ಸಾಮ್ರಾಟ್ ಅಶೋಕ, ಮರ್ಯಾದಾ ಪುರುಷೋತ್ತಮ ಶ್ರೀರಾಮ, ನೇತಾಜಿ ಸುಭಾಷ್ಚಂದ್ರ ಬೋಸ್ ಹೀಗೇ ಅನೇಕ ಮಹಾಪುರುಷರಿಗೆ ’ತೈಮೂರ್’ನನ್ನು ಹೋಲಿಸಿರುವ ಬಾಲಿವುಡ್ ನಟ ಸೈಫ್ ಅಲಿಖಾನ್, ತಮ್ಮ ಮಗನಿಗಿಟ್ಟ ಹೆಸರಿನ ಹಿಡನ್ ಅಜೆಂಡಾವನ್ನು ತಾವೇ ಹೊರಹಾಕಿದ್ದಾರೆ.
ತೈಮೂರ್ ಎಂದು ಹೆಸರಿಟ್ಟಾಗಲೇ ದೇಶಾದ್ಯಂತ ಸಾಕಷ್ಟು ವಿರೋಧಗಳು ಬಂದಿದ್ದವು. ಸಾಮಾಜಿಕ ಜಾಲತಾಣದಲ್ಲಿಯೂ ಟೀಕೆಗಳ ಸುರಿಮಳೆಯೇ ಆಗಿತ್ತು. ಆದರೂ ಅನೇಕ ಜಾತ್ಯತೀತವಾದಿಗಳು ಹೆಸರಿಗೇಕೆ ತಕರಾರು? ಮತ್ತೊಬ್ಬರ ಮಗುವಿನ ಹೆಸರಿನ ಬಗ್ಗೆ ಕಾಮೆಂಟ್ ಮಾಡಲು ಬೇರೆಯವರಿಗೆ ಹಕ್ಕಿಲ್ಲ ಎಂದೂ ಅಪರೂಪದ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮಹಾನುಭಾವರು ಅನೇಕ.
ಆದರೆ ಖಾಸಗಿ ವಾಹಿನಿಯೊಂದಕ್ಕೆ ಸೈಫ್ ನೀಡಿದ ಸಂದರ್ಶನದಲ್ಲಿ ನೈಜ ಬಣ್ಣ ಬಯಲಾಗಿದೆ. ಸಾಮ್ರಾಟ್ ಅಶೋಕ, ಅಲೆಕ್ಸಾಂಡರ್ ಕೂಡಾ ಹಿಂಸಾತ್ಮಕ ನಡೆಯುಳ್ಳವರೇ ಆಗಿದ್ದರು. ಹಾಗೇ ನೋಡಿದರೆ ಯುದ್ಧ ಅಪರಾಧಿ ಎಂದು ಗುರುತಿಸಿಕೊಂಡ ಸುಭಾಷ್ಚಂದ್ರ ಬೋಸ್ ಹೆಸರಿನಲ್ಲಿರುವ (ಕೊಲ್ಕತ್ತಾದಲ್ಲಿ) ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಬೇಕು ಎಂದು ಸೈಫ್ ಸಲಹೆ ಬೇರೆ ನೀಡಿದ್ದಾರೆ.
ದೇಶ ಕಟ್ಟಲು ಸೈನ್ಯ ಕಟ್ಟಿದ ನೇತಾಜಿ ಎಲ್ಲಿ ? ಕೊನೆಗೆ ಅಹಿಂಸೆಯನ್ನೇ ಆರಾಧಿಸುವ ಮೂಲಕ ಬೌದ್ಧಮತಕ್ಕೆ ಮೊರೆ ಹೋದ ಸಾಮ್ರಾಟ ಅಶೋಕನೆಲ್ಲಿ ? ದೆಹಲಿಯನ್ನೇ ಕೊಳ್ಳೆ ಹೊಡೆದಿದ್ದಲ್ಲದೇ ಇಸ್ಲಾಂಗೆ ಮತಾಂತರ ಹೊಂದಲು ನಿರಾಕರಿಸಿದ ಲಕ್ಷಾಂತರ ಹಿಂದೂಗಳನ್ನು ನಿರ್ದಯವಾಗಿ ಕೊಂದ ತೈಮೂರನೆಲ್ಲಿ? ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಂಡ ತೈಮೂರನಿಗೂ, ಮಹಿಳೆಯರನ್ನು ಗೌರವದಿಂದ ಕಂಡ ನಮ್ಮ ಸಾಮ್ರಾಟನಿಗೂ ಎಲ್ಲಿಯ ಹೋಲಿಕೆ ?
