ಕುಂಚ ಬ್ರಹ್ಮ ರಾಜಾ ರವಿವರ್ಮರನ್ನು ನೆನೆಯದೇ ಭಾರತದ ವರ್ಣಚಿತ್ರಲೋಕ ಅಧುರವೇ ಸರಿ. ಭಾರತದ ವರ್ಣಚಿತ್ರಕಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಜಾರವಿವರ್ಮರಿಗೆ ಸಲ್ಲುತ್ತದೆ.
ಇವರು 14 ವಯಸ್ಸಿನಲ್ಲಿ ತನ್ನ ಮಾವನ ಸಹಾಯದಿಂದ ತಿರ್ವಾಂಕುರು ಅರಸರ ರಾಜಾಶ್ರಯ ಪಡೆದರು, ತನ್ನ ಚಿತ್ರಕಲೆಯಲ್ಲಿ ಹೊಸತನ್ನು ತಂದು ಚಿತ್ರಕಲೆಗೆ ಜೀವ ತುಂಬಿದ ಕೀರ್ತಿ ಕೂಡಾ ಇವರಿಗೆ ಸಲ್ಲಬೇಕು ಎಂದರೆ ತಪ್ಪಾಗದು. ರವಿವರ್ಮರ ಚಿತ್ರಕಲೆ ಭಾರತದ ಸಾಂಪ್ರಾದಾಯಿಕ ಕಲೆ ಮತ್ತು ಐರೋಪ್ಯ ಶೆಕ್ಷಣಿಕ ಕಲೆಗಳ ಸಂಮ್ಮಿಶ್ರಣ. ಇದಕ್ಕೆ ಕಾರಣ ಭಾರತಕ್ಕೆ ಐರೋಪಿನ ಚಿತ್ರಕಾರ ಥಿಯೊಡರ್ ಜೆನ್ಸನ್ ಬಂದಾಗ ಅವರ ಬಳಿ ಐರೋಪ್ಯ ಚಿತ್ರಕಲೆಯ ಹಾವ ಭಾವ ತಿಳಿದುಕೊಂಡದ್ದು ಮತ್ತು ತೈಲವರ್ಣ ಚಿತ್ರ ಸಂಯೋಜನೆಯನ್ನು ಕಲಿತದ್ದು.
ರವಿವರ್ಮ ತನ್ನ ವರ್ಣಚಿತ್ರಗಳಲ್ಲಿ ಅದಕ್ಕೆ ಬೇಕಾದ ಹಾವ-ಭಾವ-ರಸ-ಲಾವಣ್ಯಗಳನ್ನು ತುಂಬಿ ಪೌರಾಣಿಕ, ಐತಿಹಾಸಿಕ ಮತ್ತು ಕಾಲ್ಪನಿಕ ಚಿತ್ರಗಳಿಗೆ ಜೀವ ತುಂಬಿದವರು. ಇವರ ಚಿತ್ರಗಳಲ್ಲಿ ಸರಸ್ವತಿ, ಸೀರೆಯುಟ್ಟ ಮಹಿಳೆಯ ಚಿತ್ರಗಳು ಅನೇಕರ ಮನೆಮನೆಯಲ್ಲಿದೆ. ಇದು ಇವರ ಚಿತ್ರಕಲೆಯ ಪ್ರಸಿದ್ಧಿಗೆ ಸಾಕ್ಷಿ, ಅಲ್ಲದೇ ಭಾರತದ ಹಲವು ಅರಸರು ಇವರ ಚಿತ್ರಕಲೆಗೆ ಮಾರು ಹೋಗಿದ್ದಾರೆ.
