ದುಬೈ: ಅಮೇರಿಕಾದ ಮೇಲೆ 9/11 ಮಾದರಿ ದಾಳಿ ಸಾವಿರಾರು ಬಾರಿ ಪುನರಾವರ್ತನೆಗೊಳ್ಳಲಿದೆ ಎಂದು ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ ಹೇಳಿದ್ದಾನೆ.
ಸೆಪ್ಟೆಂಬರ್ 9, 2001ರಲ್ಲಿ ಅಮೇರಿಕಾದ ಮೇಲೆ ನಡೆದ ಮಾರಣಾಂತಿಕ ದಾಳಿಯ 15ನೇ ವಾರ್ಷಿಕ ಆಚರಣೆ ವೇಳೆ ಯೂಟ್ಯೂಬ್ ವೀಡಿಯೋ ಒಂದರ ಮೂಲಕ ಈ ಬಗ್ಗೆ ಹೇಳಿದ್ದಾನೆ.
‘ನಮ್ಮ ವಿರುದ್ಧ ನಿಮ್ಮ ಅಪರಾಧಗಳು’ ಎಂಬ ವೀಡಿಯೋ ಒಂದರಲ್ಲಿ ಅಲ್ ಜವಾಹಿರಿ, ನಮ್ಮ ವಿರುದ್ಧ ಅಪರಾಧಗಳು ಮುಂದುವರೆದಲ್ಲಿ 9/11 ಮಾದರಿ ಸಾವಿರಾರು ದಾಳಿ ನಡೆಯಲಿವೆ ಎಂದು ಅಮೇರಿಕಾಕ್ಕೆ ಬೆದರಿಕೆ ಒಡ್ಡಿದ್ದಾನೆ.
ಈ ವೀಡಿಯೋದಲ್ಲಿ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ವಿರುದ್ಧ ವಾಷಿಂಗ್ಟನ್ನ ನೀತಿಗಳು, ತಮ್ಮ ದೇಶದಲ್ಲಿ ಭೂಕಬಳಿಕೆ, ಅಪರಾಧ ಮತ್ತು ಭ್ರಷ್ಟ ಸರ್ಕಾರಗಳಿಗೆ ಬೆಂಬಲ ನೀಡುತ್ತಿರುವ ಬಗ್ಗೆ ಅಲ್ ಜವಾಹಿರಿ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 9, 2001ರಂದು ಅಮೇರಿಕಾದ 2 ಅಪಹೃತ ವಿಮಾನಗಳನ್ನು ಬಳಸಿ ವಿಶ್ವ ವಾಣಿಜ್ಯ ಕೇಂದ್ರ (ವರ್ಲ್ಡ್ ಟ್ರೇಡ್ ಸೆಂಟರ್)ದ ಅವಳಿ ಕಟ್ಟಡಗಳ ಮೇಲೆ ಅಲ್ ಖೈದಾ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 2,753 ಮಂದಿ ಸಾವನ್ನಪ್ಪಿದ್ದರು.
ಈ ದಿನದಂದು ವಿಶ್ವ ವಾಣಿಜ್ಯ ಕೇಂದ್ರ ಅಲ್ಲದೇ ಪೆಂಟಗಾನ್ ಮೇಲೆ ಮತ್ತು ವಾಣಿಜ್ಯ ವಿಮಾನ ಬಳಸಿ ಗ್ರಾಮೀಣ ಪೆನ್ಸಿಲ್ವೇನಿಯಾ ಪ್ರದೇಶದಲ್ಲಿ ಮೇಲೆ ದಾಳಿ ನಡೆಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.