News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಕ್ರಮ ಮರಳು ಸಾಗಣಿಕೆ ಲಾರಿಯ ಡಿಕ್ಕಿ ರಭಸಕ್ಕೆ ಮೃತರಾದ ತಂದೆ ಮಗ

ಬೆಳ್ತಂಗಡಿ : ಅಕ್ರಮ ಮರಳು ಸಾಗಣಿಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಲಸಕ್ಕೆ ತೆರಳುತ್ತಿದ್ದ ತಂದೆ ಮಗ ದುರ್ಮರಣವಾದ ಘಟನೆ ಸೋಮವಾರ ಮಧ್ಯಾಹ್ನ ಉಜಿರೆ ಸಮೀಪ ನಡೆದಿದೆ. ಅಕ್ರಮ ಮರಳು ಸಾಗಣಿಕೆ ಲಾರಿಯ ಡಿಕ್ಕಿ ರಭಸಕ್ಕೆ ಮೃತರಾದವರನ್ನು ಲಾಲ ಗ್ರಾಮದ ಗಾಂಧಿನಗರ ನಿವಾಸಿ ದಿನೇಶ್ (49), ಮತ್ತು ಆತನ ಮಗ ಅಭಿಷೇಕ್ (22) ಎಂದು ಗುರುತಿಸಲಾಗಿದೆ.

20dlACCEIDENT

ಇವರಿಬ್ಬರು ಸೋಮವಾರ ಮಧ್ಯಾಹ್ನ ಮನೆಯಲ್ಲಿ ಊಟ ಮುಗಿಸಿ ತಾವು ನಿರ್ವಹಿಸುತ್ತಿದ್ದ ಉಜಿರೆಯ ಸಾಯಿ ಇಂಡಸ್ಟ್ರೀಸ್‌ಗೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಇವರಿಬ್ಬರು ಬೈಕಿನಲ್ಲಿ ಉಜಿರೆಯಿಂದ ಬೆಳ್ತಂಗಡಿ ಹೋಗುತ್ತಿದ್ದಾಗ ಉಜಿರೆ ಕಡೆಗೆ ಮಿತಿ ಮೀರಿದ ವೇಗದಲ್ಲಿ ಬರುತ್ತಿದ್ದ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ತಂದೆ ಮಗ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಇದೇ ವೇಳೆ ಅತಿಯಾದ ವೇಗದಿಂದ ಮರಳು ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಇವರ ಸಹಿತ ಬೈಕ್‌ನ್ನು ಎಳೆದಾಡಿಕೊಂಡು ಹೋಗಿದೆ.

Untitled-1

ಕೂಡಲೇ ಇಬ್ಬರನ್ನು ಅಲ್ಲಿಯೇ ಇರುವ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಿನೇಶ್ ಮೃತಪಟ್ಟಿದ್ದಾರೆ. ಉಸಿರಾಡುತ್ತಿದ್ದ ಅಭಿಷೇಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯುತ್ತಿದ್ದಾಗ ಮೃತಪಟ್ಟಿದ್ದಾರೆ. ಲಾರಿಯು ಬೆಂಗಳೂರಿಗೆ ಮರಳನ್ನು ಸಾಗಿಸುತ್ತಿತ್ತು. ತಂದೆ ಮಗ ಇಬ್ಬರೂ ವೃತ್ತಿಯಲ್ಲಿ ಪೈಟಿಂಗ್ ವೃತ್ತಿ ಮಾಡುತ್ತಿದ್ದರು. ಇವರ ಬೈಕ್‌ಗೆ ಡಿಕ್ಕಿ ಹೊಡೆದ ಇನ್ನೊಬ್ಬ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನ ಗುರುತು ತಿಳಿದಿಲ್ಲ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಿಂದಿನಿಂದ ಬಂದ ಅಕ್ರಮ ಮರಳು ಸಾಗಣಿಕೆಯ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಉಜಿರೆ ಸಮೀಪದ ಬೆನಕ ಆಸ್ಪತ್ರೆಯ ಮುಂಭಾಗದ ವಠಾರಕ್ಕೆ ಬಿದ್ದಿದೆ.

20dlACCIDENT1

ಶಿರಾಡಿ ಘಾಟಿ ದುರಸ್ತಿ ಹಿನ್ನೆಲೆಯಲ್ಲಿ ಅಕ್ರಮ ಮರಳುಗಳನ್ನು ಜಿಲ್ಲೆಯಿಂದ ಹೊರ ಜಿಲ್ಲೆ, ರಾಜ್ಯಗಳಿಗೆ ಸಾಗಿಸುವ ಬೃಹತ್ ಗಾತ್ರದ ಲಾರಿಗಳು ನಿಮಿಷಕ್ಕೊಂದರಂತೆ ಸಾಗುತ್ತಿದೆ. ರಸ್ತೆಯ ಸರಿಯಾದ ತಿಳುವಳಿಕೆಯಿಲ್ಲದೆ ಲಾರಿ ಚಾಲಕರು ಯಮರೂಪಿಯಂತೆ ವರ್ತಿಸಿ ಹಲವಾರು ಜನರ ಸಾವಿಗೆ ಕಾರಣರಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಉಜಿರೆ ಸಮೀಪ ಬೆಳ್ಳಂಬೆಳಗ್ಗೆ ಅಕ್ರಮ ಮರಳು ಲಾರಿಗೆ ಸಿಕ್ಕಿ ಡಿಎಸ್‌ಎಸ್ ಕಾರ್ಯಕರ್ತರಿಬ್ಬರು ಸಾವನ್ನಪ್ಪಿದ್ದರು. ಏಪ್ರಿಲ್ 15ರಂದು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ, ಪಂಗಡದ ಕುಂದುಕೊರತೆ ಸಭೆಯಲ್ಲಿ ಮರಳು ಸಾಗಾಣಿಕೆ ಲಾರಿಗಳ ಮೇಲೆ ಕಡಿವಾನ ಹಾಕಲು ಆಗ್ರಹಿಸಲಾಗಿತ್ತು. ಇದು ಆಗಿ ಕೇವಲ 6 ದಿನದಲ್ಲಿ ತಂದೆ ಮಗನ ಸಾವಿಗೆ ಈ ಅಕ್ರಮ ಮರಳು ಸಾಗಾಟದ ಲಾರಿ ಕಾರಣವಾಗಿದೆ.

