ನವದೆಹಲಿ: ಈಗ ದೇಶದ ನಾಗರಿಕರಂತೆ ಭಾರತದಲ್ಲಿ ಹಸುಗಳು, ಎಮ್ಮೆಗಳಿಗೂ ಸಹ ಆಧಾರ್ ಮಾದರಿ 12 ಅಂಕೆಗಳ ವಿಶಿಷ್ಟ ಗುರುತಿನ ಕಾರ್ಡ್ನ್ನು ನಿಯೋಜಿಸಲಾಗಿದೆ.
ಹಾಲಿನ ಉತ್ಪಾದನೆಯನ್ನು ಮತ್ತು ಹಸುಗಳ ಸಂತತಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಪಶುಸಂಗೋಪನಾ ಇಲಾಖೆ ದೇಶೀಯ ದನಗಳಿಗೆ ಈ 12 ಅಂಕೆಗಳ ಕಾರ್ಡ್ನ್ನು ಟ್ಯಾಗ್ ಮಾಡುವ ಅಭಿಯಾನವನ್ನು ಆರಂಭಿಸಿದೆ.
ಜಾನುವಾರುಳಿಗೆ ಕಾಲ ಕಾಲಕ್ಕೆ ಲಸಿಕೆ ಮತ್ತು ವೈಜ್ಞಾನಿಕ ಪರೀಕ್ಷೆ ನಡೆಸುವ ಮೂಲಕ ಉತ್ತಮ ದೇಶೀಯ ತಳಿಗಳು ಲಭ್ಯವಾಗುವಂತೆ ಖಚಿತಪಡಿಸಲು ಈ ಪ್ರಮುಖ ಹೆಜ್ಜೆ ಸಹಾಯವಾಗಲಿದೆ. ಪಶುಸಂಗೋಪನಾ ಇಲಾಖೆ ಜಾನುವಾರುಗಳ ಕಿವಿಗೆ 12 ಸಂಖ್ಯೆಗಳ ಆಧಾರ್ ಮದರಿಯ ಸಂಖ್ಯೆಯನ್ನು ಲಗತ್ತಿಸುವಂತೆ ತಂತ್ರಜ್ಞರಿಗೆ ಸೂಚಿಸಿದೆ.
ಕೇಂದ್ರ ಸರ್ಕಾರ ೨೦೧೭ರ ಅಂತ್ಯದೊಳಗೆ 88 ಮಿಲಿಯನ್ ಹಸುಗಳು ಮತ್ತು ಎಮ್ಮೆಗಳಿಗೆ ಈ ಸಂಖ್ಯೆ ಲಗತ್ತಿಸುವ ಗುರಿಯೊಂದಿಗೆ 148 ಕೋಟಿ ರೂ. ನಿಯೋಜಿಸಿದೆ.
ಸುಮಾರು 1 ಲಕ್ಷ ತಂತ್ರಜ್ಞರಿಗೆ 50,000 ಟ್ಯಾಬ್ಲೆಟ್ಗಳನ್ನು ಒದಗಿಸಲಾಗಿದ್ದು, ಹಳದಿ ಬಣ್ಣದ ಪಾಲಿಯುರ್ಥೇನ್ ಟ್ಯಾಗ್ನ್ನು ದನಗಳ ಕಿವಿಗಳಿಗೆ ಲಗತ್ತಿಸಲಾಗುವುದು. 8 ಗ್ರಾಂ ತೂಕದ ಈ ಟ್ಯಾಗ್ ವಿರೂಪ ನಿರೋಧಕ (ಟ್ಯಾಂಪರ್ ಪ್ರೂಫ್) ಆಗಿರಲಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.