ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಹಾಗೂ ಅದರ ನಾಯಕರನ್ನು ಇಸ್ಲಾಮಿಕ್ ಸ್ಟೇಟ್ (ಇಸಿಸ್)ಗೆ ಮತ್ತು ಭಯೋತ್ಪಾದಕರಿಗೆ ಹೋಲಿಸುವ ಮಂದಿಯ ಅನಿಸಿಕೆ ತಪ್ಪು ಎಂಬುದಕ್ಕೆ ಆರ್ಎಸ್ಎಸ್ನ ಹಿರಿಯ ಕಾರ್ಯಕರ್ತ ಸಿದ್ಧಿ ನಾಥ್ ಸಿಂಗ್ ಒಂದು ಉತ್ತಮ ಉದಾಹರಣೆ ಎನ್ನುತ್ತಾರೆ ಜಾರ್ಖಂಡ್ನ ಹಫುವಾ ಗ್ರಾಮಸ್ಥರು.
ಕಳ್ಳತನ, ದರೋಡೆ ಮುಂತಾದ ಅಪರಾಧ ಕಾರ್ಯಗಳಲ್ಲಿ ತೊಡಗಿದ್ದ ಈ ಗ್ರಾಮದ ಮುಸ್ಲಿಂ ರಾಜಕಾರಣಿಗಳನ್ನು, ಸಾಮಾಜಿಕ ಕಾರ್ಯಕರ್ತರನ್ನು, ಯುವ ನಾಯಕರನ್ನು ಇದರಿಂದ ದೂರ ಸರಿಸಿ ಮುಖ್ಯವಾಹಿನಿಗೆ ತರುವಲ್ಲಿ ಸಿದ್ಧಿನಾಥ್ ಸಿಂಗ್ ಅವರ ನಿರ್ವಹಿಸಿದ ಪಾತ್ರ ಮಹತ್ವದ್ದು. ಮುಸ್ಲಿಂ ಪ್ರಾಬಲ್ಯ ಹೆಚ್ಚಿರುವ ಈ ಗ್ರಾಮದ ಪ್ರಗತಿಗೆ ಅವರ ಕೊಡುಗೆ ಶ್ರೇಷ್ಠವಾದುದು. ಕಳೆದ ಎರಡು ದಶಕಗಳಿಂದ ಇಲ್ಲಿನ ಯುವಜನರಿಗಾಗಿ ಏಕರೂಪವಾಗಿ ತೋರುತ್ತಿರುವ ನಿಸ್ವಾರ್ಥ ಸೇವೆಯು ಯುವಕರು ಅವರನ್ನು ಗೌರವಿಸುವಂತೆ ಮಾಡಿದೆ.
ಜಾರ್ಖಂಡ್ನ ರಾಮಗಡ ಜಿಲ್ಲೆಯ ವಿದ್ಯುತ್ ಕೇಂದ್ರ ಪತ್ರಾಟು ನಿವಾಸಿಯಾಗಿರುವ ಸಿಂಗ್, ಬಿಹಾರ ಮತ್ತು ಜಾರ್ಖಂಡ್ನ ಆರ್ಎಸ್ಎಸ್ ಕ್ಷೇತ್ರೀಯ ಸಂಚಾಲಕ (ಪ್ರದೇಶ ಮುಖ್ಯಸ್ಥ) ಹಾಗೂ ಆರ್ಎಸ್ಎಸ್ನ ಸಾಮಾಜಿಕ ಅಭಿವೃದ್ಧಿ ವಿಭಾಗ ರಾಷ್ಟ್ರೀಯ ಸೇವಾ ಭಾರತಿ ಇದರ ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಸಂಸ್ಥೆ ’ಕಲ್ಪತರು’ನಲ್ಲಿ ದೇಶಾದ್ಯಂತ ನೂರಾರು ಗ್ರಾಮಗಳ ಯುವಕರ ಜೀವನೋಪಾಯಕ್ಕೆ ಉಚಿತ ಕೌಶಲ್ಯ ತರಬೇತಿ ನೀಡುತ್ತಿದ್ದಾರೆ.