ಸೈಫ್ ಅಲಿ ಖಾನ್ ಮುಖವಾಡ ಇಷ್ಟಕ್ಕೇ ಮುಗಿದಿಲ್ಲ. ವಾಸ್ತವಿಕವಾಗಿ ನಾವು ರಾಮನ ಹೆಸರು ಇಡಲು ಸಾಧ್ಯವೇ ? ಈಗಾಗಲೇ ಜಗತ್ತಿನಲ್ಲಿ ’ಇಸ್ಲಾಮೊಫೋಬಿಯಾ’ ಇದೆ. ಇಂಥ ಸಂದರ್ಭದಲ್ಲಿ ನಾವು ನಮ್ಮ ಇಸ್ಲಾಂ ಧರ್ಮವನ್ನು ಗೌರವಿಸದೇ ಇನ್ನಾರು ಗೌರವಿಸಬೇಕು? ಎಂದೂ ಪ್ರಶ್ನಿಸಿದ್ದಾರೆ.
ಸೈಫ್ ಮಹಾಶಯನಿಗೆ ಶ್ರೀರಾಮನ ಹೆಸರಿಡಲು ಹೇಳಿದವರಾರು? ಮೂಲತಃ ಶ್ರೀರಾಮ ಏಕಪತ್ನಿವೃತಕ್ಕೆ ಜಗದ್ವಿಖ್ಯಾತಿ ಪಡೆದ ದೈವ. ಕಂಡ ಕಂಡ ಹೆಂಗಸರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡ ತೈಮೂರ್ನ ಹೆಸರೇ ಖಾನ್ ಮನೆತನಕ್ಕೆ ಸೂಕ್ತವಾಗಿರಬಹುದು ಬಿಡಿ.
ಪ್ರಶ್ನೆ ಅದಲ್ಲ, ಉಣ್ಣುವುದು, ವಾಸಿಸುವುದು, ಉಸಿರಾಡುವುದು ಇದೇ ನೆಲದಲ್ಲಿ. ಆದರೂ ಜನ್ಮಭೂಮಿಯನ್ನು ಹಳಿಯುವ ಧಾರ್ಷ್ಟ್ಯತೆ ತೋರುತ್ತಾರಲ್ಲ? ಇಂಥವರನ್ನೂ ರೋಲ್ ಮಾಡಲ್ಗಳಂತೆ ಅದೆಷ್ಟೋ ಯುವಜನತೆ ಪೋಸ್ಟರ್ ಹಾಕಿಕೊಂಡು ಪೂಜಿಸುತ್ತಾರಲ್ಲ ? ಗಂಭೀರವಾಗಿ ಚಿಂತಿಸಬೇಕಿದೆ. ದೇಶದ ಸಮಗ್ರತೆ, ಐಕ್ಯತೆ ವಿಷಯ ಬಂದಾಗ ಮಾಧ್ಯಮಗಳೂ ಛಾಟಿ ಬೀಸುವ ಜವಾಬ್ದಾರಿ ಮೆರೆಯಬೇಕಿದೆ. ಕೇಂದ್ರ ಸರ್ಕಾರವೂ ತೈಮೂರನತ್ತ ಒಂದು ಚಿತ್ತ ಹರಿಸಬೇಕಿದೆ.
ತೈಮೂರ್ ಹೆಸರನ್ನು ಸಮರ್ಥಿಸಿಕೊಂಡಿದ್ದಲ್ಲದೇ ಟೀಕಿಸಿದವರ ವಿರುದ್ಧ ಹರಿಯಾಯ್ದಿದ್ದ ರಿಷಿಕಪೂರ್ ಈಗೇನು ಹೇಳುತ್ತಾರೋ ದೇವರೇ ಬಲ್ಲ. ಇದರಲ್ಲಿ ಇನ್ಯಾವ ಅಭಿವ್ಯಕ್ತಿ ಸ್ವಾತಂತ್ರ್ಯ ಅಡಗಿದೆ ಎಂದು ಅವರು ವಿಶ್ಲೇಷಿಸುತ್ತಾರೋ ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.