ಅಂಕತ್ತಡ್ಕ : ಗುರುದೇವಾ ಸೇವಾಬಳಗ, ಗ್ರಾಮ ವಿಕಾಸ ಘಟ ಸಮಿತಿಯ ವಾರ್ಷಿಕೋತ್ಸವ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.ತಮ್ಮ ಮನಸ್ಸು ಸ್ವಚ್ಚವಾಗಿದ್ದರೆ ಸಮಾಜವನ್ನು ಸ್ವಚ್ಚವಾಗಿಡಬಹುದು.ತಮ್ಮ ಜೀವನದ ಪೂರ್ವಾವಲೋಕನದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ.ಸದ್ವಿಚಾರಗಳನ್ನು ಆಚರಣೆಗೆ ತಂದರೆ ಜೀವನದಲ್ಲಿ ಬದಲಾವಣೆ ತರಲು ಸಾದ್ಯ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನಮ್ನ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಅಂಕತಡ್ಕದಲ್ಲಿ ಒಡಿಯೂರು ಗುರುದೇವಾ ಸೇವಾ ಬಳಗ ಹಾಗೂ ಶ್ರೀಗುರುದೇವ ಗ್ರಾಮವಿಕಾಸ ಯೋಜನೆಯ ಪಾಲ್ತಾಡಿ ಘಟ ಸಮಿತಿಯ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಸತ್ಯದತ್ತ ವೃತ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ಯುವಜನತೆ ಅಂತರ್ಜಾಲ ಎಂಬ ಸುಳಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹಾದಿತಪ್ಪುತ್ತಿದ್ದಾರೆ. ಅವರಿಗೆ ಸಂಸ್ಕಾರವನ್ನು ಕಲಿಸುವ ಕಾರ್ಯ ಸಮಾಜದಿಂದಾಗಬೇಕಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ್ ಸುಲಾಯ ಮಾತನಾಡಿ, ಭಾರತೀಯರು ಸರಳ , ಶುದ್ದ ಜೀವನಕ್ಕೆ ಮಾದರಿ. ಜೀವನದಲ್ಲಿ ಯಾವುದೇ ಕೀಳರಿಮೆ ಬೇಡ. ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಮುಂದುವರಿದಾಗ ಯಶಸ್ಸು ಸಾಧ್ಯ. ಸಮಾಜದಲ್ಲಿನ ಸಮಸ್ಯೆಗಳನ್ನು ಒಂದಾಗಿ ದೂರಮಾಡಬೇಕಿದೆ. ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಸಮಾಜದಲ್ಲಿ ಸಂಘಟನೆ ಸಾಧ್ಯ.ಸಂಸ್ಕಾರ , ಸಹಕಾರ ಮನೋಭಾವದಿಂದ ಸ್ವಾವಲಂಬಿ ಸಮಾಜ ನಿರ್ಮಾಣ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಮಾತನಾಡಿ, ಧಾರ್ಮಿಕ ಸಂಘಟನೆಗಳಿಂದ ಸಮಾಜ ಮೇಲಾಗುವ ಹಾನಿಯನ್ನು ತಡೆಗಟ್ಟಲು ಸಾಧ್ಯ.ಸಾಮೂಹಿಕವಾಗಿ ನಡೆಯುವ ದೇವರ ಕಾರ್ಯಗಳು ಹೆಚ್ಚು ಫಲದಾಯಕವಾಗುತ್ತದೆ. ಧಾರ್ಮಿಕ ಚಟುವಟಿಕೆಯಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದರು.
ಒಡಿಯೂರು ವಿವಿದೋಧ್ದೇಶ ಸಹಕಾರಿ ಸಂಘದ ನಿರ್ದೇಶಕ ಪದ್ಮನಾಭ ಶೆಟ್ಟಿ, ಪಾಲ್ತಾಡಿ ಚೈತನ್ಯ ರೈತ ಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಅಂಕತ್ತಡ್ಕ ಒಡಿಯೂರು ಗುರುದೇವಾ ಸೇವಾ ಬಳಗದ ಗೌರವಾಧ್ಯಕ್ಷ ಎಸ್.ಬಿ.ಜಯರಾಮ ರೈ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯ ಕಂಪ ರಾಮಣ್ಣ ಪೂಜಾರಿ ಮತ್ತು ಪತ್ರಕರ್ತ ಪ್ರವೀಣ್ ಚೆನ್ನಾವರ ಅವರನ್ನು ಒಡಿಯೂರು ಶ್ರೀಗಳು ಸನ್ಮಾನಿಸಿದರು. ಕರುಣಾಕರ ರೈ ಮತ್ತು ರಾಮಣ್ಣ ರೈ ಬಾಕಿಜಾಲು ಅವರನ್ನು ಗೌರವಿಸಲಾಯಿತು.
ಕುಸುಮಾ ತ್ಯಾಂಪಣ್ಣ ರೈ, ರೋಹಿತ್ ರೈ ಕುಂಜಾಡಿ, ಸತೀಶ್ ನೆಟ್ಟಾರು, ಸಂತೋಷ್ ರೈ, ಲತಾ ಅತಿಥಿಗಳನ್ನು ಗೌರವಿಸಿದರು. ಸೇವಾ ಬಳಗದ ಅಧ್ಯಕ್ಷ ಕರುಣಾಕರ ರೈ ಪಟ್ಟೆ ಸ್ವಾಗತಿಸಿ, ಕಾರ್ಯದರ್ಶಿ ವಿಶ್ವನಾಥ ರೈ ವರದಿ ವಾಚಿಸಿದರು.ಸೇವಾ ದೀಕ್ಷಿತೆ ಶ್ರೀರಂಜಿನಿ ವಂದಿಸಿದರು.ವಿಜೇತ್ ರೈ ಅಂಕತ್ತಡ್ಕ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.