಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯದಡಿ ನೋಡಿದರೆ ಒಪ್ಪತಕ್ಕದ್ದೇ ಆದರೆ ಕೌರ್ ಮುಂದುವರಿದು ಎಬಿವಿಪಿ ವಿರುದ್ಧ ಹೋರಾಟ ನಡೆಸುತ್ತೇನೆ ಎಂದಾಗ, ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ ಎಂದು ಒತ್ತಿಹೇಳುವಾಗ ಇದರ ಹಿಂದಿರುವ ಬ್ರೈನ್ ವಾಶ್ ಬುದ್ಧಿಜೀವಿಗಳು ಯಾರಿರಬಹುದು ಎನ್ನುವ ಪ್ರಶ್ನೆ ಹುಟ್ಟುತ್ತದೆ.
ಯುದ್ಧವೇ ಬೇಡ ಎನ್ನುವ ಹೋರಾಟಗಾರರ ಮನೆಗೆ ಬಂದರೆ ಅಲ್ಲಿ ಆಳೆತ್ತರದ ಗೋಡೆಗಳು “ಗಡಿ”ಗಳಂತೆ ಕಾಣುತ್ತವೆ. ರಾತ್ರಿ ಏಕೆ, ಹಗಲೂ ಕೂಡಾ ಕಿಟಕಿ ಬಾಗಿಲುಗಳನ್ನು ಹಾಕಿ, ಹೊರಗೆ ಹೋಗುವಾಗ ಬೀಗವನ್ನು ಜಡಿದು ಎರಡು, ಮೂರು ಬಾರಿ ಮುಟ್ಟಿ ನೋಡುವ ಬುದ್ಧಿ ಜೀವಿಗಳು ಬೀದಿಗೆ ಬಂದು ಯುದ್ಧ ಬೇಡ, ಜಗತ್ತಿನ ದೊಡ್ಡ ಹಂತಕ ಅಂದರೆ “ಯುದ್ಧ” ಎಂದು ಮಾರ್ಮಿಕವಾಗಿ ಹೇಳುತ್ತಾ ಪರೋಕ್ಷವಾಗಿ ವಿರೋಧಿ ರಾಷ್ಟ್ರಗಳಿಗೆ ನೈತಿಕ ಸ್ಥೈರ್ಯ ತುಂಬಿಸುತ್ತಾರೆ.
ಜನ ಸಾಮಾನ್ಯರಿಗೆ ಯುದ್ಧ ಬೇಡ, ಖಂಡಿತಾ ಬೇಡ, ದೇವರಾಣೆಗೂ ಬೇಡ. ಬೇಡ ಅಂದರೆ ಯುದ್ಧ ಆಗದೇ ಇರುತ್ತದೆಯೇ ? ನಮ್ಮ ದೇಶ ಯುದ್ಧ ಬೇಡ ಎಂದು ಗಡಿಯಲ್ಲಿ ಶತ್ರುಗಳಿಗೆ ನುಸುಳಲು ಬಿಟ್ಟರೆ ಪರಿಸ್ಥಿತಿ ಹೇಗಿರಬಹುದು ಊಹಿಸಿ !
ಅಂತಾರಾಷ್ಟ್ರೀಯ ಮಾನವೀಯತೆ, ಮಾನವ ಹಕ್ಕು ನೆಪದಲ್ಲಿ ಬಾವುಟಗಳನ್ನು ಹಿಡಿದು ಯುದ್ಧ ಬೇಡ ಎಂದು ಬೊಬ್ಬಿರಿಯುವ ಹೋರಾಟಗಾರರು, ತನ್ನ ಮನೆಯ ರಕ್ಷಣೆಗೆ ಇಷ್ಟೆಲ್ಲ ಗಡಿ, ಬೇಲಿ ಹಾಕಿ, ಕಾವಲಿಗೆ ನಾಯಿಯನ್ನು ಇಡುವುದು ಏಕೆ ? ನಮ್ಮ ಮನೆ ಕಂಪೌಂಡ್ ಭದ್ರ ಪಡಿಸುವ, ಅದರ ದಾಖಲೆಗಳನ್ನು ಬೀಗ ಹಾಕಿ ಇಡುವ ಬುದ್ಧಿ ಜೀವಿಗಳು ದೇಶದ ಗಡಿ ರಕ್ಷಣೆ ಬೇಡ ಎನ್ನುವುದು ಎಷ್ಟು ಸರಿ ?
