ಬಂಟ್ವಾಳ : ಬುಧವಾರ ನಡೆದ 2015 ನೇ ಸಾಲಿನ ಎಸ್.ಎಸ್.ಎಲ್.ಸಿ ಯ ಇಂಗ್ಲೀಷ್ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ 152 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ.
ತಾಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 6290 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಈ ಪೈಕಿ 6178 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ. ಗೈರುಹಾಜರಾದವರಲ್ಲಿ 110 ಗಂಡು ಹಾಗೂ 42 ಹೆಣ್ಣುಮಕ್ಕಳು ಸೇರಿದ್ದಾರೆ.
ತಾಲೂಕಿನ ಶಾರದಾ ಪ್ರೌಢಶಾಲೆ ಪಾಣೆಮಂಗಳೂರು , ಎಸ್.ಎಲ್.ಎನ್.ಪಿ ಪಾಣೆಮಂಗಳೂರು, ದೀಪಿಕಾ ಪ್ರೌಢಶಾಲೆ, ಮೊಡಂಕಾಪು, ಕಾರ್ಮೆಲ್ ಬಾಲಕಿಯರ ಪ್ರೌಢಶಾಲೆ, ಮೊಡಂಕಾಪು, ವಿಠಲ ಪ.ಪೂ.ಕಾಲೇಜು ವಿಟ್ಲ , ಎಸ್.ವಿಎಸ್ ಪ್ರೌಢಶಾಲೆ,ಬಂಟ್ವಾಳ, ಶ್ರೀಸತ್ಯಸಾಯಿ ಪ್ರೌಢಶಾಲೆ,ಅಳಿಕೆ, ಶ್ರೀರಾಮ ಪ್ರೌಢಶಾಲೆ,ಕಲ್ಲಡ್ಕ, ಸರಕಾರಿ ಪ.ಪೂ ಕಾಲೇಜು,ವಾಮದಪದವು , ಸರಕಾರಿ ಪ.ಪೂ ಕಾಲೇಜು,ಕುರ್ನಾಡು, ಕರ್ನಾಟಕ ಪ್ರೌಢಶಾಲೆ,ಮಾಣಿ , ತುಂಬೆ ಪ.ಪೂ.ಕಾಲೇಜು,ತುಂಬೆ , ಸರಕಾರಿ ಪ.ಪೂ ಕಾಲೇಜು,ಕನ್ಯಾನ, ಸರಕಾರಿ ಪ.ಪೂ ಕಾಲೇಜು,ವಗ್ಗ , ಸರಕಾರಿ ಪ.ಪೂ ಕಾಲೇಜು,ಮೊಂಟೆಪದವು ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.