ನವದೆಹಲಿ: ಗುರು ಗೋವಿಂದ ಸಿಂಗ್ರ 350ನೇ ಜನ್ಮದಿನದಂದು ಪ್ರಕಾಶ್ ಪರ್ವದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ, ಗುರು ಗೋವಿಂದ ಸಿಂಗ್ರ ಶೌರ್ಯ ಪ್ರತಿ ಭಾರತೀಯನ ಹೃದಯ ಮತ್ತು ಮನಸ್ಸುಗಳಲ್ಲಿ ಕೆತ್ತಲಾಗಿದೆ ಎಂದು ಹೇಳಿದ್ದಾರೆ.
ಗುರು ಗೋವಿಂದ್ ಸಿಂಗ್ ಅವರು ತಮ್ಮ ಜೀವನವನ್ನು ಜನರ ಸೇವೆ ಹಾಗೂ ಸತ್ಯ, ನ್ಯಾಯ, ಸಹಾನುಭೂತಿಯ ಮೌಲ್ಯಗಳ ಹೋರಾಟಕ್ಕೆ ಮೀಸಲಿಟ್ಟಿದ್ದರು. ಗುರು ಗೋವಿಂದ್ ಸಿಂಗ್ ಅವರು ಅದಮ್ಯ ಧೌರ್ಯ ಮತ್ತು ಜ್ಞಾನದಿಂದ ಅನುಗ್ರಹಿತರಾಗಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಗುರು ಗೋವಿಂದ ಸಿಂಗ್ರ 350ನೇ ಪ್ರಕಾಶ್ ಪರ್ವ ಆಚರಣೆಯ ಭಾಗವಾಗಿರುವುದು ಸಂತಸವಾಗಿದೆ ಎಂದು ಈ ವೇಳೆ ಪ್ರಧಾನಿ ಅವರು ಟ್ವೀಟ್ ಮಾಡಿದ್ದಾರೆ.
Delighted to be a part of #350thPrakashParv celebrations of Guru Gobind Singh ji in Patna today.
— Narendra Modi (@narendramodi) January 5, 2017
Guru Gobind Singh ji was blessed with indomitable courage & tremendous knowledge. His bravery is etched in the heart & mind of every Indian.
— Narendra Modi (@narendramodi) January 5, 2017
Guru Gobind Singh ji’s entire life was devoted to serving people and fighting for values of truth, justice and compassion. #350thPrakashParv
— Narendra Modi (@narendramodi) January 5, 2017
ಗುರು ಗೋವಿಂದ ಸಿಂಗ್ರ ಜನ್ಮ ಸ್ಥಳವಾದ ಪಾಟ್ನಾದ ತಖ್ತ್ ಹರ್ಮಂದರ್ ಸಾಹಿಬ್ನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.