ಮೈಸೂರು ಅರಸರ ಕೋರಿಕೆ:
ಅಂದಿನ ಮಹಾರಾಜರಾದ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಜಗನ್ಮೋಹನ ಅರಮನೆ ನಿರ್ಮಿಸಲಾಯಿತು. ಆಗ ಮಹಾರಾಜರು ರವಿವರ್ಮರನ್ನು ಕರೆಸಿ, ಅವರ ತೈಲಚಿತ್ರಗಳಿಂದ ಅರಮನೆ ವಿಶೇಷ ರಂಗು ಮೂಡಿಸಬೇಕೆಂದು ಅವರಲ್ಲಿ ಕೋರಿದ್ದರು. ಮಹಾರಾಜರ ಇಷ್ಟದಂತೆ ರವಿವರ್ಮರು 9 ಭವ್ಯ ಚಿತ್ರಗಳನ್ನು ರಚಿಸಿದರಲ್ಲದೇ, ಅದರ ಜೊತೆಗೆ ರಾಜ ಪರಿವಾರದ ಜನರ ಮತ್ತು ಅರಮನೆಯ ಪರಿಸರದ ಚಿತ್ರಗಳನ್ನೂ ಅತ್ಯಂತ ಸೊಗಸಾಗಿ ಬಿಡಿಸಿಕೊಟ್ಟು ಮೆಚ್ಚುಗೆ ಗಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರಪ್ರದರ್ಶನ:
ಬರೋಡಾದ ರಾಜರಿಂದ ಅಮೆರಿಕದ ಚಿಕಾಗೋದಲ್ಲಿ ನಡೆದ ‘ವಸ್ತುಕಲಾ ಪ್ರದರ್ಶನ’ ಕ್ಕೆ ಭಾರತದಿಂದ ರಾಜಾರವಿವರ್ಮರ 10 ವರ್ಣಚಿತ್ರಗಳನ್ನು ಕಳಿಸಲಾಗಿತ್ತು. ಅದು ಪ್ರಶಸ್ತಿಗಳನ್ನು ಗಳಿಸಿತು. ಅದೇ ಸಂದರ್ಭ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿದ್ದರು ರವಿವರ್ಮರ ತೈಲ ವರ್ಣಚಿತ್ರಗಳನ್ನು ನೋಡಿ ವಿಸ್ಮಯರಾದ ಅವರು, ಇದನ್ನು ಬರೆದ ಮಹಾ ಚಿತ್ರಕಲಾಕಾರನನ್ನು ಭೇಟಿ ಮಾಡುವ ಆಶಯ ವ್ಯಕ್ತ ಪಡಿಸಿದರು. ಅಲ್ಲದೇ ಮರಳಿ ಮುಂಬಯಿಗೆ ಬಂದಾಗ, ರವಿವರ್ಮರ ಮನೆಯಲ್ಲೇ ಒಂದು ದಿನ ಉಳಿದುಕೊಂಡಿದ್ದರಂತೆ ಇದು ಐತಿಹಾಸಿಕ ಕ್ಷಣವೇ ಸರಿ ಭಾರತದ ಮಹಾನ್ ಸಂತ ಮತ್ತು ಮಹಾ ಚಿತ್ರಕಲಾಕಾರನ ಅಪೂರ್ವ ಭೇಟಿ.
1906 ರಲ್ಲಿ ರವಿವರ್ಮರ ಕುಂಚಲೋಕಕ್ಕೆ ಪೂರ್ಣವಿರಾಮ ಬಿತ್ತು ಅದಕ್ಕೆ ಕಾರಣ ರವಿವರ್ಮರ ಆತ್ಮ ಕಲಾದೇವಿಯ ಸನ್ನಿಧಿಯಲ್ಲಿ ಐಕ್ಯಗೊಂಡಿತು. ಅವರ ಸನಿನೆನಪಿಗಾಗಿ ಭಾರತ ಸರಕಾರ ಅಂಚೆ ಚೀಟಿಯೋಂದನ್ನು ಬಿಡುಗಡೆಗೊಳಿಸಿತು, ಇದು ಒರ್ವ ಐತಿಹಾಸಿಕ ಕಲೆಗಾರನಿಗೆ ಸರಕಾರದ ನೀಡಿದ ಗೌರವ ಎಂದರೂ ತಪ್ಪಾಗದು.
ಇಂದು ಏ.29 ರಾಜಾ ರವಿವರ್ಮರ ಜನ್ಮದಿನ. ಇಂದು ಅವರು ನಮ್ಮೊಂದಿಗಿಲ್ಲ ಆದರೂ ನಾವವರನ್ನು ನೆನೆಯುವುದೇ ಅವರ ಕಲೆ ಮತ್ತು ಕಲಾಸೇವೆಗಾಗಿ. ಇದೇ ಒಬ್ಬ ನಿಜವಾದ ಕಲೆಗಾರನಿಗೆ ಸಿಗುವ ಗೌರವ ಅವರ ಸಾಧನೆಗೆ ಸಿಗುವ ಪುರಸ್ಕಾರ ಎನ್ನಬಹುದು. ಭಾರತ ಎಂದೂ ಅವರ ಕಲಾಸೇವೆಯನ್ನು ಮರೆಯಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.