ಹರಿಯಾಣದ ಸಣ್ಣ ಹಳ್ಳಿಯೊಂದು ಇದೀಗ ಅದರ ಸರ್ಪಂಚ್ ಕಾರ್ಯದಿಂದಾಗಿ ಭಾರೀ ಸುದ್ದಿ ಮಾಡುತ್ತಿದೆ.
22 ವರ್ಷದ ಅಂಜು ಯಾದವ್ ಎಂಬ ಯುವ ಸರ್ಪಂಚ್ ಹರಿಯಾಣದ ಚಂಡೀವಲ್ ಗ್ರಾಮದ ಅತ್ಯಂತ ಕಿರಿಯ ಸರ್ಪಂಚ್ ಎಂದು ಖ್ಯಾತಿ ಗಳಿಸಿದ್ದಾಳೆ. ಇದೀಗ ಆಕೆ ತನ್ನ ಗ್ರಾಮದ ಸುರಕ್ಷತೆಗಾಗಿ ಸಿಸಿಟಿವಿಗಳನ್ನು ಅಳವಡಿಸುವ ಮೂಲಕ ಇತರ ಗ್ರಾಮಗಳಿಗೂ ಮಾದರಿ ಎನಿಸಿದ್ದಾರೆ.
ಹರಿಯಾಣದ ಹಲವು ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕವೇ ಇಲ್ಲ. ಅಂತಹದಲ್ಲಿ ಆಕೆ ಸೋಲಾರ್ ಶಕ್ತಿಯನ್ನು ಬಳಸಿ ತಮ್ಮ ಹಳ್ಳಿಯಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದಾರೆ.
ಫರಿದಾಬಾದ್ ಜಿಲ್ಲೆಯಲ್ಲಿ ಈ ಗ್ರಾಮವಿದ್ದು, ಒಟ್ಟು 8 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ 72 ಸೋಲಾರ್ ಪವರ್ಡ್ ಸಿಸಿಟಿವಿಗಳನ್ನು sಸಾರ್ವಜನಿಕ ಅನುಕೂಲಕ್ಕಾಗಿ ರಸ್ತೆ ಬದಿಗಳಲ್ಲಿ ಅಳವಡಿಸಲಾಗಿದೆ.
ಈ ಪ್ರದೇಶಕ್ಕೆ ಕೈಗಾರಿಕೆಗಳು ಬಂದ ಬಳಿಕ ವಿವಿಧ ಭಾಗಗಳ ಜನ ಇಲ್ಲಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಭದ್ರತೆಯ ಕಾರಣದಿಂದ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಆತ್ಯವಶ್ಯಕ ಎನಿಸಿದೆ.
ಸಿಸಿಟಿವಿ ಅಳವಡಿಕೆಗೆ ಒಟ್ಟು 11 ಲಕ್ಷ ವ್ಯಯವಾಗಿದ್ದು, ಹೆಚ್ಚುವರಿ 4 ಲಕ್ಷ ಸೋಲಾರ್ ಪವರ್ಗೆ ವ್ಯಯವಾಗಿದೆ. ಇದನ್ನು ಮಾನಿಟರ್ ಮಾಡಲು ಯಾವುದೇ ಸಿಬ್ಬಂದಿಗಳು ಇಲ್ಲದ ಕಾರಣ ಸ್ವತಃ ಅಂಜು ಅವರೇ ತಮ್ಮ ಮನೆಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿದ್ದಾರೆ. ಅವರ ಮನೆಯವರು ಸಿಸಿಟಿವಿಗಳ ಮೇಲೆ ಕಣ್ಣಿಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಅಂಜು ಅವರ ಕಾರ್ಯದಿಂದಾಗಿ ಚಂಡೀವಲಿ ಗ್ರಾಮದಲ್ಲಿ ಸುಳ್ಳು ಪ್ರಕರಣಗಳು, ಅಪರಾಧ ಪ್ರಕರಣಗಳು ಬಹಳಷ್ಟು ಕಡಿಮೆ ಆಗಿದೆ. ರಾತ್ರಿ ವೇಳೆ ಕಳ್ಳತನದಂತಹ ಕೃತ್ಯಗಳನ್ನು ಎಸಗಲು ದುಷ್ಕರ್ಮಿಗಳು ಹಿಂಜರಿಯುತ್ತಿದ್ದಾರೆ. ಸ್ವತಃ ಪೊಲೀಸರೇ ಈ ಬಗ್ಗೆ ಹೇಳಿಕೊಂಡಿದ್ದಾರೆ.
ಅಂಜು ಅವರ ಕಾರ್ಯದಿಂದ ಪ್ರೇರಣೆ ಪಡೆದು ಅವರ ಪಕ್ಕದ ಗ್ರಾಮದಲ್ಲೂ ೧೫೦ ಸೋಲಾರ್ ಪವರ್ಡ್ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಇನ್ನೂ 3-4 ಗ್ರಾಮಗಳು ಸಿಸಿಟಿವಿ ಅಳವಡಿಸಲು ಮುಂದಾಗುತ್ತಿವೆ.
ಸಿಸಿಟಿವಿ ಇಂದಾಗಿ ಆಡಳಿತದಲ್ಲಿ ಪಾರದರ್ಶಕತೆ ಬಂದಿದೆ. ಜನರಲ್ಲಿ ಸುರಕ್ಷತಾ ಭಾವ ಮೂಡಿದೆ ಎಂಬುದು ಹಲವಾರು ಮಂದಿಯ ಅಭಿಪ್ರಾಯ.
ಇದರ ಸಂಪೂರ್ಣ ಕ್ರೆಡಿಟ್ಅನ್ನು ಗ್ರಾಮಸ್ಥರು ಅಂಜು ಯಾದವ್ ಅವರಿಗೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.