*ಇನ್ನು ಸುಹಾನಾ ಎಂಬ ಸುಂದರ ಮುಖದ, ಮಧುರ ಧ್ವನಿಯ ಹುಡುಗಿಯ ಮೇಲೆ ಕಟ್ಟರ್ ವಾದಿಗಳ ಆಕ್ರೋಶ ನೋಡುವಾಗ ಧರ್ಮದ ಕಟ್ಟುಪಾಡುಗಳ ಹೆಸರಲ್ಲಿ ಮಹಿಳೆಯನ್ನು ಬಂಧಿಸುವ ಪುರುಷರ ಹೇಷಾರವ ಇನ್ನೂ ಕಡಿಮೆಯಾಗಿಲ್ಲ ಎನ್ನುವುದು ಸಾಬೀತಾಗುತ್ತಿದೆ. *
ಝೀಟಿವಿ ರಿಯಾಲಿಟಿ ಶೋದಲ್ಲಿ ಹಾಡುತ್ತಿರುವ ಸುಹಾನ ಕುರಿತು ಮತಾಂಧರಿಗೆ ಈ ಪರಿಯ ಆಕ್ರೋಶ ಏಕೆ ?
ಮಂಗಳೂರು ಮಸ್ಲಿಂ ಎಂಬ ಉಗ್ರವಾದಿ ಪೇಜ್ನಲ್ಲಿ ಬೆದರಿಕೆ ಕೂಡಾ ಹಾಕಿದೆ. ಹಿಂದುಗಳ ಪುಣ್ಯ ಕ್ಷೇತ್ರದ ಕಟೀಲು ದೇವಿಯನ್ನು ನಿಂದಿಸಿದವರನ್ನು ಸಮರ್ಥಿಸಿ, ಹಿಂದೂ ದೇವರುಗಳನ್ನು ಟೀಕಿಸುವ ಈ ಮುಸ್ಲಿಂ ಪೇಜ್, ಕೋಮುದ್ವೇಷ ಹಬ್ಬಿಸುವುದರಲ್ಲಿ ಮುಂಚೂಣಿಯಲ್ಲಿದೆ. ಈಗ ಸುಹಾನಳ ಬೆನ್ನು ಬಿದ್ದಿದೆ.
ಸ್ವರ್ಗದಲ್ಲಿ 72 ಅಪ್ಸರೆಯರ ಜತೆ ಸುಖಿಸಲು ಜಾಗವನ್ನು ಕಾದಿರಿಸಿದ ಈ ಜಿಹಾದಿ ಮತಾಂಧರು ಸ್ವರ್ಗಕ್ಕೆ ಗೇಟ್ ಜಡಿದು ಸುಹಾನಳಿಗೆ ಪ್ರವೇಶ ನಿರಾಕರಿಸಿ, ನರಕಕ್ಕೆ ಅಟ್ಟಲು ಟಿಕೆಟ್ ಬುಕ್ ಮಾಡಿದ್ದಾರೆ. (ಈಗಾಗಲೇ ತಾಲಿಬನ್ ಹುತಾತ್ಮರ ಸಂಖ್ಯೆ ಹೆಚ್ಚಿದ್ದರಿಂದ 72 ಅಪ್ಸರೆಯರು ಸಂಕಷ್ಟದಲ್ಲಿದ್ದಾರೆ)
ನಾವು ಪಾಪಿಗಳಾಗಿದ್ದು, ಇನ್ನೊಬ್ಬರ ಕುರಿತು ಟೀಕಿಸುವ ಅಧಿಕಾರ ಇದೆಯೇ ? ಹಿಂದೆ ಒಮ್ಮೆ ವ್ಯಭಿಚಾರಿಗೆ ಎಲ್ಲರೂ ಕಲ್ಲು ಹೊಡೆಯುತ್ತಿದ್ದರು. ಅದನ್ನು ನೋಡಿದ ಏಸುಕ್ರಿಸ್ತರು “ನಿಮ್ಮಲ್ಲಿ ಯಾರು ಪಾಪವನ್ನು ಮಾಡದೆ ಪರಿಶುದ್ಧರಾಗಿದ್ದರೋ ಅವರು ವ್ಯಭಿಚಾರಿಗೆ ಕಲ್ಲು ಹೊಡೆಯಿರಿ” ಎಂದು ಹೇಳಿದರು. ಆಗ ಯಾರೂ ಮತ್ತೆ ಕಲ್ಲು ಹೊಡೆಯಲಿಲ್ಲ. ಆ ಕಾಲದಲ್ಲಿ ಅಷ್ಟಾದರೂ ಆತ್ಮಸಾಕ್ಷಿ ಇತ್ತು.
