ಪಾಲ್ತಾಡಿ : ವಾರ್ಷಿಕ ಪರೀಕ್ಷೆ ಮುಗಿದು ಶಾಲೆಗೆ ಬೇಸಿಗೆ ರಜೆ. ಮಕ್ಕಳಿಗೆ ರಜೆಯ ಮಜಾ ಅನುಭವಿಸುವ ತವಕ. ಆದರೆ ಸವಣೂರಿನಲ್ಲಿ ಶಾಲಾ ಮಕ್ಕಳು ತಮ್ಮ ರಜೆಯನ್ನು ಸೃಜನ ಶೀಲ ಚಟುವಟಿಕೆಗಳಿಗೆ ಮೀಸಲಿಟ್ಟಂತಿದೆ. ಸಚಣೂರು ಜೆಸಿಐ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ರಜೆ ಪೂರ್ತಿ ಕಲೆ, ವ್ಯಕ್ತಿತ್ವ ವಿಕಸನ ಮೊದಲಾದ ವಿಷಯಗಳ ಕುರಿತು ಶಿಬಿರ ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಕ್ರಾಫ್ಟ್ ಕುರಿತು ಧನಂಜಯ ಮರ್ಕಂಜ ಗಾಳಿಪಟ ತಯಾರಿಕೆಯ ಕುರಿತಾಗಿ ರೋಹಿತ್ ,ಸಂಗೀತಉಪಕರಣಗಳ ಜೊತೆ ಗಾಯನ ತರಬೇತಿಯನ್ನು ಜನಾರ್ಧನ ಬಿ ,ವ್ಯಕ್ತಿತ್ವ ವಿಕಸನ ಕುರಿತು ದರ್ಶನ್ ಎ ,ರಂಗ ತರಬೇತಿಯನ್ನು ಕೃಷ್ಣಪ್ಪ ಬಂಬಿಲ ನಡೆಸುತ್ತಿದ್ದಾರೆ.ದಿನಕ್ಕೊಂದು ಸಂವಾದ ಕಾರ್ಯಕ್ರಮದಲ್ಲಿ ಸಾಮಾಜಿಕ ನಡವಳಿಕೆಯ ಕುರಿತು ಜಯಂತ ವೈ ,ಕೃಷಿಯ ಕುರಿತು ರಾಜರಾಮ ಪ್ರಭು ,ದೇಶಾಭಿಮಾನ ಕುರಿತು ಯೋಗಿತಾ ,ಸ್ವಚ್ಚತೆ ಕುರಿತು ಸರಿತಾ ಕಾಯರ್ಗ ,ಸಮಯ ಪಾಲನೆಯ ಕುರಿತು ಯತೀಶ್ ಕುಮಾರ್ ,ಶಿಸ್ತು ಕುರಿತು ಸುಶಾಂತ್ ಕೆಡೆಂಜಿ ಸಂವಾದ ನಡೆಸಿಕೊಡುತ್ತಿದ್ದಾರೆ.ಅಲ್ಲದೆ ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಪ್ರಾಂಶುಪಾಲ ಸೀತಾರಾಮ ಕೇವಳ, ಸೃಜನಶೀಲ ಶಿಕ್ಷಕ ತಾರಾನಾಥ ಸವಣೂರು ಹಾಗೂ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಶಿಕ್ಷಕ ವೃಂದದವರು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳ ಮಾನಸಿಕ,ದೈಹಿಕ,ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯ ಚಟುವಟಿಕೆ ನಡೆಸಲಾಗುತ್ತಿದೆ.
ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಭವಿಷ್ಯದ ಉತ್ತಮ ಬೆಳವಣಿಗೆಗೆ ನಡೆಯುವ ಶಿಬಿರಕ್ಕೆ ಸುತ್ತಮುತ್ತಲಿನ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ವಿಶೇಷವಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪೂರಕ ಬೋಧನೆಯನ್ನು ಮಾಡಲಾಗುತ್ತಿದೆ. ನಮ್ಮ ಮಕ್ಕಳ ಪ್ರತಿಭಾನ್ವೇಷಣೆಯ ಈ ಕಾರ್ಯ ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿರುವುದು ಶ್ಲಾಘನಿಯ ಎಂದು ಊರವರು ಆಡಿಕೊಳ್ಳುತ್ತಿದ್ದಾರೆ. ಶಾಲಾವಧಿಯಲ್ಲಿ ಒತ್ತಡದ ಮಧ್ಯೆ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ತೊಡಗಿಸಿಕೊಳ್ಳಲು ಕಷ್ಟ ವಾಗುತ್ತಿದೆ. ಇಂತಹ ಶಿಬಿರಗಳಿಂದ ಆತ್ಮೀಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಆಸಕ್ತಿ ಅರಳಿಸದೆ ನೀಡುವ ಶಿಕ್ಷಣ ವ್ಯರ್ಥ ಎಂದು ಶಿಬಿರದ ಆಯೋಜಕರಾದ ನವೀನ್ ಸವಣೂರು , ಸವಣೂರು ಜೆಸಿಐ ಘಟಕದ ಅಧ್ಯಕ್ಷ ಶಶಿಕುಮಾರ್ ಬಿ.ಎನ್ ಹಾಗೂ ಸವಣೂರು ಯುವಕ ಮಂಡಲದ ಅಧ್ಯಕ್ಷ ದಯಾನಂದ ಮೆದು ಅವರ ಮಾತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.