Thursday, April 21st, 2016
News13
ಬಂಟ್ವಾಳ : ನಮ್ಮ ದೇವಸ್ಥಾನ , ದೈವ ಸ್ಥಾನ ಮಠ ಮಂದಿರ ಗಳು ನಮ್ಮ ಸಂಸ್ಕತಿಯ ಬೇರು ಧರ್ಮ ವೆಂಬುದು ತಾಯಿ ಬೇರು ಇದ್ದಂತೆ ಧರ್ಮ ಮರೆತರೆ ಉನ್ನತಿ ಯಾಗದು , ದರ್ಮ ದ ಮರ್ಮ ತಿಳಿದಾಗ ಬದುಕು ಸಾರ್ಥಕ ವಾಗುತದೆ ಎಂದು ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರ್ ರವರು ಶ್ರೀ ಅರಸು ವೈದ್ಯ ನಾಥ ದೂಮಾವತಿಬಂಟ ದೈವಸ್ಥಾನ ದ ಧರ್ಮ ದೈವ ಗಳ ಭಂಡಾರ ಮನೆಯ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಪ್ರಜ್ಞಾವಂತ ಆಡಳಿತದಿಂದ ದೇಶದ ಒಳಿತು ಸಾದ್ಯ ಬದುಕಿನಲ್ಲಿ ಭಾರಿ ಸವಾಲುಗಳನ್ನು ಅನುಭವಿಸುತಿದ್ದೇವೆ, ಪ್ರಕೃತಿ ವಿಕೋಪ ದ ಬಗ್ಗೆ ಅವಲೋಕನವಾಗಬೇಕು ತುಳುನಾಡು ಪ್ರೀತಿ ವಿಶ್ವಾಸದ ಸೆಲೆ ಸನಾತನ ಧರ್ಮ ಉತ್ಕೃಷ್ಟ ವಾದುದು ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕಾರದ ಅಂಶ ಬಳಲಿದೆ.
ಭಾಷೆಯ ಹಿಂದಿರುವ ಸಂಸೃತಿಯ ಹಿಂದಿರುವ ಅರಿವು ಅಗತ್ಯ ಎಂದು ತಿಳಿಯಪಡಿಸಿದರು. ಸಭಾ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಿವೇಕ್ ಶೆಟ್ಟಿ ನಗ್ರಿಗುತ್ತು ಅದ್ಯಕ್ಷರು ಬಂಟರ ಸಂಘ ಬಂಟ್ವಾಳ ವಹಿಸಿದ್ದರು. ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲು , ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ , , ಸೇಸಪ್ಪ ಕೊಟ್ಯಾನ್ ಅಧ್ಯಕ್ಷರು ಬಿಲ್ಲವ ಸಮಾಜ ಬಂಟ್ವಾಳ , ಸತೀಶ್ ನಾಯಕ್ ಸುಜೀರ್ ಕಾರ್ , ಜನಾರ್ಧನ ಶೆಟ್ಟಿ ಸುಜೀರ್ ಗುತ್ತು , ಸದಾನಂದ ಆಳ್ವ ತೇವು , ವಜ್ರ ನಾಭ ಶೆಟ್ಟಿ ಅರ್ಕುಲ ಬೀಡು , ಸುಂದರ ಶೆಟ್ಟಿ ಕಲ್ಲತಡಮೆ , ದೇವಸ್ಯ ಪ್ರಕಾಶ್ ಚಂದ್ರ ರೈ , ಶಿಲ್ಪಿ ಮಹೇಶ್ ಮುನಿಯಂಗಳ , ಕುಂತಾರು ರವೀಶ್ ತಂತ್ರಿ ,ಮತ್ತಿತರರು ಉಪಸ್ಥಿತರಿದ್ದರು.
ಪ್ರಾತಕಾಲ 6 ಗಂಟೆಗೆ 108 ತೆಂಗಿನಕಾಯಿಗಳ ಗಣಯಾಗ ದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶಿಲಾನ್ಯಾಸ ದ ಬಳಿಕ ಧಾರ್ಮಿಕ ಸಭೆ ಆ ನಂತರ ಅನ್ನದಾನ ದೊಂದಿಗೆ ಸಂಪನ್ನ ಗೊಂಡಿತು.
ಸಮಾಜದ ಉತ್ತಮ ಸುದ್ದಿಗಳನ್ನು ನಾವು ನಿಮ್ಮ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಪ್ರೋತ್ಸಾಹಿಸಿ, ಸ್ವೀಕರಿಸಿ. ನೀವು ಸ್ವೀಕರಿಸಿದಾಗ ನಾವು ಬೆಳೆಯಬಹುದು. ಒಳ್ಳೆಯ ಸುದ್ದಿಗಳಿಗೆ ಸಮಾಜ ತೆರೆದುಕೊಂಡಿದೆ ತಲುಪಿಸುವವರು ನಾವಾಗಬಾರದೇಕೆ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.