ಈಗ ಅದೂ ಇಲ್ಲ. ಧರ್ಮಗ್ರಂಥದಲ್ಲಿ ಹೇಳಿದ್ದೆಲ್ಲವನ್ನು ಎಲ್ಲರೂ ಚಾಚೂ ತಪ್ಪದೆ ಪಾಲಿಸಲು ಆಗದು. ಪಾಲನೆ ಮಾಡಬೇಕೆಂದೇನು ಇಲ್ಲ. ಅದರಲ್ಲೂ ಜಾಲತಾಣದಲ್ಲಿ ಕಲ್ಲು ಹೊಡೆಯುತ್ತಿರುವ ಪಂಡಿತರಿಗೆ ಖಂಡಿತವಾಗಿಯೂ ಟೀಕಿಸಲು ಅರ್ಹತೆ ಇಲ್ಲ.
ಅನ್ಯ ಸಮುದಾಯದ ಅನ್ಯ ಪುರುಷರ ಎದುರು ಹಾಡುವುದು ಮತ್ತು ನೋಡುವುದು ತಪ್ಪು ಎನ್ನುವುದಾದರೆ ಇವರು ಬೇರೆ ಕೋಮಿನ ಯುವತಿಯರ ಸೊಂಟ ಹಿಡಿದು ಮದರಂಗಿ ಪಾರ್ಟಿಯಲ್ಲಿ, ಡ್ಯಾನ್ಸ್ ಶೋಗಳಲ್ಲಿ ನರ್ತಿಸಿದರೆ ಕೋಮು ಸೌಹಾರ್ದ ಎಂದು ಕರೆಯಬೇಕೆ ?
ಧಾರ್ಮಿಕ ಪಂಡಿತರ ಈ ವಿಧಿ ನಿಯಮಗಳು ಝಾಕಿರ್ ಹುಸೇನ್, ಸಲ್ಮಾನ್ ಖಾನ್ಗೆ ಅನ್ವಯವಾಗುವುದಿಲ್ಲ ಏಕೆ ?
ಮಂಗಳೂರಲ್ಲಿ ಶಾಲೆ, ಕಾಲೇಜ್ಗಳ ನೃತ್ಯ, ಕುಣಿತಕ್ಕೆಮುಲ್ಲಾಗಳು ನಿಷೇಧ ಹೇರಿ ಫತ್ವಾಾ ಹೊರಡಿಸಿದ ನಿದರ್ಶನಗಳಿವೆ. ನಾನೇ ಕೆಲವು ಬಾರಿ ವರದಿ ಮಾಡಿದ್ದೆ.
ಆದರೆ ಕೆಲ ಪಂಡಿತರು ಮನೋರಂಜನೆ ಚಾನೆಲ್ಗಳನ್ನು ಎವೆಎಕ್ಕದೆ ನೋಡುತ್ತಾರೆ. ಕೆಲವರು ನೀಲಿ ಚಿತ್ರಗಳನ್ನು ಕದ್ದು ನೋಡುತ್ತಾರೆ. ಆಗ ಧರ್ಮ ಭ್ರಷ್ಟರಾಗುವುದಿಲ್ಲ. ಒಂದು ಹುಡುಗಿ ಭಕ್ತಿ ಗೀತೆ ಹಾಡಿದ ಕೂಡಲೆ ಅದು “ಧರ್ಮದ್ರೋಹಿ” ಆಗುವುದು ಹೇಗೆ ?
