ಮುಂಬಯಿ: ಮಹಾರಾಷ್ಟ್ರದ ಸಣ್ಣ ಪಟ್ಟಣ ಮತ್ತು ಗ್ರಾಮದ ಯುವತಿಯರು ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ ಪದ್ಧತಿಯನ್ನು ಮುರಿದು ಇದೀಗ ವೃತ್ತಿಪರ ಎಲೆಕ್ಟ್ರಿಶಿಯನ್ಗಳಾಗುವತ್ತ ಹೆಜ್ಜೆ ಇಟ್ಟಿದ್ದಾರೆ.
ಎಲೆಕ್ಟ್ರಿಶಿಯನ್ ವೃತ್ತಿ ಪುರುಷ ಪ್ರಧಾನವಾದುದು, ಮಹಿಳೆಯರು ಆ ಕ್ಷೇತ್ರದತ್ತ ಮುಖ ಮಾಡುವುದು ತೀರಾ ವಿರಳ. ಆದರೆ ವಿದ್ಯುತ್ತನ್ನೇ ಕಾಣದ ಮಹಾರಾಷ್ಟ್ರದ ಹಳ್ಳಿಗಳ ಯುವತಿಯರು ಇದೀಗ ವೃತ್ತಿಪರ ಎಲೆಕ್ಟ್ರಿಶಿಯನ್ಗಳಾಗಲು ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಧಾಣೆಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 21 ಯುವತಿಯರು ಈ ನಿಟ್ಟಿನಲ್ಲಿ ತರಬೇತಿ ಪಡೆಯುತ್ತಿದ್ದು, ಮುಂದಿನ ವರ್ಷ ಆಗಸ್ಟ್ಗೆ ಶಿಕ್ಷಣ ಪೂರೈಸಿ ಎಲೆಕ್ಟ್ರಿಶಿಯನ್ ವೃತ್ತಿಗೆ ಪಾದಾರ್ಪಣೆ ಮಾಡಲಿದ್ದಾರೆ.
ಮೊದಮೊದಲು ಇವರ ಕುಟುಂಬ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಅವರ ಮನವೊಲಿಸಿ ಈ ಯುವತಿಯರು ಎಲೆಕ್ಟ್ರಿಶಿಯನ್ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.