ಉದ್ಯಮಿಯಾಗಿ ಪರಿವರ್ತನೆಗೊಂಡ ಎಂಜಿನಿಯರ್ ಸಿದ್ಧಿನಾಥ್ ಸಿಂಗ್, ಸುಮಾರು 1,000 ಜನಸಂಖ್ಯೆ ಇರುವ ಹಫುವಾ ಗ್ರಾಮದ ಯುವಕರ ಜೀವನ ಬದಲಾಯಿಸುವಲ್ಲಿ ಅವರ ಕಾರ್ಯನಿಷ್ಠೆ ಮತ್ತು ಭಕ್ತಿ ಒಂದು ಶಕ್ತಿಯಾಗಿ ಪರಿಣಮಿಸಿದೆ.
ಕಳೆದ ಎರಡು ದಶಕಗಳ ಹಿಂದೆ ಇಲ್ಲಿಯ ಯುವಜನತೆ ಶಾಲಾ ಶಿಕ್ಷಣವಿಲ್ಲದೇ, ತಮ್ಮ ಹೆಸರಿನಲ್ಲಿ ಅಪಾರ ಭೂ ಪ್ರದೇಶ, ಗದ್ದೆಗಳನ್ನು ಹೊಂದಿದ್ದರೂ ಅಲ್ಲಿ ಕೆಲಸ ಮಾಡುತ್ತಿರಲಿಲ್ಲ. ರಾಮಗಢ, ರಾಂಚಿ ಮೊದಲಾದ ಗ್ರಾಮಗಳಲ್ಲಿ ಕಳ್ಳತನ, ಬ್ಯಾಂಕ್ ದರೋಡೆಯಲ್ಲಿ ತೊಡಗಿದ್ದ ಈ ಯುವಕರು ಇಂದು ತಮ್ಮ ಜೀವನೋಪಾಯಕ್ಕೆ ತಕ್ಕಮಟ್ಟಿನ ಆದಾಯ, ಸಂಬಳ ಪಡೆಯುತ್ತಿದ್ದಾರೆ. ಅವರ ಮಕ್ಕಳು ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಕೆಲವರು ಅಫ್ಜಲ್ ಅಲಿ ಗುಜರಾತ್ನ ಅದಾನಿ ಗ್ರೂಪ್ನಲ್ಲಿ ಹಾಗೂ ತಸ್ಲಿಂ ಅನ್ಸಾರಿ ರೆಣುಕೂಟ್ನ ಹಿಂಡಾಲ್ಕೋ ಕಂಪೆನಿಯಲ್ಲಿ ಫಿಟ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಹಫುವಾ ನಿವಾಸಿಗಳು ಯಾವುದೇ ಅಪರಾಧ ಕೇಸ್ಗಳಲ್ಲಿ ಭಾಗಿಯಾಗಿಲ್ಲ. ಸಮಾಜದಲ್ಲಿ ಗೌರವ ಹಾಗೂ ಹೆಮ್ಮೆಯಿಂದ ಬದುಕುತ್ತಿದ್ದೇವೆ ಎಂದಿರುವ ಜುಬೇರ್ ಅಹ್ಮದ್, 12 ವರ್ಷಗಳಿಂದ ಆರ್ಎಸ್ಎಸ್ನ ಕಾರ್ಯಕರ್ತರಾಗಿದ್ದಾರೆ.
ಸರಸ್ವತಿ ವಿದ್ಯಾ ಮಂದಿರದ 10ನೇ ತರಗತಿಯ ಜನೀಸರ್ ಅನ್ಸಾರಿಯ ಖರ್ಚು-ವೆಚ್ಚವನ್ನು ಸಿದ್ಧಿನಾಥ್ ಸಿಂಗ್ ಅವರೇ ಭರಿಸುತ್ತಿದ್ದು, ಐಐಟಿ ಮೂಲಕ ಗ್ರಾಮದ ಮೊದಲ ಎಂಜಿನಿಯರ್ ಆಗುವ ಕನಸು ಹೊತ್ತಿದ್ದಾನೆ.
ಜಮೀನ್ದಾರ ಲಾಲ್ ಮೊಹಮ್ಮದ್ ಅನ್ಸಾರಿ ಅವರ ಐವರು ಪುತ್ರರು ಕೂಡ ಸಿಂಗ್ ಅವರ ಶಿಷ್ಯರಾಗಿದ್ದು, ಭಾರತ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಹಲವರ ಅಭಿಪ್ರಾಯದ ನಡುವೆಯೂ ಧಾರ್ಮಿಕ ಸಾಮರಸ್ಯದೊಂದಿಗೆ ಬದುಕುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.