ನಮ್ಮೂರುಗಳಲ್ಲಿ ಈಗಲೂ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಮರೇ ದೇವರ ಪ್ರೀತ್ಯರ್ಥವಾಗಿ ಸುಡುಮದ್ದು ಸುಡುತ್ತಾರೆ. ಜಾತ್ರೆಗಳಲ್ಲಿ ಅಂಗಡಿಗಳು ಮುಸ್ಲಿಮರೇ ಹೆಚ್ಚು. ಇದನ್ನು ಸಹೃದಯಿ ಮುಸ್ಲಿಮರು, ಹಿಂದುಗಳು ಒಪ್ಪಿಕೊಂಡಿದ್ದಾರೆ. ಈಗ ಇತ್ತೀಚೆಗೆ ವಿದೇಶದಿಂದ ನೇರ ಆಮದಾಗಿರುವಂತೆ ಮಾಡುತ್ತಿರುವ ಕೆಲವು ಕಟ್ಟರ್ ವಾದಿಗಳ ಸಂಕುಚಿತ ಮನೋಭಾವ
ಕತ್ರಿನಾ ಕೈಫ್, ಶಾರೂಕ್ ಖಾನ್, ಸಲ್ಮಾನ್ ಖಾನ್ನ ಸಿನಿಮಾಗಳಿಗೆ ಮೊದಲೇ ಟಿಕೆಟ್ ಬುಕ್ ಮಾಡುವ ಕಟ್ಟರ್ವಾದಿ ಸತ್ಯ ವಿಶ್ವಾಸಿಗಳು, ಸುಹಾನಳ ಸಂಗೀತದ ಮೇಲಿನ ಸತ್ಯ ವಿಶ್ವಾಸವನ್ನು ಏಕೆ ಒಪ್ಪುವುದಿಲ್ಲ.
ಇಸ್ಲಾಂ ಧರ್ಮದಲ್ಲಿ ಸಂಗಿತಕ್ಕೆ ನಿಷೇಧ ಹೇರಿಲ್ಲ. ದಫ್ ಹಾಡು, ಕುಣಿತವನ್ನು ಮಹಮ್ಮದ್ ಫೈಗಂಬರರ ಅನುಮತಿಯಂತೆ ಪತ್ನಿ ಆಯೇಶಾ ಕೂಡ ನೋಡಿ ಖುಷಿ ಪಟ್ಟಿದ್ದರಂತೆ. ಆದ್ದರಿಂದ ಹಾಡು ಯಾವುದಾದರೇನು ? ಹಾಡನ್ನು ಹಾಡಾಗಿ ನೋಡಿ ಸ್ವಾಾಮಿ.
ಕಟ್ಟರ್ ವಾದಿಗಳಿಗೆ ನನ್ನ ಪ್ರಶ್ನೆ. ಜಾಲತಾಣಗಳನ್ನು ಬಳಸುವುದಕ್ಕೆ ಧರ್ಮ ಗ್ರಂಥದಲ್ಲಿ ಅನುಮತಿ ನೀಡಲಾಗಿದೆಯೇ ? ಟೀವಿ ನೋಡುವುದಕ್ಕೆ ಅನುಮತಿ ಇದೆಯೇ ? ಮೊಬೈಲ್ ಬಳಸಿದರೆ ಕೆಟ್ಟದೂ ಆಗುತ್ತದೆ ಅದ್ದರಿಂದ ಅದಕ್ಕೂ ಅನುಮತಿ ಸಿಗೋ ಚಾನ್ಸ್ ಇಲ್ಲ. ಆದ್ದರಿಂದ ಕಟ್ಟರ್ ವಾದಿಗಳೆ ನೀವೆಲ್ಲ ಟೀವಿ ನೋಡಬೇಡಿ, ಮೊಬೈಲ್ ಬಳಸಬೇಡಿ, ಫೇಸ್ ಬುಕ್ ಖಾತೆ ಇದ್ದರೆ ಈಗಲೇ ಡಿಲೀಟ್ ಮಾಡಿ. ಆಮೇಲೆ ಚರ್ಚೆಗೆ ಬನ್ನಿ. ಒಂದು ವೇಳೆ ಸುಹಾನಗಳಿಗೆ ಸ್ವರ್ಗದಲ್ಲಿ ಜಾಗ ಇಲ್ಲಾಂದ್ರೆ ನಿಮಗ್ಯಾಕೆ ತಲೆಬಿಸಿ ಮಾರ್ರೆ. ಅವರೇ ನೋಡಿಕೊಳ್ಳುತ್ತಾರೆ !