ಟ್ರಾಫಿಕ್ ಜಾಮ್ ಜಾಮ್ ಜಮ್! ಚಾರ್ಮಾಡಿ ಘಾಟಿಯಲ್ಲಿ ಇತ್ತೀಚೆಗೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದಂತೆ ಕಳೆದ ಮೂರು-ನಾಲ್ಕು ತಿಂಗಳಿನಿಂದ ಉಜಿರೆಯಿಂದ ಗುರುವಾಯನಕೆರೆ ತನಕ ದಿನಪೂರ್ತಿ ಟ್ರಾಫಿಕ್ ಜಾಮ್ ಆಗುತ್ತಿದೆ. ಸುಗಮ ಸಂಚಾರಕ್ಕೆ ಪ್ರಯತ್ನಿಸುವುದೇ ಬೆಳ್ತಂಗಡಿ ಪೊಲೀಸರಿಗೆ ದೊಡ್ಡ ಸಾಹಸವಾಗಿದೆ. ಮೊದಲೇ ಸಿಬ್ಬಂದಿಗಳ ಕೊರತೆಯಿಂದ ಬಳಲುತ್ತಿರುವ ಬೆಳ್ತಂಗಡಿ ಪೊಲೀಸರು ತನ್ನ ಇತಿ ಮಿತಿಯೊಳಗೆ ಸುಗಮ ಸಂಚಾರಕ್ಕೆ ದುಡಿಯುತ್ತಿದ್ದಾರೆ. ಆದರೆ ಈ ಮಧ್ಯೆಯೂ ದಿನಕ್ಕೆ ಒಂದೆರಡು ಅಪಘಾತಗಳು ಕಟ್ಟಿಟ್ಟ ಬುತ್ತಿಯೇ ಸರಿ.

20dlACCIDENT2

ಅಕ್ರಮ ಮರಳು ಲಾರಿಗೆ ಕಡಿವಾಣ ಹಾಕುವವರು ಯಾರು? ಹಲವಾರು ಅಮಾಯಕ ಜೀವಗಳ ಬಲಿತೆಗೆದುಕೊಂಡ ಈ ಅಕ್ರಮ ಮರಳು ಲಾರಿಗಳಿಗೆ ಅಂಕುಶ ಹಾಕುವವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲದಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಜನರ ಜೀವದೊಂದಿಗೆ ಚೆಲ್ಲಾಟವಾಡಲು ಗಾಡನಿದ್ರೆಯಲ್ಲಿ ಇದ್ದಂತೆ ಕಾಣುತ್ತಿದೆ. ಇಲಾಖಾಧಿಕಾರಿಗಳು ಜಿಲ್ಲೆಯ ಭೂ ಒಡಲನ್ನು ಸೀಳಿ ಅಕ್ರಮ ದಂಧೆಯಲ್ಲಿ ತೊಡಗಿರುವ ಭೂ ಮಾಫಿಯಾದ ಪಾದಕ್ಕೆರಗಿ ತಮ್ಮ ಮಾಮೂಲನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬಲಿಷ್ಠ ಲೋಕಾಯುಕ್ತ ಪಡೆಯಿದ್ದರೂ ಕೂಡಾ ಜಿಲ್ಲೆಯಲ್ಲಿ ನಡೆಯುವ ಈ ಅಕ್ರಮ ಕಾಂಚನ ಸೇವೆಗೆ ಇನ್ನೂ ಬಿದ್ದಿಲ್ಲ ಬ್ರೇಕ್!

ಕುರುಡು ಕಾಂಚಾಣಕ್ಕಾಗಿ ಗಣಿ ಮತ್ತು ಭೂ ವಿಜ್ಙಾನ ಇಲಾಖೆ ತಲೆ ಭಾಗಿ ಅಕ್ರಮ ಭೂ ಮಾಫಿಯಾಕ್ಕೆ ಶರಣಾಗತಿಯಾಗಿದೆ. ಪೊಲೀಸ್ ಇಲಾಖೆ ಕೂಡಾ ಮರಳು ಮಾಫಿಯಾದ ತಂಟೆಗೆ ಹೋಗುತ್ತಿಲ್ಲ. ಇತ್ತೀಚೆಗೆ ಮಾತ್ರ ಒಂದೆರಡು ಲಾರಿಗಳನ್ನು ಹಿಡಿದು ದಂಡ ಹಾಕಿದ್ದು ಬಿಟ್ಟರೆ ಬೇರೇನನ್ನು ಮಾಡಿಲ್ಲ. ಪೊಲೀಸ್ ಇಲಾಖೆ ಕೂಡಾ ತಿಂಗಳ ಮಾಮೂಲಿ ತಪ್ಪದಿರಲಿ ಎಂದು ಮರಳು ಮಾಫಿಯಾದ ಜೊತೆ ಕೈಜೋಡಿಸಿದೆಯೇ ಎಂಬ ಅನುಮಾನ ಮೂಡುವಂತೆ ಮಾಡುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top