ಖುಷಿ ಅಂದ್ರೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ಹೇಳಿಕೆ ನೀಡಿ ಕ್ಷಮೆ ಕೇಳಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್ ಈ ಬಾರಿ ಮಾತ್ರ ಪ್ರೌಢತೆ ಮೆರೆದಿದ್ದಾರೆ. ಸುಹಾನಗಳಿಗೆ ನೈತಿಕ ಸ್ಥೈರ್ಯ ತುಂಬಿದ್ದು, ಶೇ.1 ವಿರೋಧಿಗಳ ಹುಟ್ಟಡಗಿಸಲು ಉಳಿದ ಶೇ.99 ಮಂದಿ ಬೆಂಬಲಕ್ಕೆ ಬರಬೇಕು ಎಂದು ವಿನಂತಿಸಿದ್ದಾರೆ. ಮೂಲಭೂತವಾದಿಗಳಿಗಿಂತ ಬೆಂಬಲಿಸುವವರ ಸಂಖ್ಯೆ ಏರುಮುಖವಾಗಿರೋದು ಒಳ್ಳೆಯ ಲಕ್ಷಣ. ಬುದ್ಧಿಜೀವಿಗಳೂ ನಿಧಾನಕ್ಕೆ ಬೆಂಬಲಕ್ಕೆ ಬಂದಿದ್ದಾರೆ, ಅಂಥ ಅನಿವಾರ್ಯತೆಯನ್ನು ಮಾಧ್ಯಮ ಸೃಷ್ಟಿಸಿದೆ.
ಸುಹಾನ ಹಾಡಿಗೆ ಎಲ್ಲೆಡೆ ಓಹ್, ಆಹ್ ಜತೆ ಹಾಹಾ ಕಾರವೂ ಕೇಳುತ್ತಿದೆ. ಆದರೆ “ಸರಿಗಮಪ ಸಂಗೀತ ಸ್ಪರ್ಧೆಯಲ್ಲಿ ಮೆಹಬೂಬ್ ಸಾಬ್ ಹಣೆಯಲ್ಲಿ ಬೂದಿ ಬಳಿದು, ಕುಂಕುಮ ಇಟ್ಟು ಪುಟ್ಟಯ್ಯಜ್ಜನಂತೆ ಬಂದರೆ ಯಾರೂ ಚಕಾರ ಎತ್ತಿಲ್ಲ. ಪ್ಯಾಾನಲ್ ಜಡ್ಜ್ ಮಾತಾಡಿಲ್ಲ, ಪ್ಯಾನಲ್ ಡಿಸ್ಕಶನ್ ಇಲ್ಲ. ಜಾಲತಾಣದ ಧರ್ಮರಕ್ಷಕರೂ ಇಲ್ಲ! ಅಂದರೆ ಕಟ್ಟು ಪಾಡು ಬರೀ ಹೆಣ್ಣಿಗೆ ಮಾತ್ರನಾ ?
ಲೇಖನ : ಜಿತೇಂದ್ರ ಕುಂದೇಶ್ವರ – ಕೃಪೆ : ವಿಶ್ವವಾಣಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.